ಲೋಕಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ, ಈಶಾನ್ಯ ದೆಹಲಿ ಕ್ಷೇತ್ರದಿಂದ ಕನ್ಹಯ್ಯಾ ಕುಮಾರ್ ಕಣಕ್ಕೆ

ಲೋಕಸಭೆ ಚುನಾವಣೆಗೆ 10 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದೆ. ಪಂಜಾಬಿನ ಜಲಂಧರ್-ಎಸ್‌ಸಿ ಲೋಕಸಭೆ ಸ್ಥಾನದಿಂದ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಅವರಿಗೆ ಟಿಕೆಟ್ ನೀಡಿದೆ.
ರಾಹುಲ್ ಜೊತೆಗೆ ಕನ್ಹಯ್ಯಾ ಕುಮಾರ್
ರಾಹುಲ್ ಜೊತೆಗೆ ಕನ್ಹಯ್ಯಾ ಕುಮಾರ್

ನವದೆಹಲಿ: ಲೋಕಸಭೆ ಚುನಾವಣೆಗೆ 10 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದೆ. ಪಂಜಾಬಿನ ಜಲಂಧರ್-ಎಸ್‌ಸಿ ಲೋಕಸಭೆ ಸ್ಥಾನದಿಂದ ಮಾಜಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಅವರಿಗೆ ಟಿಕೆಟ್ ನೀಡಿದೆ.

ಹಿರಿಯ ರಾಜಕಾರಣಿ ಜೆಪಿ ಅಗರ್ವಾಲ್ ಅವರನ್ನು ಚಾಂದಿನಿ ಚೌಕ್ ಕ್ಷೇತ್ರದಿಂದ ಮತ್ತು ಯುವ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ಈಶಾನ್ಯ ದೆಹಲಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕುಮಾರ್ ಅವರು ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಸ್ಪರ್ಧಿಸಲಿದ್ದಾರೆ. ವಾಯವ್ಯ ದೆಹಲಿ ಲೋಕಸಭಾ ಸ್ಥಾನಕ್ಕೆ ಪಕ್ಷವು ಮಾಜಿ ಸಂಸದ ಉದಿತ್ ರಾಜ್ ಹೆಸರನ್ನು ಘೋಷಿಸಿದೆ.

ಪಂಜಾಬ್‌ನ ಅಮೃತಸರದಿಂದ ತನ್ನ ಹಾಲಿ ಸಂಸದರಾದ ಗುರ್ಜಿತ್ ಸಿಂಗ್ ಔಜ್ಲಾ ಮತ್ತು ಫತೇಘರ್ ಸಾಹಿಬ್ (SC) ಲೋಕಸಭಾ ಸ್ಥಾನದಿಂದ ಅಮರ್ ಸಿಂಗ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಮಾಜಿ ಸಂಸದ ಧರ್ವೀರ್ ಗಾಂಧಿ ಅವರು ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆಮ್ ಆದ್ಮಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ರಾಹುಲ್ ಜೊತೆಗೆ ಕನ್ಹಯ್ಯಾ ಕುಮಾರ್
ಬಿಜೆಪಿ ಪ್ರಣಾಳಿಕೆಯನ್ನು ಮತ್ತೆ ನಂಬುವುದು ಸರಿಯಲ್ಲ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಅಖಿಲ ಭಾರತ ಕಿಸಾನ್ ವಿಭಾಗದ ಮುಖ್ಯಸ್ಥ ಸುಖಪಾಲ್ ಸಿಂಗ್ ಖೈರಾ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಮತ್ತು ಜೀತ್ ಮೊಹಿಂದರ್ ಸಿಂಗ್ ಸಿಧು ಅವರನ್ನು ಬಟಿಂಡಾ ಲೋಕಸಭಾ ಕ್ಷೇತ್ರದಿಂದ ನಾಮನಿರ್ದೇಶನ ಮಾಡಿದೆ.

ಉತ್ತರ ಪ್ರದೇಶದ ಅಲಹಾಬಾದ್ ಲೋಕಸಭಾ ಕ್ಷೇತ್ರದಿಂದ ಉಜ್ವಲ್ ರೇವ್ತಿ ರಮಣ್ ಸಿಂಗ್ ಅವರ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಒಡಿಶಾ ವಿಧಾನಸಭಾ ಚುನಾವಣೆಗೆ 75 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com