TMC Leader ಸಂದೇಶ್‌ ಖಾಲಿ ಕುರಿತಾದ ದೂರುಗಳಿಗೆ ಪ್ರತ್ಯೇಕ ಇಮೇಲ್ ಐಡಿ: CBI

ತೃಣಮೂಲ ಕಾಂಗ್ರೆಸ್ ನಾಯಕ ಸಂದೇಶ್‌ ಖಾಲಿ ಕುರಿತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿರುವ ಸಿಬಿಐ (CBI)ದೂರುಗಳಿಗೆ ಪ್ರತ್ಯೇಕ ಇಮೇಲ್ ಐಡಿ ರಚಿಸಿದೆ.
Sandeshkhali complaints
TMC Leader ಸಂದೇಶ್‌ ಖಾಲಿ
Updated on

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನಾಯಕ ಸಂದೇಶ್‌ ಖಾಲಿ ಕುರಿತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿರುವ ಸಿಬಿಐ (CBI) ದೂರುಗಳಿಗೆ ಪ್ರತ್ಯೇಕ ಇಮೇಲ್ ಐಡಿ ರಚಿಸಿದೆ.

ಹೌದು.. ಟಿಎಂಸಿ ನಾಯಕನಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಕೇಳಿ ಬಂದಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಸಿಬಿಐ ಪ್ರತ್ಯೇಕ ಇಮೇಲ್ ಐಡಿ ಸ್ಥಾಪಿಸಿದೆ.

sandeshkhali@cbi.gov.in ಇಮೇಲ್ ಐಡಿಗೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಜನರು ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sandeshkhali complaints
ಪಶ್ಚಿಮ ಬಂಗಾಳ: ಎನ್‌ಐಎ ಅಧಿಕಾರಿಗಳ ವಿರುದ್ಧ ಬಂಧಿತ ಟಿಎಂಸಿ ನಾಯಕನ ಪತ್ನಿ ಎಫ್‌ಐಆರ್ ದಾಖಲು

ಕೋರ್ಟ್ ಆದೇಶದ ಮೇರೆಗೆ ಇ-ಮೇಲ್ ಐಡಿ ರಚನೆ

2024ರ ಏಪ್ರಿಲ್ 10ರಂದು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ಆದೇಶದ ಅನುಸಾರವಾಗಿ ಸಿಬಿಐ, ಸಂದೇಶ್‌ಖಾಲಿಗೆ ಮೀಸಲಾದ ಇಮೇಲ್ ಅನ್ನು ರಚಿಸಿದೆ. ಇದರಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಮತ್ತು ಬಲವಂತವಾಗಿ ಭೂಮಿಯನ್ನು ವಶಪಡಿಸಿಕೊಳ್ಳುವ ಬಗ್ಗೆ ಸಂದೇಶ್‌ಖಾಲಿಯ ಜನರು ದೂರುಗಳನ್ನು ಸಲ್ಲಿಸಬಹುದು ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಂದೇಶ್‌ಖಾಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ. ನೊಂದವರಿಗೆ ನ್ಯಾಯ ಒದಗಿಸುವ ಹಿತದೃಷ್ಟಿಯಿಂದ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಹೇಳಿದೆ.

Sandeshkhali complaints
ಬಂಗಾಳ: ಸ್ಫೋಟಕ್ಕೆ ಸಂಬಂಧಿಸಿದಂತೆ ಟಿಎಂಸಿ ಕಾರ್ಯಕರ್ತರ ಬಂಧನದ ನಂತರ NIA ಅಧಿಕಾರಿಗಳ ಮೇಲೆ ದಾಳಿ, ಇಬ್ಬರಿಗೆ ಗಾಯ

ಪತ್ರಿಕೆ, ವಾಹಿನಿಗಳಲ್ಲಿ ಪ್ರಚಾರ

ಇನ್ನು ಇಮೇಲ್ ಐಡಿ ಕುರಿತಾಗಿ ಆ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಮಾಡಲು ದೇಶೀಯ ಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com