ಡ್ರಗ್ಸ್‌ ಪ್ರಕರಣ;‌ ಕಾಂಗ್ರೆಸ್‌ ಶಾಸಕ ಸುಖಪಾಲ್‌ ಖೈರಾ ಬಂಧನ

2015ರ ಡ್ರಗ್ಸ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಸುಖಪಾಲ್‌ ಸಿಂಗ್ ಖೈರಾ ಅವರನ್ನು ಪಂಜಾಬ್ ರಾಜ್ಯ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಕಾಂಗ್ರೆಸ್‌ ಶಾಸಕ ಸುಖಪಾಲ್‌ ಖೈರಾ
ಕಾಂಗ್ರೆಸ್‌ ಶಾಸಕ ಸುಖಪಾಲ್‌ ಖೈರಾ
Updated on

ಚಂಡೀಗಢ: 2015ರ ಡ್ರಗ್ಸ್‌ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಸುಖಪಾಲ್‌ ಸಿಂಗ್ ಖೈರಾ ಅವರನ್ನು ಪಂಜಾಬ್ ರಾಜ್ಯ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ನಾರ್ಕೊಟಿಕ್ಸ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರಾಪಿಕ್‌ ಸಬ್‌ಸ್ಟನ್ಸಸ್‌ ಆ್ಯಕ್ಟ್‌ ಅಡಿಯಲ್ಲಿ ಸುಖಪಾಲ್‌ ಖೈರಾ ಅವರನ್ನು ಜಲಾಲಬಾದ್‌ ಪೊಲೀಸರು ಇಂದು ಬೆಳಗ್ಗೆ (ಸೆಪ್ಟೆಂಬರ್‌ 28) 6.30ರ ಸುಮಾರಿಗೆ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಚಂಡೀಗಢದಲ್ಲಿರುವ ನಿವಾಸದಲ್ಲಿ ಸುಖಪಾಲ್‌ ಖೈರಾ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದಜು, ಈ ವೇಳೆ ಭಾರೀ ಹೈಡ್ರಾಮಾ ನಡೆದಿದೆ.

ಬಂಧನಕ್ಕೂ ಮೊದಲು ಸುಖಪಾಲ್‌ ಖೈರಾ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಹಾಗೆಯೇ, ಬಂಧನದ ಘಟನೆಯನ್ನು ಫೇಸ್‌ಬುಕ್‌ ಲೈವ್ ಮೂಲಕ ಜನರಿಗೆ ತೋರಿಸಿದ್ದಾರೆ.

ಅಕ್ರಮವಾಗಿ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಸುಖಪಾಲ್‌ ಖೈರಾ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಸುಖಪಾಲ್‌ ಸಿಂಗ್‌ ಖೈರಾ ಅವರನ್ನು 2021ರಲ್ಲೂ ಬಂಧನಕ್ಕೊಳಪಡಿಸಲಾಗಿತ್ತು. ಅಕ್ರಮವಾಗಿ ಮಾದಕವಸ್ತು ಸಾಗಣೆ, ಮಾದಕವಸ್ತು ದಂಧೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಖಪಾಲ್‌ ಸಿಂಗ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ನಡುವೆ ನಕಲಿ ಪಾಸ್‌ಪೋರ್ಟ್‌ ಪ್ರಕರಣವೂ ಸುಖಪಾಲ್‌ ಖೈರಾ ವಿರುದ್ಧ ಕೇಳಿಬಂದಿತ್ತು.

ರಾಜಕೀಯ ಸೇಡಿಗಾಗಿ ಬಂಧನ
ಈ ನಡುವೆ ಸುಖಪಾಲ್‌ ಖೈರಾ ಅವರ ಬಂಧನವನ್ನು ಪಂಜಾಬ್ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಾಜಕೀಯ ಸೇಡಿಗಾಗಿ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾ ಅವರನ್ನು ಬಂಧಿಸಲಾಗಿದೆ, ಇದು ಪ್ರತಿಪಕ್ಷಗಳನ್ನು ಬೆದರಿಸುವ ಪ್ರಯತ್ನವಾಗಿದೆ ಮತ್ತು ಪ್ರಮುಖ ವಿಷಯಗಳಿಂದ ಗಮನವನ್ನು ಸೆಳೆಯಲು ಎಎಪಿ ಸರ್ಕಾರ ನಡೆಸಿರುವ ತಂತ್ರವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com