ರಾಜಸ್ತಾನದ ಮತ್ತೊಬ್ಬ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ಆತ್ಮಹತ್ಯೆ: ಕೋಟಾದಲ್ಲಿ ಈ ವರ್ಷ ಇದು 26ನೇ ಪ್ರಕರಣ!
ಉತ್ತರ ಪ್ರದೇಶದ 16 ವರ್ಷದ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ರಾಜಸ್ತಾನದ ಕೋಟ ಜಿಲ್ಲೆಯ ವಿಜ್ಞಾನ ನಗರ ಪ್ರದೇಶದ ತನ್ನ ಹಾಸ್ಟೆಲ್ ಕೋಣೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ.
Published: 20th September 2023 09:49 AM | Last Updated: 20th September 2023 01:36 PM | A+A A-

ಸಾಂದರ್ಭಿಕ ಚಿತ್ರ
ಕೋಟ(ರಾಜಸ್ತಾನ): ಉತ್ತರ ಪ್ರದೇಶದ 16 ವರ್ಷದ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ರಾಜಸ್ತಾನದ ಕೋಟ ಜಿಲ್ಲೆಯ ವಿಜ್ಞಾನ ನಗರ ಪ್ರದೇಶದ ತನ್ನ ಹಾಸ್ಟೆಲ್ ಕೋಣೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೂರು ಗಂಟೆಗಳ ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮವು ನಿವಾಸಿಯಾಗಿರುವ 12 ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಸ್ ಸಿಂಗ್ ಆಗಿದ್ದು, ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ NEET-UG ಗೆ ತಯಾರಿ ನಡೆಸುತ್ತಿದ್ದರು. ಇಲ್ಲಿನ ವಿಜ್ಞಾನನಗರ ಪ್ರದೇಶದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಡಿಎಸ್‌ಪಿ ಧರಂವೀರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: 'ಅವರೇ ಬೇರೆಯವರನ್ನು ಖಿನ್ನತೆಗೆ ತಳ್ಳುತ್ತಾರೆ, ಎಲ್ಲಾ ನಾಟಕವಷ್ಟೇ': ಕೋಟಾದ ಜೆಇಇ ಮತ್ತು ನೀಟ್ ವಿದ್ಯಾರ್ಥಿಗಳ ಪೋಷಕರ ನಿರ್ಲಕ್ಷ್ಯ!
ಸೋಮವಾರ ಮಧ್ಯಾಹ್ನ ವಿದ್ಯಾರ್ಥಿನಿ ತನ್ನ ಕೋಣೆಯಲ್ಲಿ ವಿಷಕಾರಿ ಪದಾರ್ಥ ಸೇವಿಸಿದ್ದಾರೆ. ಆಕೆ ವಾಂತಿ ಮಾಡಿಕೊಳ್ಳಲು ಆರಂಭಿಸಿದಾಗ ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಡಿಎಸ್‌ಪಿ ತಿಳಿಸಿದ್ದಾರೆ. ಸಂಜೆ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ವರ್ಷ ಕೋಟಾದಲ್ಲಿ ಕೋಚಿಂಗ್‍ಗೆ ಆಗಮಿಸಿದ ವಿದ್ಯಾರ್ಥಿಗಳು ಸಾವಿಗೆ ಶರಣಾದ 26ನೇ ಪ್ರಕರಣ ಇದಾಗಿದೆ. ಈ ತಿಂಗಳು ಆತ್ಮಹತ್ಯೆ ಮಾಡಿಕೊಂಡ ಎರಡನೇ ವಿದ್ಯಾರ್ಥಿನಿ ಈಕೆ. ಆಗಸ್ಟ್ ನಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು.