ಅರುಣಾಚಲ ಪ್ರದೇಶದ ಮೇಲೆ ಚೀನಾ ಮತ್ತೆ ಹಕ್ಕು ಪ್ರತಿಪಾದನೆ!

ಚೀನಾ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆಯನ್ನು ಮುಂದುವರೆಸಿದೆ.
ಚೀನಾ-ಭಾರತ
ಚೀನಾ-ಭಾರತ

ನವದೆಹಲಿ: ಚೀನಾ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆಯನ್ನು ಮುಂದುವರೆಸಿದೆ. ಭಾರತ ಚೀನಾದ ಪ್ರತಿಪಾದನೆಯನ್ನು ಅಸಂಬದ್ಧ ಮತ್ತು ಹಾಸ್ಯಾಸ್ಪದ ಎಂದು ಹೇಳಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಚೀನಾದ ಪ್ರತಿಪಾದನೆಯನ್ನು ಪುನರುಚ್ಚರಿಸಿದ್ದಾರೆ. ಅರುಣಾಚಲ ಪ್ರದೇಶವನ್ನು ಭಾರತದ ಸ್ವಾಭಾವಿಕ ಭಾಗ ಎಂದು ಹೇಳಿದ್ದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಹೇಳಿಕೆಗೆ ಚೀನಾ ವಿದೇಶಾಂಗ ಸಚಿವರು ಪ್ರತಿಕ್ರಿಯೆ ನೀಡುತ್ತಿದ್ದರು.

"ಇದು ಹೊಸ ವಿಷಯವಲ್ಲ. ಅಂದರೆ ಚೀನಾ ಹಕ್ಕು ಮಂಡಿಸಿದೆ, ಅದು ತನ್ನ ಹಕ್ಕನ್ನು ವಿಸ್ತರಿಸಿದೆ. ಹಕ್ಕುಗಳು ಪ್ರಾರಂಭವಾಗಿದ್ದು ಮತ್ತು ಇಂದಿನ ಪ್ರತಿಪಾದನೆ ಹಾಸ್ಯಾಸ್ಪದವಾಗಿದೆ" ಎಂದು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ (NUS) ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್ (ISAS) ನಲ್ಲಿ ಉಪನ್ಯಾಸ ನೀಡಿದ್ದ ನಂತರ ಅರುಣಾಚಲ ಸಮಸ್ಯೆಯ ಪ್ರಶ್ನೆಗೆ ಜೈಶಂಕರ್ ಪ್ರತಿಕ್ರಿಯಿಸಿದ್ದರು.

ಚೀನಾ-ಭಾರತ
ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ

ಜೈಶಂಕರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಲಿನ್, ಭಾರತ ಮತ್ತು ಚೀನಾ ನಡುವಿನ ಗಡಿಯನ್ನು ಎಂದಿಗೂ ಇತ್ಯರ್ಥಪಡಿಸಲಾಗಿಲ್ಲ ಎಂದು ಹೇಳಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಚೀನಾದ ಅಧಿಕೃತ ಹೆಸರು ಜಂಗ್ನಾನ್, ಭಾರತವು "ಕಾನೂನುಬಾಹಿರವಾಗಿ ಆಕ್ರಮಿಸಿಕೊಳ್ಳುವ" ಮೊದಲು ಯಾವಾಗಲೂ ಚೀನಾದ ಭಾಗವಾಗಿತ್ತು ಎಂದು ಲಿನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com