18,766 ರೈಲ್ವೆ ಚಾಲಕರ ಹುದ್ದೆ ಖಾಲಿ: RTI ನಿಂದ ಬಹಿರಂಗ

ಅಸಿಸ್ಟೆಂಟ್ ಡ್ರೈವರ್‌ಗಳಿಗೆ ಹೋಲಿಸಿದರೆ ಡ್ರೈವರ್‌ಗಳ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚು ಎಂದು ಅಂಕಿ-ಅಂಶಗಳು ಸೂಚಿಸುತ್ತಿವೆ.
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ
Updated on

ನವದೆಹಲಿ: ದೇಶಾದ್ಯಂತ ಎಲ್ಲಾ ರೈಲ್ವೆ ವಲಯಗಳಲ್ಲಿ ಒಟ್ಟು 1,27,644 ಮಂಜೂರಾದ ರೈಲ್ವೆ ಚಾಲಕರು ಮತ್ತು ಸಹಾಯಕ ಚಾಲಕರ ಹುದ್ದೆಗಳಲ್ಲಿ ಮಾರ್ಚ್ 1, 2024ರ ವರೆಗೆ 18,766 (ಸುಮಾರು 14.7 ಶೇಕಡಾ) ಖಾಲಿ ಇವೆ ಎಂದು ರೈಲ್ವೆ ಮಂಡಳಿ, ಮಾಹಿತಿ ಹಕ್ಕು ಕಾಯಿದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರ ನೀಡಿದೆ.

ಅಸಿಸ್ಟೆಂಟ್ ಡ್ರೈವರ್‌ಗಳಿಗೆ ಹೋಲಿಸಿದರೆ ಡ್ರೈವರ್‌ಗಳ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚು ಎಂದು ಅಂಕಿ-ಅಂಶಗಳು ಸೂಚಿಸುತ್ತಿವೆ.

ಲೋಕೋ ಪೈಲಟ್‌ಗಳ(ಚಾಲಕರು) ಮಂಜೂರಾದ ಹುದ್ದೆಗಳು 70,093 ಎಂದು ತೋರಿಸಲಾಗಿದ್ದು, ಅದರಲ್ಲಿ 14,429(ಸುಮಾರು ಶೇ. 20.5) ಖಾಲಿಯಿದ್ದರೆ, ಸಹಾಯಕ ಲೋಕೋ ಪೈಲಟ್‌ಗಳು, ಒಟ್ಟು ಮಂಜೂರಾದ 57,551 ಹುದ್ದೆಗಳಲ್ಲಿ, 4,337 (ಸುಮಾರು ಶೇ. 7.5) ಹುದ್ದೆಗಳು ಖಾಲಿ ಇವೆ.

ಭಾರತೀಯ ರೈಲ್ವೆ
ಯಲಹಂಕದ ರೈಲ್ವೆ ಗಾಲಿ ಕಾರ್ಖಾನೆಯಲ್ಲಿ ಬೇಸಿಗೆಯಲ್ಲೂ ಹೇರಳ ನೀರು! ಕಾರಣ ಇಲ್ಲಿದೆ...

ಅರ್ಜಿ ಸಲ್ಲಿಸಿದ ಮಧ್ಯಪ್ರದೇಶ ಮೂಲದ ಚಂದ್ರಶೇಖರ್ ಗೌರ್ ಅವರು ವಲಯವಾರು ಖಾಲಿ ಹುದ್ದೆಗಳನ್ನು ಕೇಳಿದ್ದಾರೆ. ಆದರೆ ಅಂತಹ ಡೇಟಾವನ್ನು ಕೇಂದ್ರೀಯವಾಗಿ ನಿರ್ವಹಿಸುವುದಿಲ್ಲ ಎಂದು ರೈಲ್ವೆ ಮಂಡಳಿ ಹೇಳಿದೆ.

ವಿವಿಧ ರೈಲ್ವೆ ಯೂನಿಯನ್‌ಗಳು ಮತ್ತು ಚಾಲಕರ ಸಂಘಗಳು, ಖಾಲಿ ಇರುವ ಹುದ್ದೆಗಳಿಗೆ ಸರಿದೂಗಿಸಬೇಕಾಗಿರುವುದರಿಂದ ಅಸ್ತಿತ್ವದಲ್ಲಿರುವ ಸಿಬ್ಬಂದಿಯ ಕರ್ತವ್ಯದ ಅವಧಿಯನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com