ಜಮ್ಮು ಮತ್ತು ಕಾಶ್ಮೀರ: ಬೋಟ್ ಮುಳುಗಿ 4 ಶಾಲಾ ಮಕ್ಕಳ ಸಾವು, ಹಲವರ ನಾಪತ್ತೆ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ದೋಣಿ ದುರಂತ ಸಂಭವಿಸಿದ್ದು, ದೋಣಿಯಲ್ಲಿ ಸಾಗುತ್ತಿದ್ದ 4 ಶಾಲಾ ಮಕ್ಕಳು ಸಾವಿಗೀಡಾಗಿದ್ದಾರೆ.
boat capsized in River Jhelum
ದೋಣಿ ದುರಂತ
Updated on

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ದೋಣಿ ದುರಂತ ಸಂಭವಿಸಿದ್ದು, ದೋಣಿಯಲ್ಲಿ ಸಾಗುತ್ತಿದ್ದ 4 ಶಾಲಾ ಮಕ್ಕಳು ಸಾವಿಗೀಡಾಗಿದ್ದಾರೆ.

ಜಮ್ಮು-ಕಾಶ್ಮೀರದ (Jammu Kashmir) ಜೇಲಂ ನದಿಯಲ್ಲಿ (Jhelum River) ಮಂಗಳವಾರ (ಏಪ್ರಿಲ್‌ 16) ಬೆಳಗ್ಗೆ ದೋಣಿಯೊಂದು ಮುಳುಗಿದ್ದು (Boat Capsize), ನಾಲ್ವರು ಶಾಲಾ ಮಕ್ಕಳು ಸೇರಿ ಹಲವರು ಮಂದಿ ಜಲಸಮಾಧಿಯಾಗಿದ್ದಾರೆ.

boat capsized in River Jhelum
ಕೇರಳ ದೋಣಿ ದುರಂತ: ಸಂತ್ರಸ್ತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ, ನ್ಯಾಯಾಂಗ ತನಿಖೆಗೆ ಆದೇಶಿಸಿದ ಸಿಎಂ ವಿಜಯನ್

ಮೂಲಗಳ ಪ್ರಕಾರ ಬೆಳಗ್ಗೆ ಮಕ್ಕಳು ಸೇರಿ ಹಲವರು ಮಂದಿ ದೋಣಿಯಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ದೋಣಿಯು ನಿಯಂತ್ರಣ ತಪ್ಪಿ ಮಗುಚಿದೆ. ಹಲವು ಮಂದಿ ನೀರಿನಲ್ಲಿ ಮುಳುಗಿದ್ದು, ವಿಚಾರ ತಿಳಿಯುತ್ತಲೇ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಇದುವರೆಗೆ 12 ಮಂದಿಯನ್ನು ರಕ್ಷಿಸಲಾಗಿದ್ದು, ನಾಲ್ವರು ಶಾಲಾ ಮಕ್ಕಳು ಮೃತಪಟ್ಟರೆ, ಮೂವರು ನಾಪತ್ತೆಯಾಗಿದ್ದಾರೆ. ಶಾಲಾ ಮಕ್ಕಳು ಸೇರಿ ಹಲವರು ಇದ್ದ ದೋಣಿಯು ತುಂಬಿದ ನದಿಯಲ್ಲಿ ಶ್ರೀನಗರದ ಗಂಡ್ಬಾಲ್‌ನಿಂದ ಬಟ್ವಾರದವರೆಗೆ ಚಲಿಸುತ್ತಿತ್ತು. ಇದೇ ವೇಳೆ ಹಡಗು ಮಗುಚಿದೆ ಎಂದು ಮೂಲಗಳು ತಿಳಿಸಿವೆ.

ಅಗತ್ಯಕ್ಕಿಂತ ಹೆಚ್ಚಿನ ಜನ ದೋಣಿಯಲ್ಲಿದ್ದ ಕಾರಣ ದುರಂತ ಸಂಭವಿಸಿದೆಯೋ, ನೀರಿನ ಸೆಳವಿಗೆ ಸಿಲುಕಿ ಮಗುಚಿದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಜಮ್ಮು-ಕಾಶ್ಮೀರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣೆಗೆ ಸ್ಥಳೀಯರೂ ನೆರವು ನೀಡುತ್ತಿದ್ದಾರೆ.

ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ನದಿ

ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಣಿವೆಯ ಪ್ರಮುಖ ಜೇಲಂ ನದಿಯು ಉಕ್ಕಿ ಹರಿಯುತ್ತಿದೆ. ಇದೇ ಹೊತ್ತಿನಲ್ಲಿ ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಸಾಗುತ್ತಿದ್ದ ದೋಣಿ ಮುಗುಚಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com