ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದು ಅಪ್ರಸ್ತುತ: 'ಮೋದಿ'ಗೆ ಪರ್ಯಾಯ ಯಾರು ಎಂಬ ಪ್ರಶ್ನೆಗೆ ತರೂರ್ ಪ್ರತಿಕ್ರಿಯೆ

ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬದು ಅಪ್ರಸ್ತುತ. ಅದರಲ್ಲೂ ನಮ್ಮದು ಪಕ್ಷಗಳ ಒಕ್ಕೂಟವಾಗಿರುವುದರಿಂದ ನಾವು ಯಾರೋ ಒಬ್ಬರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಶಶಿ ತರೂರ್
ಕಾಂಗ್ರೆಸ್ ಮುಖಂಡ ಶಶಿ ತರೂರ್

ನವದೆಹಲಿ: ಸಂಸದೀಯ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬದು ಅಪ್ರಸ್ತುತ. ಅದರಲ್ಲೂ ನಮ್ಮದು ಪಕ್ಷಗಳ ಒಕ್ಕೂಟವಾಗಿರುವುದರಿಂದ ನಾವು ಯಾರೋ ಒಬ್ಬರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಬುಧವಾರ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಥವಾ ಪ್ರತಿಪಕ್ಷಗಳ ಇಂಡಿಯಾ ಒಕ್ಕುೂಟದಲ್ಲಿ ಪರ್ಯಾಯ ನಾಯಕನಾರು ಎಂಬ ಬಿಜೆಪಿಗರ ಪ್ರಶ್ನೆಗೆ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪತ್ರಕರ್ತನೊಬ್ಬನ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿರುವುದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶಶಿ ತರೂರ್
ಪ್ರತಿಪಕ್ಷಗಳ ಒಕ್ಕೂಟ I.N.D.I.A ಗೆ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಸ್ಪಷ್ಟತೆಯೇ ಇಲ್ಲ: ಹೆಚ್'ಡಿ.ದೇವೇಗೌಡ

ಪತ್ರಕರ್ತನೊಬ್ಬ ಮತ್ತೆ ನನಗೆ, ನಿಮ್ಮಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕನನ್ನಾಗಿ ಯಾರನ್ನು ಹೆಸರಿಸುತ್ತೀರಿ ಎಂಬ ಅದೇ ಹಳೇ ಪ್ರಶ್ನೆಯನ್ನು ಕೇಳಿದ. ಆದರೆ, ಸಂಸದೀಯ ವ್ಯವಸ್ಥೆಯಲ್ಲಿ ಈ ಪ್ರಶ್ನೆಯೇ ಅಪ್ರಸ್ತುತ. ನಾವು ಅಧ್ಯಕ್ಷೀಯ ಚುನಾವಣಾ ವ್ಯವಸ್ಥೆಯಲ್ಲಿರುವಂತೆ ಯಾರೋ ಒಬ್ಬರನ್ನು ಚುನಾಯಿಸುತ್ತಿಲ್ಲ. ನಮ್ಮದು ಒಂದು ಸಮೂಹ ತತ್ವ ಮತ್ತು ನಂಬಿಕೆಗಳನ್ನು ಪ್ರತಿನಿಧಿಸುವ, ಭಾರತದ ವಿವಿಧತೆ, ಬಹುತ್ವ ಮತ್ತು ಆಂತರಿಕ ಬೆಳವಣಿಗೆಯ ಮೌಲ್ಯಗಳ ರಕ್ಷಣೆಗೆ ಬದ್ಧವಾಗಿರುವ ಪಕ್ಷ ಅಥವಾ ಪಕ್ಷಗಳ ಒಕ್ಕೂಟವಾಗಿದೆ.

ಭಾರತದ ಜನರ ಸಮಸ್ಯೆಗಳಿಗೆ ಸಂದಿಸುವ ಮತ್ತು ವೈಯಕ್ತಿಕ ಅಹಂ ತೊರೆದ ನಮ್ಮ ಅನುಭವೀ, ಸಮರ್ಥ ಮತ್ತು ವಿವಿಧ ಭಾರತೀಯ ನಾಯಕರ ದೊಡ್ಡ ಗುಂಪು ಮೋದಿಗೆ ಪರ್ಯಾಯ ಎಂದು ಹೇಳಬಹುದು. ಪ್ರಧಾನಿಯ ಆಯ್ಕೆ ನಂತರದ ಪರಿಗಣನೆಯಾಗಿದ್ದು, ನಮ್ಮ ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆಯನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com