ಪಾಕ್, ಚೀನಾ ಗಡಿಗಳಲ್ಲಿ ನಿಯೋಜಿಸಲು 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಖರೀದಿಗೆ ಐಎಎಫ್ ಮುಂದು
ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಭಾರತೀಯ ವಾಯುಪಡೆ (ಐಎಎಫ್) 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಮುಂದಾಗಿದೆ.
Published: 30th September 2023 01:00 AM | Last Updated: 30th September 2023 02:13 PM | A+A A-

ಐಎಎಫ್ ಹೆಲಿಕಾಪ್ಟರ್
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಲು ಭಾರತೀಯ ವಾಯುಪಡೆ (ಐಎಎಫ್) 156 ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಮುಂದಾಗಿದೆ.
ಐಎಎಫ್ ಪ್ರಚಂಡ ಹೆಲಿಕಾಫ್ಟರ್ ಗಳ ಖರೀದಿಗೆ ಹೆಚ್ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಪ್ರಚಂಡ ಲಘು ಯುದ್ಧ ಹೆಲಿಕಾಫ್ಟರ್ ಗಳನ್ನು ಚೀನಾ-ಪಾಕ್ ಗಡಿ ಭಾಗಗಳಲ್ಲಿ ನಿಯೋಜಿಸುವ ಪ್ರಸ್ತಾವನೆ ಇದೆ.
ಭಾರತೀಯ ಸೇನೆ ಹಾಗೂ ವಾಯುಪಡೆಗಳು ಈಗಾಗಲೇ 15 ಪ್ರಚಂಡ ಹೆಲಿಕಾಫ್ಟರ್ ಗಳನ್ನು ಖರೀದಿಸಿದೆ. ಇದಕ್ಕೂ ಮುನ್ನ ತೀವ್ರ ಪರಿಸ್ಥಿತಿಗಳಲ್ಲಿ ಹೆಲಿಕಾಫ್ಟರ್ ಗಳನ್ನು ಪರೀಕ್ಷಿಸಲಾಗಿದೆ.
ಇದನ್ನೂ ಓದಿ: 12 ಹೊಸ ಸುಖೋಯ್ ಫೈಟರ್ ಸೇರಿದಂತೆ 45 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ
ಭಾರತೀಯ ವಾಯುಪಡೆ ಈಗ 156 ಪ್ರಚಂಡ ಹೆಲಿಕಾಫ್ಟರ್ ಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರವೇ ಅದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂಬುದನ್ನು ಹಿರಿಯ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸ್ವದೇಶೀಕರಣವನ್ನು ಉತ್ತೇಜಿಸಲು ಸುಮಾರು 100 ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಮಾರ್ಕ್ 1A ಅನ್ನು ಖರೀದಿಸುವ ಉದ್ದೇಶದ ಬಗ್ಗೆ ಘೋಷಿಸಿದ್ದರು.