ಕೇಜ್ರಿವಾಲ್ ತೂಕ ಸ್ಥಿರವಾಗಿದೆ, 65 ಕೆಜಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ: ತಿಹಾರ್ ಅಧಿಕಾರಿಗಳು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಅವರ ತೂಕ ಕಡಿಮೆಯಾಗಿದೆ ಎಂಬ ಆಮ್ ಆದ್ಮಿ ಪಕ್ಷದ(ಎಎಪಿ) ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ತಿಹಾರ್ ಜೈಲು.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ಅವರ ತೂಕ ಕಡಿಮೆಯಾಗಿದೆ ಎಂಬ ಆಮ್ ಆದ್ಮಿ ಪಕ್ಷದ(ಎಎಪಿ) ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ತಿಹಾರ್ ಜೈಲು ಅಧಿಕಾರಿಗಳು, ಅವರ ತೂಕ(65 ಕೆಜಿ) ಸ್ಥಿರವಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಆದರೆ, ದೆಹಲಿ ಸಚಿವೆ ಅತಿಶಿ ಅವರು, ಜಾರಿ ನಿರ್ದೇಶನಾಲಯ(ಇಡಿ) ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ತೆಗೆದುಕೊಂಡ ದಿನ ಅವರ ತೂಕ 69.5 ಕೆಜಿ ಇತ್ತು ಎಂದು ಹೇಳಿದ್ದಾರೆ.

ತಿಹಾರ್ ಜೈಲಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಏಪ್ರಿಲ್ 1, 2024 ರಂದು ದೆಹಲಿ ಮುಖ್ಯಮಂತ್ರಿ ಜೈಲಿಗೆ ಆಗಮಿಸಿದಾಗ, ಇಬ್ಬರು ವೈದ್ಯರಿಂದ ಪರೀಕ್ಷಿಸಲಾಯಿತು.

ಅರವಿಂದ್ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್ ತೂಕ ಇಳಿಕೆ; ಅವರ ಆರೋಗ್ಯ ಅಪಾಯದಲ್ಲಿ: BJP ವಿರುದ್ಧ ಸಚಿವೆ ಅತಿಶಿ ಆರೋಪ

ಕೇಜ್ರಿವಾಲ್ ಅವರು ತಿಹಾರ್ ಜೈಲಿಗೆ ಆಗಮಿಸಿದ ನಂತರ ಅವರ ತೂಕ 65 ಕೆಜಿ ಇದ್ದು, ಸ್ಥಿರವಾಗಿದೆ. ತೂಕದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಲ್ಲಿಯವರೆಗೆ, ನ್ಯಾಯಾಲಯದ ಆದೇಶದ ಪ್ರಕಾರ ಮನೆಯಲ್ಲಿ ಬೇಯಿಸಿದ ಆಹಾರವನ್ನು ಅವರಿಗೆ ನೀಡಲಾಗುತ್ತಿದೆ ಮತ್ತು ಅವರ ಎಲ್ಲಾ ವೈದ್ಯಕೀಯ ಪರೀಕ್ಷೆಗಳು ಸಾಮಾನ್ಯವೆಂದು ಕಂಡುಬಂದಿವೆ ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕು ಮುನ್ನ ದೆಹಲಿ ಸಚಿವೆ ಅತಿಶಿ ಅವರು, "ತೀವ್ರ ಮಧುಮೇಹ" ದಿಂದ ಬಳಲುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಂಧನದ ನಂತರ 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕುವ ಮೂಲಕ ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com