'ನಮಸ್ಕಾರ, ಪವಿತ್ರ ಭೂಮಿ ಭಾರತಕ್ಕೆ ನಿಮಗೆ ಸ್ವಾಗತ': ಜಿ20 ಗಣ್ಯರನ್ನು ಭಾರತೀಯ ಶೈಲಿಯಲ್ಲಿ ಸ್ವಾಗತಿಸಲು ಸಚಿವರು ಸಜ್ಜು

“ನಮಸ್ಕಾರ! ಪವಿತ್ರ ಭೂಮಿ ಭಾರತಕ್ಕೆ ನಿಮಗೆ ಸ್ವಾಗತ, ಇದು ಅಪ್ಪಟ ಭಾರತೀಯ ಸಂಸ್ಕೃತಿಯಲ್ಲಿ ಜಿ20 ಶೃಂಗಸಭೆಗೆ ಆಗಮಿಸುವ ವಿದೇಶದ ಅತಿ ಗಣ್ಯರು ಮತ್ತು ಗಣ್ಯರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದ 17 ಸಚಿವರು ಸ್ವಾಗತಿಸುವ ರೀತಿ.
ದೆಹಲಿಯ ಪ್ರಗತಿ ಮೈದಾನದ ಹೊರಗೆ G20 ಶೃಂಗಸಭೆಯ ಲೋಗೋದ ಕಟ್ ಟ್
ದೆಹಲಿಯ ಪ್ರಗತಿ ಮೈದಾನದ ಹೊರಗೆ G20 ಶೃಂಗಸಭೆಯ ಲೋಗೋದ ಕಟ್ ಟ್

ನವ ದೆಹಲಿ: “ನಮಸ್ಕಾರ! ಪವಿತ್ರ ಭೂಮಿ ಭಾರತಕ್ಕೆ ನಿಮಗೆ ಸ್ವಾಗತ, ಇದು ಅಪ್ಪಟ ಭಾರತೀಯ ಸಂಸ್ಕೃತಿಯಲ್ಲಿ ಜಿ20 ಶೃಂಗಸಭೆಗೆ(G20 summit) ಆಗಮಿಸುವ ವಿದೇಶದ ಅತಿ ಗಣ್ಯರು ಮತ್ತು ಗಣ್ಯರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದ 17 ಸಚಿವರು ಸ್ವಾಗತಿಸುವ ರೀತಿ.

ಗಣ್ಯರು ಆಗಮಿಸಿದ ನಂತರ ಸಾಂಪ್ರದಾಯಿಕವಾಗಿ ಭಾರತದ ಶೈಲಿಯಲ್ಲಿ ವಂದನೆ ಸಲ್ಲಿಸಿ ಅತಿಥಿಗಳನ್ನು ಸ್ವಾಗತಿಸುವ "ಹೃದಯ ಸ್ಪರ್ಶಿ" ಘಟನೆಗೆ ಸಾಕ್ಷಿಯಾಗಲು ದೆಹಲಿ ಸಜ್ಜಾಗಿದೆ.

ಜಿ20 ಶೃಂಗಸಭೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ನಿಯೋಜಿತವಾಗಿರುವ ಸಚಿವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ, “ಭಾರತ ತನ್ನ ಸಮ್ಮೋಹನಗೊಳಿಸುವ ಸಾಂಸ್ಕೃತಿಕ ವೈವಿಧ್ಯತೆಯ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಜಿ20 ಶೃಂಗಸಭೆಗೆ ವಿದೇಶದ ಪ್ರತಿನಿಧಿಗಳನ್ನು ಸ್ವೀಕರಿಸುವಾಗ ಗರಿಷ್ಠ ಮಟ್ಟದ ಸೌಜನ್ಯ ಮತ್ತು ನಮ್ರತೆಯನ್ನು ತೋರಿಸಲು ಸಚಿವರುಗಳಿಗೆ ಸೂಚನೆ ನೀಡಲಾಗಿದೆ'' ಎನ್ನುತ್ತಾರೆ.

ಶಿಷ್ಟಾಚಾರದ ಮಟ್ಟದಲ್ಲಿ, ಗಣ್ಯರನ್ನು ಸ್ವೀಕರಿಸುವ ಮಂತ್ರಿಗಳು ಅತಿಥಿಗಳನ್ನು ಸ್ವೀಕರಿಸುವಾಗ ಅಥವಾ ಅವರನ್ನು ಕಂಡು ಬರಮಾಡಿಕೊಳ್ಳುವಾಗ ಏನು ಹೇಳಬೇಕು, ನಂತರ ಅವರನ್ನು ಹೇಗೆ ಕರೆದೊಯ್ಯಬೇಕು ಎಂಬುದರ ಕುರಿತು ವಿವರಿಸಲಾಗಿದೆ. ಮಂತ್ರಿಗಳು ಪ್ರತಿನಿಧಿಗಳನ್ನು ದೇಶದ ಸಾಂಪ್ರದಾಯಿಕ ಶಾಲು ಅಥವಾ ತಾಜಾ ಹೂವುಗಳ ಗೊಂಚಲುಗಳೊಂದಿಗೆ ಸ್ವಾಗತಿಸುತ್ತಾರೆ. ಒಟ್ಟಾರೆಯಾಗಿ ಬಂದ ಅತಿಥಿಗಳಿಗೆ, ಗಣ್ಯರಿಗೆ ಭಾರತತನ, ವಿಶಿಷ್ಠತೆ ಎದ್ದು ಕಾಣಬೇಕೆಂದು ತೋರಿಸುವಂತೆ ಸೂಚನೆ ನೀಡಲಾಗಿದೆ.

ಉಡುಪು, ಅಲಂಕಾರ: ಸಚಿವರುಗಳ ಉಡುಪುಗಳು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಕೆಲವು ಮಂತ್ರಿಗಳು ಪಾಶ್ಚಾತ್ಯ ಉಡುಪಿನಲ್ಲಿ ಇರುತ್ತಾರೆ -ಬಣ್ಣ ಹೊಂದುವ ಶರ್ಟ್ ಮತ್ತು ಟೈ ಹೊಂದಿರುವ ಪ್ಯಾಂಟ್ ಗಳನ್ನು ಧರಿಸುತ್ತಾರೆ. ಶುಭಾಶಯ ಹೇಳುವಾಗ, ಭಾರತದ ಕಡೆಯವರು ಇನ್ನೊಂದು ಕಡೆಯ ಸಾಂಸ್ಕೃತಿಕ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ.

ಖಾದ್ಯಗಳೇನು: ಜಿ20 ಶೃಂಗಸಭೆಗೆ ಬರುವ ಅತಿಥಿಗಳಿಗೆ ಆತಿಥ್ಯಕ್ಕೆ ಹೆಸರಾಗಿರುವ ಭಾರತ ದೇಶದಲ್ಲಿ ಖಾದ್ಯಗಳಿಗೆ ಸಹ ವಿಶೇಷ ಒತ್ತು ನೀಡಲಾಗಿದೆ. ಖಾದ್ಯಗಳು ಪ್ರಮುಖವಾಗಿ ಬೆಳ್ಳಿ ಮತ್ತು ಚಿನ್ನದ ಲೇಪಿತ ಟೇಬಲ್‌ವೇರ್‌ನಲ್ಲಿ ಬಡಿಸಲು ಸಜ್ಜುಗೊಳಿಸಲಾಗಿದೆ. ಸರ್ಕಾರಿ ಔತಣಕೂಟ ಎಂದ ಮೇಲೆ ಸಿರಿಧಾನ್ಯಗಳಿಗೆ ಒತ್ತು ನೀಡುವ ಕೇಂದ್ರ ಸರ್ಕಾರ, ರಾಗಿಯೊಂದಿಗೆ ಬೇಯಿಸಿದ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ. ವಿವಿಧ ರಾಜ್ಯಗಳಿಂದ ಸುಮಾರು 1,550 ಬೆಳ್ಳಿ-ಚಿನ್ನ ಲೇಪಿತ ಟೇಬಲ್‌ವೇರ್ ತರಿಸಲಾಗಿದೆ. ಭಕ್ಷ್ಯಗಳನ್ನು ಬಡಿಸಲು ಸಾಲ್ವರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಪ್ರತಿನಿಧಿಗಳು ವಿಮಾನದ ಮೆಟ್ಟಿಲುಗಳಿಂದ ಹೊರಬಂದ ಕೂಡಲೇ, ಮಂತ್ರಿಗಳು, ಇತರ ಅಧಿಕಾರಿಗಳೊಂದಿಗೆ, ಅವರನ್ನು ಹಿಂದಿ ಅಥವಾ ಇಂಗ್ಲಿಷ್ ಅಥವಾ ಪ್ರತಿನಿಧಿಯ ಸ್ಥಳೀಯ ಭಾಷೆಯಲ್ಲಿ ಸ್ವಾಗತಿಸುತ್ತಾರೆ.

ಅತಿಥಿಗಳನ್ನು ಸ್ವಾಗತಿಸುವ ಹೆಚ್ಚಿನ ಮಂತ್ರಿಗಳು ರಾಜ್ಯ ಮಂತ್ರಿಗಳು (MoS)ಗಳಾಗಿರುತ್ತಾರೆ. ಪಾಲಂ ವಿಮಾನ ನಿಲ್ದಾಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಮಾಜಿ ಸೇನಾ ಮುಖ್ಯಸ್ಥ ಮತ್ತು ಕೇಂದ್ರ ಇಲಾಖೆ ರಾಜ್ಯ ಸಚಿವ ವಿಕೆ ಸಿಂಗ್ ಅವರಿಗೆ ವಹಿಸಲಾಗಿದೆ. ಅವರ ಜೊತೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಇರುತ್ತಾರೆ. 

ವಿ ಕೆ ಸಿಂಗ್ ಅವರೇ, ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಸಹ ಸ್ವಾಗತಿಸಲಿದ್ದಾರೆ. ಭಾರತೀಯ ಮೂಲ ಹೊಂದಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು MoS ಅಶ್ವಿನಿ ಕುಮಾರ್ ಚೌಬೆ ಅವರು ಸ್ವಾಗತಿಸುತ್ತಾರೆ. ಅವರು ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ಸಹ ಸ್ವೀಕರಿಸಲಿದ್ದಾರೆ.

ರೈಲ್ವೇ ಸಚಿವ ದರ್ಶನಾ ಜರ್ದೋಶ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಬರಮಾಡಿಕೊಳ್ಳಲಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಸಚಿವೆ ಶೋಭಾ ಕರಂದ್ಲಾಜೆ ಅವರು ಬರಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಯುಎಇಯ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲಿದ್ದಾರೆ. ಸಚಿವ ರಾಜೀವ್ ಚಂದ್ರಶೇಖರ್ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ಕೇಂದ್ರ ಇಲಾಖೆ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಸ್ವಾಗತಿಸಲಿದ್ದಾರೆ ಮತ್ತು ಸಚಿವ ಅನುಪ್ರಿಯಾ ಪಟೇಲ್ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಸ್ವಾಗತಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com