ಸಂದರ್ಶನ: ವಿರೋಧ ಪಕ್ಷಗಳು ಅವಕಾಶ ಕಳೆದುಕೊಂಡವು; ಬಿಜೆಪಿ ಮತ್ತೆ 300 ಸೀಟು ಗೆಲ್ಲಬಹುದು- ಪ್ರಶಾಂತ್ ಕಿಶೋರ್

ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹೇಳಿಕೆಯನ್ನು ಒಪ್ಪಿಕೊಂಡ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಸರಿ ಪಕ್ಷವು ಕರ್ನಾಟಕ ಹೊರತುಪಡಿಸಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಪ್ರಬಲವಾಗುತ್ತಿದೆ.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ನವದೆಹಲಿ: ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹೇಳಿಕೆಯನ್ನು ಒಪ್ಪಿಕೊಂಡ ಖ್ಯಾತ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್, ಕೇಸರಿ ಪಕ್ಷವು ಕರ್ನಾಟಕ ಹೊರತುಪಡಿಸಿ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ದುರ್ಬಲವಾಗಿರುವ ರಾಜ್ಯಗಳಲ್ಲಿ ಮತ್ತು ಅಸ್ತಿತ್ವವೇ ಇಲ್ಲದ ಎರಡು ಕಡೆ ತನ್ನ ಸ್ಥಾನಗಳನ್ನು ಮತ್ತು ಮತಗಳ ಪಾಲನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಮಾತನಾಡಿದ ಕಿಶೋರ್, ಬಿಜೆಪಿ ಪ್ರಬಲವಾಗಿರುವ ಕಡೆ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಪಕ್ಷವಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿಗಾಗಲಿ ಗೆಲುವು ಸುಲಭವಾಗಿರಲಿಲ್ಲ. ಆದರೆ ಪ್ರತಿಪಕ್ಷಗಳು ಬಿಜೆಪಿಯನ್ನು ಕಟ್ಟಿಹಾಕುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಮೂರು ವಿಭಿನ್ನ ಮತ್ತು ವಾಸ್ತವಿಕ ಅವಕಾಶಗಳನ್ನು ಪ್ರತಿಪಕ್ಷಗಳು ಹೊಂದಿದ್ದವು. ಆದರೆ ಸೋಮಾರಿತನ ಮತ್ತು ತಪ್ಪಾದ ತಂತ್ರಗಳಿಂದ ಆ ಅವಕಾಶ ಕಳೆದುಕೊಂಡವು ಎಂದಿದ್ದಾರೆ.

"ಅವರು (ಬಿಜೆಪಿ) ತೆಲಂಗಾಣದಲ್ಲಿ ಮೊದಲ ಅಥವಾ ಎರಡನೆಯ ಪಕ್ಷವಾಗುತ್ತಾರೆ. ಅವರಿಗೆ ಅದು ದೊಡ್ಡ ವಿಷಯವಾಗಲಿದೆ. ಒಡಿಶಾದಲ್ಲಿ ಅವರು ಖಂಡಿತವಾಗಿಯೂ ನಂಬರ್ ಒನ್ ಆಗುತ್ತಾರೆ. ನೀವು ಆಶ್ಚರ್ಯಪಡುತ್ತೀರಿ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಂಬರ್ ಒನ್ ಪಕ್ಷವಾಗಲಿದೆ" ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

ಪ್ರಶಾಂತ್ ಕಿಶೋರ್
ಆಂಧ್ರ ವಿಧಾನಸಭಾ ಚುನಾವಣೆ: ಈ ಬಾರಿ ಜಗನ್ ಗೆ ದೊಡ್ಡ ಹೊಡೆತ- ಪ್ರಶಾಂತ್ ಕಿಶೋರ್

ಇನ್ನು ವತಮಿಳುನಾಡಿನಲ್ಲಿ ಬಿಜೆಪಿಯ ಮತಗಳಿಕೆಯು ಶೇಕಡಾವಾರು ಪ್ರಮಾಣದಲ್ಲಿ ಎರಡಂಕಿ ಮುಟ್ಟಬಹುದು ಎಂದು ಅವರು ಹೇಳಿದ್ದಾರೆ.

543 ಸದಸ್ಯ ಬಲದ ಲೋಕಸಭೆಯಲ್ಲಿ ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳ ಸೇರಿ 204 ಸ್ಥಾನಗಳನ್ನು ಹೊಂದಿವೆ. ಆದರೆ 2014 ಅಥವಾ 2019 ರಲ್ಲಿ ಬಿಜೆಪಿ ಈ ಎಲ್ಲಾ ರಾಜ್ಯಗಳಲ್ಲಿ 50 ಸ್ಥಾನಗಳನ್ನು ದಾಟಲು ಸಾಧ್ಯವಾಗಲಿಲ್ಲ. ಅದು ಕ್ರಮವಾಗಿ 29 ಮತ್ತು 47 ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು ಎಂದರು.

ಆದಾಗ್ಯೂ, ಬಿಜೆಪಿ 370 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ ಎಂದು ಪ್ರತಿಪಾದಿಸಿದ ಕಿಶೋರ್, ಕೇಸರಿ ಪಕ್ಷ 300 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮರಳಿ ಅಧಿಕಾರಕ್ಕೆ ಬರುವುದು "ಬಹಳ ಕಷ್ಟ" ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.

ಪ್ರಶಾಂತ್ ಕಿಶೋರ್
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ: ಕುತೂಹಲ ಕೆರಳಿಸಿದ ಪ್ರಶಾಂತ್ ಕಿಶೋರ್-ಚಂದ್ರಬಾಬು ನಾಯ್ಡು ಭೇಟಿ

ಕಿಶೋರ್ 2019 ರಲ್ಲಿ ಜಗನ್ ಮೋಹನ್ ರೆಡ್ಡಿಗಾಗಿ ಕೆಲಸ ಮಾಡಿದ್ದರು. ಅವರ ವೈಎಸ್‌ಆರ್‌ಸಿ ಪಕ್ಷವು ಈಗ ಬಿಜೆಪಿ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದಿತು.

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಉನ್ನತ ನಾಯಕರು ದಕ್ಷಿಣ ಮತ್ತು ಪೂರ್ವ ಭಾರತಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವುದರಿಂದ ಈ ರಾಜ್ಯಗಳಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗುತ್ತಿದೆ. ಮತ್ತೊಂದೆಡೆ, ಪ್ರತಿಪಕ್ಷಗಳು ಈ ರಾಜ್ಯಗಳಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರು ವಿವರಿಸಿದ್ದಾರೆ.

"ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಅಂತ ನೀವೇ ಎಣಿಸಿ. ಅದೇ ರೀತಿ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಥವಾ ಇತರೆ ಯಾವುದೇ ವಿರೋಧ ಪಕ್ಷದ ನಾಯಕರು ಈ ರಾಜ್ಯಕ್ಕೆ ಭೇಟಿ ನೀಡಿದ ಸಂಖ್ಯೆಯನ್ನು ಎಣಿಸಿ. ನಿಮ್ಮ ಹೋರಾಟವು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಆದರೆ ನೀವು ಮಣಿಪುರ ಮತ್ತು ಮೇಘಾಲಯದಲ್ಲಿ ಪ್ರವಾಸ ಮಾಡುತ್ತಿದ್ದೀರಿ, ಹೀಗಾದರೇ ನೀವು ಹೇಗೆ ಯಶಸ್ವಿಯಾಗುತ್ತೀರಿ ಎಂದು ಅವರು ರಾಹುಲ್ ಗಾಂಧಿಯನ್ನು ಪ್ರಶಾಂತ್ ಕಿಶೋರ್ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com