ನಿಮ್ಮ ಮನೆಯ ಹೆಸರನ್ನು ನಾನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ?: ಚೀನಾಗೆ Jaishankar ಗುದ್ದು!

ನಿಮ್ಮ ಮನೆಯ ಹೆಸರನ್ನು ನಾನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಎಂದು ಹೇಳುವ ಮೂಲಕ ಅರುಣಾಚಲ ಪ್ರದೇಶ (Arunachal Pradesh) ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಗೆ (China) ಭಾರತ ಭರ್ಜರಿಯಾಗಿ ತಿರುಗೇಟು ನೀಡಿದೆ.
ವಿದೇಶಾಂಗ ಸಚಿವ ಎಸ್ ಜೈ ಶಂಕರ್
ವಿದೇಶಾಂಗ ಸಚಿವ ಎಸ್ ಜೈ ಶಂಕರ್

ನವದೆಹಲಿ: ನಿಮ್ಮ ಮನೆಯ ಹೆಸರನ್ನು ನಾನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಎಂದು ಹೇಳುವ ಮೂಲಕ ಅರುಣಾಚಲ ಪ್ರದೇಶ (Arunachal Pradesh) ವಿಚಾರವಾಗಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಗೆ (China) ಭಾರತ ಭರ್ಜರಿಯಾಗಿ ತಿರುಗೇಟು ನೀಡಿದೆ.

ಅರುಣಾಚಲ ಪ್ರದೇಶಕ್ಕೆ ಬೇರೆ ಹೆಸರು ಇಟ್ಟು ಹಕ್ಕು ಸಾಧಿಸುತ್ತಿರುವ ಚೀನಾದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್, 'ನಿಮ್ಮ ಮನೆಗೆ ನಾವು ಬೇರೆ ಹೆಸರಿಟ್ಟ ಮಾತ್ರಕ್ಕೆ ಅದು ನಮ್ಮದಾಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ ಚೀನೀ ಹೆಸರು 'ಝಂಗ್ನಾನ್' ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯಾಗಿ ಪ್ರದೇಶಕ್ಕೆ 30 ಹೆಚ್ಚುವರಿ ಹೆಸರುಗಳನ್ನು ಬಿಡುಗಡೆ ಮಾಡಿತ್ತು. ಚೀನಾವು ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆಯುತ್ತಿದೆ ಮತ್ತು ಈ 90,000 ಚದರ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕು ಸಾಧಿಸುತ್ತಿದೆ, ಭಾರತವು ಯಾವಾಗಲೂ ಈ ಭಾಗವನ್ನು ದೇಶದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸುತ್ತಿದೆ.

ವಿದೇಶಾಂಗ ಸಚಿವ ಎಸ್ ಜೈ ಶಂಕರ್
ಅರುಣಾಚಲ ಪ್ರದೇಶದ ಮೇಲೆ ಚೀನಾ ಮತ್ತೆ ಹಕ್ಕು ಪ್ರತಿಪಾದನೆ!

ಇದೇ ವಿಚಾರವಾಗಿ ಗುಜರಾತ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಜೈಶಂಕರ್, 'ಇಂದು ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿದೆ, ಮತ್ತು ಯಾವಾಗಲೂ ಭಾರತದ ಅವಿಭಾಜ್ಯವಾಗಿಯೇ ಇರುತ್ತದೆ. ಹೆಸರುಗಳನ್ನು ಬದಲಾಯಿಸುವುದರಿಂದ ಪರಿಣಾಮ ಬೀರುವುದಿಲ್ಲ. ಭಾರತೀಯ ಸೇನೆಯನ್ನು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ನಿಯೋಜಿಸಲಾಗಿದೆ ಎಂದು ಅವರು ಚೀನಾಗೆ ತಿರುಗೇಟು ನೀಡಿದರು.

ಹೆಸರು ಬದಲಿಸುವುದರಿಂದ ಏನೂ ಆಗಲ್ಲ

ಗುಜರಾತ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಿಮ್ಮ ಮನೆಯ ಹೆಸರನ್ನು ನಾನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿದೆ. ಹೆಸರುಗಳನ್ನು ಬದಲಾಯಿಸುವುದರಿಂದ ಏನೂ ಬದಲಾಗಲ್ಲ. ನಮ್ಮ ಸೈನ್ಯವನ್ನು ವಾಸ್ತವ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಹೆಸರು ಬದಲಿಸಿ ಚೀನಾ ಕಿರಿಕ್​

ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಭಾನುವಾರ ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸ್ಥಳಗಳನ್ನು ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸುತ್ತಿದೆ. ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸುತ್ತಿದೆ.

ವಿದೇಶಾಂಗ ಸಚಿವ ಎಸ್ ಜೈ ಶಂಕರ್
ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ: ಮತ್ತೆ ಕ್ಯಾತೆ ತೆಗೆದ ಚೀನಾ

ಮೋದಿ ಭೇಟಿ: ಮತ್ತೆ ಚೀನಾ ಕ್ಯಾತೆ

ಈ ಹಿಂದೆ ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿಯನ್ನು ಚೀನಾ ವಿರೋಧಿಸಿತ್ತು. ಈ ಮೂಲಕ ಗಡಿ ಪ್ರದೇಶದ ರಾಜ್ಯದ ಮೇಲೆ ತನ್ನ ಹಕ್ಕಿದೆ ಎಂಬುದನ್ನು ಪುನರುಚ್ಚರಿಸಿದ್ದು, ಭಾರತದ ನಡೆ ಗಡಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆಯಷ್ಟೇ ಎಂಬ ಉದ್ಧಟತನದ ಹೇಳಿಕೆ ನೀಡಿತ್ತು. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಹೇಳುವ ಚೀನಾ ಭಾರತದ ಯಾವುದೇ ನಾಯಕ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತದೆ. ಅರುಣಾಚಲ ಪ್ರದೇಶಕ್ಕೆ ಚೀನಾ ತನ್ನದೇ ಆದ ನಾಮಕರಣ ಮಾಡಿದ್ದು ಝಂಗ್ನಾನ್ ಎಂಬ ಹೆಸರನ್ನು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com