AI ಬಳಸಿ ಭಾರತದ ಚುನಾವಣೆಗೆ ಅಡ್ಡಿಪಡಿಸಲು ಚೀನಾ ಯತ್ನ!: ಮೈಕ್ರೋಸಾಫ್ಟ್ ಮಾಹಿತಿ

ಭಾರತದ ಲೋಕಸಭಾ ಚುನಾವಣೆಗೆ ಅಡ್ದಿಪಡಿಸುವುದಕ್ಕಾಗಿ ಚೀನಾ ಕೃತಕ ಬುದ್ಧಿಮತ್ತೆ ಬಳಸಿ ಯತ್ನಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ.
China-India
ಚೀನಾ-ಭಾರತOnline Desk
Updated on

ನವದೆಹಲಿ: ಭಾರತದ ಲೋಕಸಭಾ ಚುನಾವಣೆಗೆ ಅಡ್ದಿಪಡಿಸುವುದಕ್ಕಾಗಿ ಚೀನಾ ಕೃತಕ ಬುದ್ಧಿಮತ್ತೆ ಬಳಸಿ ಯತ್ನಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ. ಭಾರತ ಮಾತ್ರವಲ್ಲದೇ ಅಮೇರಿಕಾ ಹಾಗೂ ದಕ್ಷಿಣ ಕೊರಿಯಾಗಳಲ್ಲೂ ಚೀನಾ ಇದೇ ಮಾದರಿಯನ್ನು ಅನುಸರಿಸಲು ಸಿದ್ಧತೆ ನಡೆಸಿರುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.

ತೈವಾನ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ತನಗೆ ಬೇಕಾದ ರೀತಿಯಲ್ಲಿ ಬರಬೇಕೆಂಬ ಕಾರಣಕ್ಕೆ ಅಲ್ಲಿನ ಚುನಾವಣೆ ಮೇಲೆ ಕೃತಕ ಬುದ್ಧಿ ಮತ್ತೆಯನ್ನು ಚೀನಾ ಪ್ರಯೋಗಿಸಿತ್ತು. ಕಳೆದ ತಿಂಗಳು ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆರೋಗ್ಯ ಮತ್ತು ಕೃಷಿಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಮತ್ತು ನಾವೀನ್ಯತೆ ಸೇರಿದಂತೆ ಸಾಮಾಜಿಕ ಉದ್ದೇಶಗಳಿಗೆ ಕೃತಕ ಬುದ್ಧಿಮತ್ತೆ ಬಳಕೆ ಬಗ್ಗೆ ಚರ್ಚಿಸಿದ್ದರು.

China-India
ಚೀನಾ 34,000 ಚದರ ಕಿಮೀ ಭೂಮಿ ಕಬಳಿಸಿದಾಗ ಅಫೀಮು ಸೇವಿಸಿದವರು ಯಾರು: ಖರ್ಗೆಗೆ ಪ್ರಹ್ಲಾದ್ ಜೋಶಿ ಪ್ರಶ್ನೆ

ಮೈಕ್ರೋಸಾಫ್ಟ್‌ನ ಗುಪ್ತಚರ ತಂಡದ ಪ್ರಕಾರ, ಉತ್ತರ ಕೊರಿಯಾದ ಒಳಗೊಳ್ಳುವಿಕೆಯೊಂದಿಗೆ ಚೀನಾದ ಸರ್ಕಾರದ ಬೆಂಬಲಿತ ಸೈಬರ್ ಗುಂಪುಗಳು 2024 ಕ್ಕೆ ನಿಗದಿಯಾಗಿರುವ ಹಲವಾರು ಚುನಾವಣೆಗಳನ್ನು ಗುರಿಯಾಗಿರಿಸಿಕೊಳ್ಳುವ ನಿರೀಕ್ಷೆಯಿದೆ. ಈ ಚುನಾವಣೆಗಳಲ್ಲಿ ಅವರ ಹಿತಾಸಕ್ತಿಗಳ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ತಿರುಗಿಸಲು ಚೀನಾ ಸಾಮಾಜಿಕ ಮಾಧ್ಯಮದ ಮೂಲಕ ಎಐ-ರಚಿಸಿದ ವಿಷಯವನ್ನು ನಿಯೋಜಿಸುತ್ತದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

China-India
ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಮರುನಾಮಕರಣ: ಚೀನಾ ನಡೆಗೆ ಅಮೇರಿಕಾ ಖಂಡನೆ

ಪ್ರಪಂಚದಾದ್ಯಂತ, ಯುರೋಪಿಯನ್ ಒಕ್ಕೂಟದ ಜೊತೆಗೆ ಕನಿಷ್ಠ 64 ದೇಶಗಳು ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವ ನಿರೀಕ್ಷೆಯಿದೆ. ಈ ದೇಶಗಳು ಒಟ್ಟಾರೆಯಾಗಿ ಜಾಗತಿಕ ಜನಸಂಖ್ಯೆಯ ಸರಿಸುಮಾರು 49 ಪ್ರತಿಶತವನ್ನು ಹೊಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com