ಬಿಹಾರ: ಏಕೈಕ ಎನ್ ಡಿಎ ಮುಸ್ಲಿಂ ಸಂಸದ ಆರ್‌ಜೆಡಿ ಸೇರ್ಪಡೆ

ಲೋಕಸಭಾ ಚುನಾವಣೆ ನಡುವೆಯೇ ಬಿಹಾರದಲ್ಲಿ ಎನ್ ಡಿಎಯ ಏಕೈಕ ಮುಸ್ಲಿಂ ಸಂಸದ ಮೆಹಬೂಬ್ ಅಲಿ ಕೈಸರ್ ಭಾನುವಾರ ಆರ್ ಜೆಡಿಗೆ ಸೇರ್ಪಡೆಗೊಂಡಿದ್ದಾರೆ.
ಸಂಸದ ಮೆಹಬೂಬ್ ಅಲಿ ಕೈಸರ್
ಸಂಸದ ಮೆಹಬೂಬ್ ಅಲಿ ಕೈಸರ್

ಪಾಟ್ನಾ: ಲೋಕಸಭಾ ಚುನಾವಣೆ ನಡುವೆಯೇ ಬಿಹಾರದಲ್ಲಿ ಎನ್ ಡಿಎಯ ಏಕೈಕ ಮುಸ್ಲಿಂ ಸಂಸದ ಮೆಹಬೂಬ್ ಅಲಿ ಕೈಸರ್ ಭಾನುವಾರ ಆರ್ ಜೆಡಿಗೆ ಸೇರ್ಪಡೆಗೊಂಡಿದ್ದಾರೆ. ಎಲ್ ಜೆಪಿ ವಿಭಜನೆ ನಂತರ ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರ ಕಡೆಯಿದ್ದ ಕೈಸರ್ ಅವರಿಗೆ ಚಿರಾಗ್ ಪಾಸ್ವಾನ್ ಈ ಬಾರಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಅವರ ಸಮ್ಮುಖದಲ್ಲಿ ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗಿನ ಸಭೆಯ ನಂತರ ಕೈಸರ್-ಸಾಹೇಬ್ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ಅವರ ಅನುಭವದಿಂದ ನಮಗೆ ಲಾಭವಾಗಲಿದೆ. ಇದು ಆಡಳಿತ ಪಕ್ಷದಿಂದ ಬೆದರಿಕೆ ಎದುರಿಸುತ್ತಿರುವ ಸಂವಿಧಾನ ರಕ್ಷಿಸುವ ನಮ್ಮ ಹೋರಾಟದ ಪರವಾಗಿ ಬಲವಾದ ಸಂದೇಶವನ್ನು ರವಾನಿಸುವ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರ್ ರಾಜ್ಯವನ್ನು ಆಳಿದ ಕುಟುಂಬದಲ್ಲಿ ಜನಿಸಿದ ಕೈಸರ್ ಅವರು ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2013 ರವರೆಗೆ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು. 2014ರಲ್ಲಿ ಅವರು ಎಲ್ ಜೆಪಿಗೆ ಸೇರಿ ಖಗರಿಯಾ ಸ್ಥಾನದಿಂದ ಗೆದಿದ್ದರು. ನಂತರ 2019ರ ಚುನಾವಣೆಯಲ್ಲೂ ಗೆದ್ದು ಸಂಸದರಾಗಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅವರ ಮಗ ಯೂಸುಫ್ ಸಲಾವುದ್ದೀನ್‌ಗೆ ಟಿಕೆಟ್ ನಿರಾಕರಿಸಿದಾಗ ಆಗಿನ LJP ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರೊಂದಿಗಿನ ಸಂಬಂಧ ಹದಗೆಡಲು ಪ್ರಾರಂಭಿಸಿತು.

ಸಂಸದ ಮೆಹಬೂಬ್ ಅಲಿ ಕೈಸರ್
ಬಿಹಾರ: ಬಿಜೆಪಿ ತೊರೆದು ಸಂಸದ ಅಜಯ್ ನಿಶಾದ್ ಕಾಂಗ್ರೆಸ್‌ ಸೇರ್ಪಡೆ!

ಸಲಾವುದ್ದೀನ್ ಆರ್‌ಜೆಡಿ ಟಿಕೆಟ್‌ನಲ್ಲಿ ಸಿಮ್ರಿ ಭಕ್ತಿಯಾರ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ತಾನು ಸ್ಪರ್ಧಿಸುತ್ತಿರುವ 23 ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಆರ್‌ಜೆಡಿ, ಈ ಚುನಾವಣೆಯಲ್ಲಿ ಕೈಸರ್ ಅವರನ್ನು ಕಣಕ್ಕಿಳಿಸಲಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com