EVM ಟ್ಯಾಂಪರಿಂಗ್ ಮಾಡದಿದ್ದರೆ ಬಿಜೆಪಿ 180 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ: ಪ್ರಿಯಾಂಕಾ ಗಾಂಧಿ

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ನ್ಯಾಯಯುತ ಚುನಾವಣೆ ನಡೆಸಿದರೆ, ಭಾರತೀಯ ಜನತಾ ಪಕ್ಷ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ.
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಸಹರಾನ್‌ಪುರ: ಇವಿಎಂಗಳನ್ನು ಟ್ಯಾಂಪರಿಂಗ್ ಮಾಡದೆ ನ್ಯಾಯಯುತ ಚುನಾವಣೆ ನಡೆಸಿದರೆ, ಭಾರತೀಯ ಜನತಾ ಪಕ್ಷ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಹೇಳಿದ್ದಾರೆ.

ಇಂದು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ, ಯಾವ ಆಧಾರದ ಮೇಲೆ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಹೇಳಿಕೆ ನೀಡುತ್ತಿದೆ? ಎಂದು ಪ್ರಶ್ನಿಸಿದರು.

400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಯಾವ ಆಧಾರದಲ್ಲಿ ಹೇಳುತ್ತಿದ್ದಾರೆ. ಅವರು ಜ್ಯೋತಿಷಿಗಳೇ?, ಒಂದೋ ಅವರು ಮೊದಲಿನಿಂದಲೂ ಏನೇನೋ ಮಾಡಿದ್ದಾರೆ. ಹೀಗಾಗಿಯೇ 400 ಹೆಚ್ಚು ಬರುತ್ತೆ ಅಂತ ಹೇಳುತ್ತಿದ್ದಾರೆಯೇ?... ಇಂದು ದೇಶದಲ್ಲಿ ಚುನಾವಣೆ ನಡೆದರೆ... ಇವಿಎಂ ಟ್ಯಾಂಪರಿಂಗ್ ಆಗದೇ ಇದ್ದಲ್ಲಿ, ಅವರು 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವೇ ಇಲ್ಲ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಅವರು 180 ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತಾರೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ಗೆಲ್ಲಬಹುದು: ರಾಹುಲ್ ಗಾಂಧಿ

ನಾನು ಈ ಚುನಾವಣೆಯನ್ನು ಜನರ ದೃಷ್ಟಿಕೋನದಿಂದ ನೋಡುತ್ತೇನೆ ಎಂದ ಅವರು, ಜನರ ಸಮಸ್ಯೆಗಳ ಆಧಾರದ ಮೇಲೆ ಚುನಾವಣೆ ನಡೆಸಬೇಕು ಎಂದು ಒತ್ತಿ ಹೇಳಿದರು.

"ಈ ಚುನಾವಣೆಯು ಜನರ ಚುನಾವಣೆಯಾಗಬೇಕು, ಇದು ಜನರ ಸಮಸ್ಯೆಗಳ ಮೇಲೆ ನಡೆಯಬೇಕು ಎಂದು ನಾನು ಜನರಿಗೆ ಎಲ್ಲೆಡೆ ಹೇಳುತ್ತಿದ್ದೇನೆ" ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಬಿಜೆಪಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡುತ್ತಿಲ್ಲ. "ಅವರು ನಿರುದ್ಯೋಗ, ಹಣದುಬ್ಬರದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ರೈತರು ಮತ್ತು ಮಹಿಳೆಯರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಅವರ ಎಲ್ಲಾ ಸಂಭಾಷಣೆಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಮಾತ್ರ ಯತ್ನಿಸುತ್ತಿವೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com