‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರ ಮಾಡದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೂಚನೆ

ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದು, ವಿವಾದಾತ್ಮಕ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದಾರೆ.
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
Updated on

ತಿರುವನಂತಪುರಂ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದು, ವಿವಾದಾತ್ಮಕ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದಾರೆ.

ಲೋಕಸಭೆ ಚುನಾವಣೆ ನಡೆಯಲಿರುವ ಈ ಸಮಯದಲ್ಲಿ ಈ ಸಿನಿಮಾ ಪ್ರದರ್ಶನವು ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಪ್ರಚಾರ ಯಂತ್ರ ಆಗಬೇಡಿ. ಕೂಡಲೇ ಈ ಸಿನಿಮಾ ಪ್ರಸಾರದ ನಿರ್ಧಾರವನ್ನು ಹಿಂಪಡೆಯಿರಿ ಎಂದು ಅವರು ದೂರದರ್ಶನದ ರಾಷ್ಟ್ರೀಯ ಪ್ರಸಾರಕರನ್ನು ಕೇಳಿಕೊಂಡಿದ್ದಾರೆ.

'ಧ್ರುವೀಕರಣವನ್ನು ಪ್ರಚೋದಿಸುವ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರಸಾರ ಮಾಡುವ ಡಿಡಿ ನ್ಯಾಷನಲ್‌ನ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಇಂತಹ ಸಿನಿಮಾ ಪ್ರದರ್ಶನದ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು. ದ್ವೇಷ ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ಉಳಿಯುತ್ತದೆ' ಎಂದು ಪಿಣರಾಯಿ ವಿಜಯನ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಏಪ್ರಿಲ್ 5 ರಂದು ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರವಾಗಲಿದೆ ಎಂದು ದೂರದರ್ಶನ ಪ್ರಕಟಿಸಿದೆ.

ಆಡಳಿತಾರೂಢ ಸಿಪಿಐ(ಎಂ) ಸಹ ಸಿನಿಮಾ ಪ್ರಸಾರ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ದೂರದರ್ಶನಕ್ಕೆ ಸೂಚಿಸಿದೆ. ಜಾತ್ಯತೀತ ಕೇರಳ ಸಮಾಜವನ್ನು ಧ್ರುವೀಕರಿಸುವ ಬಿಜೆಪಿಯ ಪ್ರಯತ್ನದೊಂದಿಗೆ ನಿಲ್ಲದಂತೆ ಪಕ್ಷವು ಕೇಳಿಕೊಂಡಿದೆ.

ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
'ದಿ ಕೇರಳ ಸ್ಟೋರಿ' ತಡೆಗೆ ಕೇರಳ ಹೈಕೋರ್ಟ್ ನಕಾರ

ಕೇರಳ ಸಮಾಜದಲ್ಲಿ ಕೇಸರಿ ಪಕ್ಷಕ್ಕೆ ಕಾಲಿಡಲು ಸಾಧ್ಯವಾಗದ ಕಾರಣ ತಮ್ಮ ರಾಜಕೀಯ ಅಜೆಂಡಾವನ್ನು ಮುನ್ನಡೆಸುವ ಆಶಯದೊಂದಿಗೆ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ವಿವಾದಾತ್ಮಕ ಸಿನಿಮಾ ಪ್ರದರ್ಶಿಸಲು ಬಿಜೆಪಿ ನಿರ್ಧರಿಸಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಆರೋಪಿಸಿದ್ದಾರೆ.

ದಿ ಕೇರಳ ಸ್ಟೋರಿ ಚಿತ್ರದ ಪೋಸ್ಟರ್
ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂ. ಬಾಚಿದ 'ದಿ ಕೇರಳ ಸ್ಟೋರಿ'

'ಇದು ಕೇರಳಕ್ಕೆ ಸವಾಲೆಸೆದಂತಿದೆ. ಸಿನಿಮಾ ಬಿಡುಗಡೆಯಾದಾಗ ಕೇರಳದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಸೆನ್ಸಾರ್ ಮಂಡಳಿಯೇ ಚಲನಚಿತ್ರದಿಂದ 10 ದೃಶ್ಯಗಳನ್ನು ತೆಗೆದುಹಾಕಿದೆ. ಸಾರ್ವಜನಿಕ ವಲಯದ ಪ್ರಸಾರ ಸೇವೆಯು ಜಾತ್ಯತೀತ ಕೇರಳ ಸಮಾಜವನ್ನು ಧ್ರುವೀಕರಿಸುವ ಬಿಜೆಪಿಯ ಪ್ರಯತ್ನದೊಂದಿಗೆ ನಿಲ್ಲಬಾರದು' ಎಂದು ಸಿಪಿಐ(ಎಂ) ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com