ಸರ್ವೇಶ್ ಸಿಂಗ್
ಸರ್ವೇಶ್ ಸಿಂಗ್TNIE

ಮತದಾನ ನಡೆದ ಮರುದಿನವೇ ಮೊರಾದಾಬಾದ್‌ನ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ನಿಧನ!

ಮತದಾನ ನಡೆದ ಮರುದಿನವೇ ಮೊರಾದಾಬಾದ್‌ನ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ನಿಧನರಾಗಿದ್ದಾರೆ. ಮೊರಾದಾಬಾದ್‌ನಲ್ಲಿ ನಿನ್ನೆಯಷ್ಟೇ ಮತದಾನ ನಡೆದಿತ್ತು.
Published on

ಉತ್ತರ ಪ್ರದೇಶ: ಮತದಾನ ನಡೆದ ಮರುದಿನವೇ ಮೊರಾದಾಬಾದ್‌ನ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ನಿಧನರಾಗಿದ್ದಾರೆ. ಮೊರಾದಾಬಾದ್‌ನಲ್ಲಿ ನಿನ್ನೆಯಷ್ಟೇ ಮತದಾನ ನಡೆದಿತ್ತು.

ಸರ್ವೇಶ್ ಸಿಂಗ್ ಕೂಡ ಮತ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಿತ್ತು. ಅವರ ಹಲ್ಲುಗಳಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆ ನಂತರ ಸಮಸ್ಯೆ ಉಲ್ಬಣಿಸಿದಾಗ ಚಿಕಿತ್ಸೆ ಪಡೆಯಲು ದೆಹಲಿ ಏಮ್ಸ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಅವರ ನಿಧನದ ಸುದ್ದಿ ಬಿಜೆಪಿಯಲ್ಲಿ ಶೋಕದ ಅಲೆಯನ್ನು ಸೃಷ್ಟಿಸಿದೆ.

ನಾಮನಿರ್ದೇಶನಗೊಂಡಾಗಿನಿಂದ ಅವರು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊದಲ ಹಂತದಲ್ಲಿ ಏಪ್ರಿಲ್ 19ರಂದು ಅವರು ತಮ್ಮ ಸ್ವಗ್ರಾಮ ರತುಪುರದಲ್ಲಿ ಮತ ಚಲಾಯಿಸಿದ್ದರು. ಆದರೆ ಸಂಜೆ ಅವರ ಆರೋಗ್ಯ ಹದಗೆಟ್ಟಿತು. ಕೂಡಲೇ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸರ್ವೇಶ್ ಸಿಂಗ್ ಅವರ ಪುತ್ರ ಸುಶಾಂತ್ ಸಿಂಗ್ ಅವರು ಬಿಜ್ನೋರ್‌ನ ಬಾಧಾಪುರ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ.

ಸರ್ವೇಶ್ ಸಿಂಗ್
ಬಿಜೆಪಿ ಪ್ರಚಾರಕ್ಕೆ ಸಹಾಯ ಮಾಡಲು ಚುನಾವಣಾ ಆಯೋಗ ಏಳು ಹಂತದ ಚುನಾವಣೆ ನಡೆಸುತ್ತಿದೆ: ಮಮತಾ

ಸರ್ವೇಶ್ ಸಿಂಗ್ ಅವರ ಬಾಯಲ್ಲಿ ಏನೋ ಸಮಸ್ಯೆ ಇತ್ತು. ಇದರಿಂದಾಗಿ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದರಿಂದಾಗಿ ಲೋಕಸಭೆಗೆ ನಾಮಪತ್ರ ಸಲ್ಲಿಸಿದ ದಿನದಿಂದಲೂ ಕ್ಷೇತ್ರದಿಂದ ನಾಪತ್ತೆಯಾಗಿದ್ದರು. ಅವರ ಪುತ್ರ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ವಿಶ್ರಾಂತಿ ಪಡೆದ ನಂತರ ಅವರು ಅಮಿತ್ ಶಾ ರ್ಯಾಲಿಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಏಪ್ರಿಲ್ 19ರಂದು ಮತದಾನದ ನಂತರ ಮತ್ತೆ ಅಸ್ವಸ್ಥಗೊಂಡ ಅವರು ಶುಕ್ರವಾರ ತಡರಾತ್ರಿ ದೆಹಲಿಯ ಏಮ್ಸ್‌ಗೆ ವೈದ್ಯರನ್ನು ಭೇಟಿಯಾಗಲು ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ.

2014ರಲ್ಲಿ ಮೊರಾದಾಬಾದ್‌ನಿಂದ ಗೆದ್ದಿದ್ದ ಸಂಸದ

ಕುನ್ವರ್ ಸರ್ವೇಶ್ ಸಿಂಗ್ ಅವರು 2014ರಲ್ಲಿ ಮೊರಾದಾಬಾದ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು 2009 ರಲ್ಲಿ, ಅವರು ಮೊದಲ ಬಾರಿಗೆ ಈ ಕ್ಷೇತ್ರದಿಂದ ಎಂಪಿ ಚುನಾವಣೆಗೆ ಸ್ಪರ್ಧಿಸಿದರು ಆದರೆ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಅಜರುದ್ದೀನ್ ವಿರುದ್ಧ ಸೋತಿದ್ದರು. 2019ರಲ್ಲಿಯೂ ಸಹ ಬಿಜೆಪಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿತು. ಆದರೆ ಅವರು ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಯಲ್ಲಿ ಎಸ್‌ಪಿ ಅಭ್ಯರ್ಥಿ ಡಾ. ಎಸ್‌ಟಿ ಹಸನ್ ವಿರುದ್ಧ ಸೋತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com