ಪ್ರಚಾರದ ವೇಳೆ ಮಸೀದಿಯತ್ತ ಬಾಣದ ಸನ್ನೆ: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ವಿರುದ್ಧ ಒವೈಸಿ ಕಿಡಿ, ಸ್ಪಷ್ಟನೆ ನೀಡಿದ Madhavi Latha!

ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ಈ ಕುರಿತು ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾಧವಿಲತಾ ಕೂಡ ಸ್ಪಷ್ಟನೆ ನೀಡಿದ್ದಾರೆ.
ಮಾಧವಿ ಲತಾ
ಮಾಧವಿ ಲತಾ

ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ಈ ಕುರಿತು ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದು, ಮಾಧವಿಲತಾ ಕೂಡ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಬುಧವಾರ ಹೈದರಾಬಾದ್ ನಲ್ಲಿ ನಡೆದ ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಸಿದ್ದಿಯಂಬರ್ ಬಜಾರ್ ಮಸೀದಿಯತ್ತ ಮಾಧವಿ ಲತಾ ಅವರು ಬಾಣ ಬಿಟ್ಟಂತೆ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.

ಮಾಧವಿ ಲತಾ
ಹೈದರಾಬಾದ್: ಅಸಾದುದ್ದೀನ್ ಓವೈಸಿಗೆ ಪೋರ್ಕ್ ಬಿರಿಯಾನಿ ತಿನ್ನಲು ಬಿಜೆಪಿ ನಾಯಕ ರಾಜಾ ಸಿಂಗ್ ಆಹ್ವಾನ! 

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮಾಧವಿ ಲತಾ ಅವರು ಕೇಸರಿ ಶಾಲು ಧರಿಸಿ ವಾಹನವೊಂದರ ಮೇಲೆ ನಿಂತು ಮಸೀದಿಯತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿರುವುದು ಮತ್ತು ಸುತ್ತಲು ಕೇಸರಿ ಧ್ವಜ ಹಿಡಿದು ನಿಂತಿದ್ದ ನೂರಾರು ಜನರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮೊಳಗಿಸಿದ್ದು ವೈರಲ್ ವಿಡಿಯೋದಲ್ಲಿದೆ.

ಜನರಿಗೆ ಬಿಜೆಪಿಯ ಉದ್ದೇಶ ಏನೆಂದು ಗೊತ್ತಾಗಿದೆ: ಒವೈಸಿ ಕಿಡಿ

ಇನ್ನು ಈ ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ” ಹೈದರಾಬಾದ್‌ನ ಜನರು ಬಿಜೆಪಿಯ ಉದ್ದೇಶ ಏನೆಂದು ನೋಡಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್‌ನ ಅಸಭ್ಯ ಮತ್ತು ಪ್ರಚೋದನಕಾರಿ ಚಟುವಟಿಕೆಗಳನ್ನು ಸ್ವೀಕರಿಸುವುದಿಲ್ಲ. ಬಿಜೆಪಿಯವರು ಹೇಳುತ್ತಿರುವ ವಿಕಸಿತ ಭಾರತ ಇದೇನಾ? ಚುನಾವಣೆಗಿಂತ ಹೈದರಾಬಾದ್‌ನಲ್ಲಿ ಶಾಂತಿ ನೆಲೆಸುವುದು ಮುಖ್ಯ. ತೆಲಂಗಾಣದ ಶಾಂತಿ, ಸಾಮರಸ್ಯಕ್ಕೆ ವಿರುದ್ದವಾಗಿರುವ ಬಿಜೆಪಿ ವಿರುದ್ದ ಜನರು ಮತ ಹಾಕಲಿದ್ದಾರೆ ಎಂಬ ವಿಶ್ವಾಸ ನನಗಿದೆ” ಎಂದು ಹೇಳಿದ್ದಾರೆ.

ವಿಡಿಯೋ ವೈರಲ್ ಆಗುತ್ತಲೇ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಸ್ಪಷ್ಟನೆ

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಲೇ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಸ್ಪಷ್ಟನೆ ನೀಡಿದ್ದು, 'ತಪ್ಪು ಭಾವನೆ ಮೂಡಿಸಲು ನನ್ನ ವಿಡಿಯೋವೊಂದನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅಪೂರ್ಣ ವಿಡಿಯೋ ಎಂಬುವುದನ್ನು ನಾನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ. ಈ ವಿಡಿಯೋದಿಂದ ಯಾರ ಭಾವನೆಗಾದರು ಧಕ್ಕೆಯಾಗಿದ್ದರೆ, ನಾನು ಎಲ್ಲರನ್ನು ಗೌರವಿಸುವವಳಾಗಿ ಕ್ಷಮೆ ಯಾಚಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಇದೇ ವಿಚಾರವಾಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ವೈರಲ್ ಆಗುತ್ತಿರುವ ವಿಡಿಯೋ ರಾಮ ನವಮಿಯದ್ದು. ನಾವು ರಾಮನನ್ನು ರಾಮಬಾಣದಿಂದ ಪೂಜಿಸುತ್ತಿದ್ದೆವು... ರಾಮನನ್ನು ಪ್ರಾರ್ಥಿಸುತ್ತಿದ್ದೆವು. ಮಸೀದಿ ಎಲ್ಲಿಂದ ಬಂತು? ಪ್ರಚೋದನಕಾರಿ ಭಾಷಣಗಳ ನಿಪುಣ ಅಸಾದುದ್ದೀನ್ ಓವೈಸಿ ಈಗ ಪ್ರಚೋದನಕಾರಿ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.

ಪ್ರಧಾನಿ ಮೋದಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ನರಿಗಾಗಿ ಮುನ್ನಡೆಯುತ್ತಿದ್ದಾರೆ... ಚುನಾವಣಾ ಆಯೋಗ ಅವರ ವಿಡಿಯೋಗಳನ್ನು ನೋಡಿದ್ದರೆ ಅವರು ಒಂದಲ್ಲ ಹತ್ತಾರು ಬಾರಿ ಕಂಬಿಗಳ ಹಿಂದೆ ಇರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com