ಹಿಂದೂ ವಿವಾಹ ಕಾಯ್ದೆಯಡಿ 'ಕನ್ಯಾದಾನ ಅತ್ಯಗತ್ಯವಲ್ಲ': ಅಲಹಾಬಾದ್ ಹೈಕೋರ್ಟ್

ಹಿಂದೂಗಳ ಮದುವೆ ಪ್ರಕ್ರಿಯೆಯಲ್ಲಿ ಹಿಂದೂ ವಿವಾಹ ಕಾಯ್ದೆಯಡಿ 'ಕನ್ಯಾದಾನ ಅತ್ಯಗತ್ಯವಲ್ಲ' ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
Kanyadaan
ಕನ್ಯಾದಾನ (ಸಾಂದರ್ಭಿಕ ಚಿತ್ರ)
Updated on

ಅಲಹಾಬಾದ್: ಹಿಂದೂಗಳ ಮದುವೆ ಪ್ರಕ್ರಿಯೆಯಲ್ಲಿ ಹಿಂದೂ ವಿವಾಹ ಕಾಯ್ದೆಯಡಿ 'ಕನ್ಯಾದಾನ ಅತ್ಯಗತ್ಯವಲ್ಲ' ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಹಿಂದೂ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಸಪ್ತಪದಿಯಿದ್ದರೆ ಸಾಕು.. ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೆರವೇರಿಸಲು ಕನ್ಯಾದಾನ ಅನಿವಾರ್ಯವಲ್ಲ. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7 ಹಿಂದೂ ವಿವಾಹದ ಅತ್ಯಗತ್ಯ ಪ್ರಕ್ರಿಯೆಯಾಗಿ ಸಪ್ತಪದಿಯನ್ನು ಮಾತ್ರ ಹೇಳುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಅಶುತೋಷ್ ಯಾದವ್ ಎಂಬಾತ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಈ ಕಾಯಿದೆಯಡಿಯಲ್ಲಿ ವಿವಾಹವು 'ಕನ್ಯಾದಾನ' (ವಧುವನ್ನು ದಾನವಾಗಿ ಕೊಡುವುದು) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಆದರೆ ತನ್ನ ವಿವಾಹದಲ್ಲಿ ಅದನ್ನು ನಡೆಸಲಾಗಿಲ್ಲ ಎಂದು ಹೇಳಿದ್ದಾರೆ.

ಇದೇ ಪ್ರಕರಣದ ಮಾರ್ಚ್ 22ರ ಆದೇಶದಲ್ಲಿ ಕೋರ್ಟ್, 'ಹಿಂದೂ ವಿವಾಹ ಕಾಯಿದೆಯು ಕೇವಲ 'ಸಪ್ತಪದಿ'ಯನ್ನು ವಿವಾಹದ ಅತ್ಯಗತ್ಯ ಪ್ರಕ್ರಿಯೆಯಾಗಿ ಒತ್ತಿ ಹೇಳಿದೆ. ಒಟ್ಟಾರೆ ಸನ್ನಿವೇಶಗಳನ್ನು ಪರಿಗಣಿಸಿ, ಹಿಂದೂ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಕನ್ಯಾದಾನ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Kanyadaan
ಪತ್ನಿ 'ಸಿಂಧೂರ' ಧರಿಸುವುದು ಧಾರ್ಮಿಕ ಕರ್ತವ್ಯ: ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದ ಮಹಿಳೆಗೆ ಕೋರ್ಟ್ ತರಾಟೆ

ಅಂತೆಯೇ "ಕನ್ಯಾದಾನದ ಸಮಾರಂಭವನ್ನು ನಡೆಸಲಾಗಿದೆಯೇ ಅಥವಾ ಇಲ್ಲವೇ, ಪ್ರಕರಣದ ನ್ಯಾಯಯುತ ನಿರ್ಧಾರಕ್ಕೆ ಅತ್ಯಗತ್ಯವಾಗುವುದಿಲ್ಲ. ಆದ್ದರಿಂದ, ಈ ಸತ್ಯವನ್ನು ಸಾಬೀತುಪಡಿಸಲು ಸೆಕ್ಷನ್ 311 CrPC ಅಡಿಯಲ್ಲಿ ಸಾಕ್ಷಿಯನ್ನು ಕರೆಯಲಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com