ಗುಜರಾತ್: 200 ಕೋಟಿ ರೂ. ಮೌಲ್ಯದ ಸಂಪತ್ತು ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಉದ್ಯಮಿ ದಂಪತಿ!

ಗುಜರಾತ್‌ನ ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿಗಳಾದ ಭವೇಶ್‌ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜಿನಾಲ್ ಭಂಡಾರಿ ಅವರು ಉದಾರವಾಗಿ ಸುಮಾರು 200 ಕೋಟಿ ರೂ. ಮೌಲ್ಯದ ಸಂಪತ್ತನೆಲ್ಲಾ ದಾನ ಮಾಡಿ ಸನ್ಯಾಸ ಸ್ವೀಕರಿಸಿದ್ದಾರೆ. ಈ ಮೂಲಕ ಭಕ್ತಿ ಹಾಗೂ ನಿಸ್ವಾರ್ಥತೆಯನ್ನು ಎತ್ತಿ ತೋರಿಸಿದ್ದಾರೆ.
ಭವೇಶ್‌ಭಾಯ್ ಭಂಡಾರಿ, ಪತ್ನಿ ಜಿನಾಲ್ ಭಂಡಾರಿ
ಭವೇಶ್‌ಭಾಯ್ ಭಂಡಾರಿ, ಪತ್ನಿ ಜಿನಾಲ್ ಭಂಡಾರಿ
Updated on

ಅಹಮದಾಬಾದ್: ಗುಜರಾತ್‌ನ ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರದ ನಿವಾಸಿಗಳಾದ ಭವೇಶ್‌ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜಿನಾಲ್ ಭಂಡಾರಿ ಅವರು ಉದಾರವಾಗಿ ಸುಮಾರು ₹200 ಕೋಟಿ ರೂ. ಮೌಲ್ಯದ ಸಂಪತ್ತನೆಲ್ಲಾ ದಾನ ಮಾಡಿ ಸನ್ಯಾಸ ಸ್ವೀಕರಿಸಿದ್ದಾರೆ. ಈ ಮೂಲಕ ಭಕ್ತಿ ಹಾಗೂ ನಿಸ್ವಾರ್ಥತೆಯನ್ನು ಎತ್ತಿ ತೋರಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದ ನಂತರ ಮೋಕ್ಷಕ್ಕಾಗಿ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. 2022 ರಲ್ಲಿ ಸನ್ಯಾಸ್ಯತ್ವ ಸ್ವೀಕರಿಸಿದ ಅವರ 19 ವರ್ಷದ ಮಗಳು ಮತ್ತು 16 ವರ್ಷದ ಮಗನ ದಾರಿಯನ್ನು ಅವರು ಅನುಸರಿಸಿದ್ದಾರೆ. ಈ ಹಿಂದೆ ನಿರ್ಮಾಣ ವ್ಯವಹಾರದಲ್ಲಿ ತೊಡಗಿದ್ದ ಭವೇಶ್‌ಭಾಯ್ ಮತ್ತು ಅವರ ಪತ್ನಿ ತಮ್ಮ ಮಕ್ಕಳಿಂದ ಸ್ಫೂರ್ತಿ ಪಡೆದ ದಂಪತಿ ಕೂಡ ಇದೀಗ ಆಸ್ತಿ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.

ಸನ್ಯಾಸಿಗಳು ಸಂಯಮದಿಂದ ಜೀವನ ನಡೆಸಬೇಕು ಎಂದು ಅವರು ಎತ್ತಿ ತೋರಿಸಿದ್ದಾರೆ. ಇದರಲ್ಲಿ ಜೀವನಾಂಶಕ್ಕಾಗಿ ಭಿಕ್ಷೆ ಬೇಡುವುದು ಮತ್ತು ಹವಾನಿಯಂತ್ರಣ, ಫ್ಯಾನ್ ಮತ್ತು ಮೊಬೈಲ್ ಫೋನ್‌ಗಳಂತಹ ಆಧುನಿಕ ಸೌಕರ್ಯಗಳನ್ನು ತ್ಯಜಿಸುವುದು ಸೇರಿದೆ. ಅಲ್ಲದೇ, ತಮ್ಮ ಸನ್ಯಾಸತ್ವ ಸ್ವೀಕಾರದ ಭಾಗವಾಗಿ ಬರಿಗಾಲಿನಲ್ಲಿ ದೇಶವನ್ನು ಸಂಚರಿಸುವ ನಿರೀಕ್ಷೆಯಿದೆ ಎಂದು ಅವರ ಪರಿಚಯಸ್ಥರಾದ ದಿಲೀಪ್ ಗಾಂಧಿ ಜೈನ ಸಮಾಜದಲ್ಲಿ ಸನ್ಯಾಸತ್ವದ ಮಹತ್ವವನ್ನು ತಿಳಿಸಿದರು.

ಭಾವೇಶ್ ಮತ್ತು ಜಿನಾಲ್ ಏಪ್ರಿಲ್ 22 ರಂದು ಸನ್ಯಾಸತ್ವದ ಹಾದಿಯನ್ನು ಆರಂಭಿಸಲಿದ್ದಾರೆ. ಅಹಮದಾಬಾದ್‌ನ ರಿವರ್‌ಫ್ರಂಟ್‌ನಲ್ಲಿ ನಿಗದಿಪಡಿಸಲಾದ ಸಮಾರಂಭದಲ್ಲಿ ದೀಕ್ಷೆಗೆ ಒಳಗಾಗುವ 36 ವ್ಯಕ್ತಿಗಳಲ್ಲಿ ಅವರು ಸೇರಿದ್ದಾರೆ. ತಮ್ಮ ಗಣನೀಯ ಸಂಪತ್ತಿಗೆ ಹೆಸರಾದ ಭಂಡಾರಿ ಕುಟುಂಬದ ಆಯ್ಕೆಯು ರಾಜ್ಯದಾದ್ಯಂತ ವ್ಯಾಪಕ ಗಮನವನ್ನು ಸೆಳೆದಿದೆ. ಈ ಘಟನೆಗೂ ಮುನ್ನ, ಜಾಮ್‌ನಗರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಮೂರು ತಲೆಮಾರುಗಳ ಶ್ರೀಮಂತ ಕುಟುಂಬವು ಕಳೆದ ತಿಂಗಳು ಜುನಾಗಢ್‌ನ ಗಿರ್ನಾರ್ ದರ್ಶನ್ ಜೈನ್ ಧರ್ಮಶಾಲಾದಲ್ಲಿ ಸನ್ಯಾಸತ್ವ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಭವೇಶ್‌ಭಾಯ್ ಭಂಡಾರಿ, ಪತ್ನಿ ಜಿನಾಲ್ ಭಂಡಾರಿ
ಬತ್ತಿದ ಕೆರೆಗಳಿಗೆ ನೀರು ಹರಿಸಿ ಮೂಕ ಪ್ರಾಣಿಗಳ ದಾಹ ನೀಗಿಸುತ್ತಿರುವ ಅನ್ನದಾತ!

ಕುಟುಂಬದ ಮಹಿಳೆಯೊಬ್ಬರು ಒಂದೂವರೆ ತಿಂಗಳ ಹಿಂದೆ ಸೂರತ್‌ನಲ್ಲಿ ದೀಕ್ಷೆಯನ್ನು ತೆಗೆದುಕೊಂಡಿದ್ದರು. ಇದನ್ನು ತಂದೆ-ಮಗ ಹಾಗೂ ಮೊಮ್ಮಗನು ಅನುಸರಿಸಿದರು. ಗಮನಾರ್ಹ ಸಂಗತಿಯೇನೆಂದರೆ ಮೊಮ್ಮಗ ತನ್ನ ಸಿಎ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾನೆ. ಇದು ರಾಜ್ಯದಲ್ಲಿ ಮೂರು ತಲೆಮಾರುಗಳು ಏಕಕಾಲದಲ್ಲಿ ಸನ್ಯಾಸಿತ್ವವನ್ನು ಸ್ವೀಕರಿಸಿದ ಮೊದಲ ಉದಾಹರಣೆಯಾಗಿದೆ. ಅಜಿತಭಾಯಿ ಶಾಂತಿಲಾಲ್ ಶಾ ಅವರು ಮೂಲತಃ ಸಿನ್ಹೋರ್‌ನವರು ಮತ್ತು ಈಗ ಜಾಮ್‌ನಗರದಲ್ಲಿ ನೆಲೆಸಿದ್ದಾರೆ.ಅವರ ಮಗ ಕೌಶಿಕಭಾಯಿ ಅಜಿತ್‌ಭಾಯ್ ಶಾ ಮತ್ತು ಮೊಮ್ಮಗ ವಿರಾಲ್‌ಭಾಯ್ ಕೌಶಿಕಭಾಯಿ ಶಾ ಅವರೊಂದಿಗೆ ಸನ್ಯಾಸತ್ವದ ಹಾದಿಯನ್ನು ಪ್ರಾರಂಭಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com