ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧ: ರಾಜನಾಥ್​​ ಸಿಂಗ್

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ರಾಜನಾಥ್​​ ಸಿಂಗ್
ರಾಜನಾಥ್​​ ಸಿಂಗ್

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಇಸ್ಲಾಮಾಬಾದ್‌ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

"ಪಾಕಿಸ್ತಾನ ಭಯೋತ್ಪಾದನೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿಲ್ಲವಾದರೆ ಮತ್ತು ಅಸಮರ್ಥರೆಂದು ಭಾವಿಸಿದರೆ, ನೆರೆಯ ದೇಶದ ಸಹಾಯ ಪಡೆಯಲು ಬಯಸಿದರೆ, ಭಯೋತ್ಪಾದನೆಯನ್ನು ತಡೆಯಲು ಸಹಕರಿಸಲು ಭಾರತ ಸಿದ್ಧವಾಗಿದೆ" ಎಂದಿದ್ದಾರೆ.

"ಅವರು ನಮ್ಮ ನೆರೆಹೊರೆಯವರು, ಭಯೋತ್ಪಾದನೆ ಕೊನೆಗೊಳ್ಳಬೇಕು ಎಂಬ ಅವರ ಉದ್ದೇಶ ಸ್ಪಷ್ಟವಾಗಿದ್ದರೆ, ಅವರೇ ಅದನ್ನು ಮಾಡಬೇಕು ಅಥವಾ ಭಾರತದಿಂದ ಸಹಾಯವನ್ನು ತೆಗೆದುಕೊಳ್ಳಬೇಕು... ನಾವಿಬ್ಬರೂ ಭಯೋತ್ಪಾದನೆಯನ್ನು ಕೊನೆಗೊಳಿಸಬಹುದು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ರಾಜನಾಥ್​​ ಸಿಂಗ್
ಉಗ್ರರು ಭಾರತದಲ್ಲಿ ದಾಳಿ ಮಾಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರೆ, ಪಾಕ್ ಗೆ ನುಗ್ಗಿ ಹೊಡೆಯುತ್ತೇವೆ: ರಾಜನಾಥ್ ಸಿಂಗ್

ಇದೇ ವೇಳೆ 1975ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾನು ಜೈಲಿನಲ್ಲಿದ್ದೆ. ಆಗ ತನ್ನ ತಾಯಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಅಂತಿಮ ದರ್ಶನ ಪಡೆಯಲು ಸಹ ಆಗಲಿಲ್ಲ ಎಂದು ಭಾವುಕರಾದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ನನ್ನ ತಾಯಿಯ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ನನಗೆ ಪೆರೋಲ್ ನೀಡಲಿಲ್ಲ. ಈಗ ಕಾಂಗ್ರೆಸ್​ನವರು ನಮ್ಮನ್ನು ಸರ್ವಾಧಿಕಾರಿಗಳು ಎಂದು ಕರೆಯುತ್ತಾರೆ. 27 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿಯ ಅಂತಿಮ ದಿನಗಳಲ್ಲಿ ಆಕೆಯನ್ನು ಭೇಟಿಯಾಗಲು ನನಗೆ ಸಾಧ್ಯವಾಗಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com