ದೇಶ ಒಡೆಯುವ ಅಜೆಂಡಾ ನಡೆಸುವವರು ಹಿಂದೂ ಧರ್ಮದ ಅಂತ್ಯದ ಬಗ್ಗೆ ಮಾತನಾಡುತ್ತಿದ್ದಾರೆ: ರಾಜ್ಯಪಾಲ ರವಿ
ಸನಾತನ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕರು ನೀಡಿರುವ ಹೇಳಿಕೆಗಳ ವಿರುದ್ಧ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸಂವಿಧಾನ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ. ಆದರೆ ದೇಶ ಒಡೆಯಲು ಹೊರಟಿರುವವರು ಮಾತ್ರ ಹಿಂದೂ ಧರ್ಮದ ನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
Published: 18th September 2023 07:46 PM | Last Updated: 18th September 2023 07:49 PM | A+A A-

ರಾಜ್ಯಪಾಲ ಆರ್ ಎನ್ ರವಿ
ಚೆನ್ನೈ: ಸನಾತನ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕರು ನೀಡಿರುವ ಹೇಳಿಕೆಗಳ ವಿರುದ್ಧ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸಂವಿಧಾನ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ. ಆದರೆ ದೇಶ ಒಡೆಯಲು ಹೊರಟಿರುವವರು ಮಾತ್ರ ಹಿಂದೂ ಧರ್ಮದ ನಾಶದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಜಾತ್ಯತೀತತೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರ್.ಎನ್ ರವಿ ಹೇಳಿದ್ದಾರೆ. ಜಾತ್ಯತೀತತೆಯ ನಿಜವಾದ ಅರ್ಥವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಹಿಂದೂ ಧರ್ಮವನ್ನು ನಾಶಪಡಿಸುವ ಬಗ್ಗೆ ಮಾತನಾಡುವವರು ಶತ್ರು ವಿದೇಶಿ ಶಕ್ತಿಗಳ ಸಹಯೋಗದಲ್ಲಿ ಈ ದೇಶವನ್ನು ಒಡೆಯುವ ಅಜೆಂಡಾವನ್ನು ಹೊಂದಿದ್ದಾರೆ ಎಂದು ರಾಜ್ಯಪಾಲರು ಹೇಳಿದರು. ಆದಾಗ್ಯೂ, ಈ ಜನರು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದರು.
ದುರದೃಷ್ಟವಶಾತ್ ನಮ್ಮ ಸಮಾಜದಲ್ಲಿ ಸಾಮಾಜಿಕ ತಾರತಮ್ಯವಿದೆ. ಸಮಾಜದ ಅನೇಕ ವರ್ಗಗಳಲ್ಲಿ ತಾರತಮ್ಯವಿದೆ. ಆದರೆ ಹಿಂದೂ ಧರ್ಮವು ಹಾಗೆ ಮಾಡಲು ಕೇಳುವುದಿಲ್ಲ. ಇದೊಂದು ಸಾಮಾಜಿಕ ಪಿಡುಗು ಇದನ್ನು ಹೋಗಲಾಡಿಸಬೇಕು. ತಮಿಳುನಾಡಿನಲ್ಲಿ ಇಂದಿಗೂ ಸಾಮಾಜಿಕ ತಾರತಮ್ಯ ದೊಡ್ಡ ಸಮಸ್ಯೆಯಾಗಿದೆ. ಪ್ರತಿದಿನ ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡುತ್ತಿಲ್ಲ ಎಂಬ ವರದಿಗಳು ಕೇಳಿ ಬರುತ್ತಿವೆ ಎಂದರು.
ಇದನ್ನೂ ಓದಿ: ಸನಾತನ ಧರ್ಮ ವಿವಾದ ಪಕ್ಷಕ್ಕೆ ಹಾನಿಕರ, ಜನಸಾಮಾನ್ಯರ ವಿಷಯ ಪ್ರಸ್ತಾಪಿಸಿ: ಕಾಂಗ್ರೆಸ್ ನಾಯಕರು
ರಾಜ್ಯಪಾಲರ ಹೇಳಿಕೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕೂಡ ಪ್ರತಿಕ್ರಿಯೆ ನೀಡಿದೆ. ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಪಕ್ಷ, ರಾಜ್ಯಪಾಲರಿಗೆ ಡಿಎಂಕೆ ಅಭಿವೃದ್ಧಿ ಮಾದರಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದೆ.
ಸನಾತನ ಸಂಸ್ಥೆಗೆ ಸಂಬಂಧಿಸಿದಂತೆ ಸಿಎಂ ಎಸ್‌ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಡೆಂಗ್ಯೂ ಮತ್ತು ಕರೋನಾದಂತೆ ಸನಾತನ ಸಂಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು.