ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ: 9 ಮಂದಿ ಸಾವು

ಮೃತರನ್ನು ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡುತ್ತಿರುವುದು
ಮೃತರನ್ನು ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡುತ್ತಿರುವುದು

ಕೋಟಾ: ರಾಜಸ್ಥಾನದ ಜಲಾವರ್‌ನಲ್ಲಿ ಭಾನುವಾರ ಮುಂಜಾನೆ ಟ್ರಕ್‌ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 16ರಿಂದ 30 ವರ್ಷ ವಯಸ್ಸಿನ ಪುರುಷರು ಮೃತಪಟ್ಟವರಾಗಿದ್ದು, ಮಧ್ಯಪ್ರದೇಶದ ಡುಂಗ್ರಿ ಗ್ರಾಮದಲ್ಲಿ ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ಮೃತಪಟ್ಟವರಲ್ಲಿ ರೋಹಿತ್(16 ವ), ಸೋನು(22ವ) ಮತ್ತು ದೀಪಕ್(24 ವ) ಸಹೋದರರು ಸೇರಿದ್ದಾರೆ ಎಂದು ಎಕ್ಲೇರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಸಂದೀಪ್ ವಿಶೋನಿ ತಿಳಿಸಿದ್ದಾರೆ.

ಉಳಿದ ಮೃತರನ್ನು ಅಶೋಕ್(24) ಹೇಮರಾಜ್(33), ರವಿಶಂಕರ್(25) ಮತ್ತು ರಾಹುಲ್(20) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಜಲಾವರದ ಎಕ್ಲೇರಾ ಗ್ರಾಮದ ಬಗರಿ ಮೊಹಲ್ಲಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರು ರೋಹಿತ್ (22ವ) ಮತ್ತು ರಾಮ್‌ಕಿಶನ್ (20ವ) ಅವರು ಬರಾನ್ ಜಿಲ್ಲೆಯ ಜಲಾವರ್‌ನ ಖಾನ್‌ಪುರ ಮತ್ತು ಹರ್ನಾವ್ಡಾ ಪ್ರದೇಶದವರು. 18 ವರ್ಷದ ಮನೀಶ್ ಬಗರಿ ಅವರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶೋನಿ ತಿಳಿಸಿದ್ದಾರೆ.

ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು. ಮಾರುತಿ ಸುಜುಕಿ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಗೌತಮ್ ತಿಳಿಸಿದ್ದಾರೆ.

ಸಂಬಂಧಿ ಗೋಪಾಲ್ ಬಗರಿ ಅವರ ಪ್ರಕಾರ, ಸುಮಾರು 35-40 ಬಾರಾತಿಗಳು ಡುಂಗ್ರಿಯಿಂದ ಮೂರು ಓಮ್ನಿಗಳು ಮತ್ತು ಎರಡು ಪಿಕ್ ಅಪ್ ವಾಹನಗಳಲ್ಲಿ ಮಧ್ಯರಾತ್ರಿ 12.30 ರ ಸುಮಾರಿಗೆ ಹೊರಟಿದ್ದರು. ದಾರಿಯಲ್ಲಿ ಬಗರಿ ಭೋಪಾಲ್ ರಸ್ತೆಯ ಖಿಮ್ಚಿ ಗ್ರಾಮದಲ್ಲಿ ಚಹಾ ಕುಡಿಯಲು ನಿಂತಾಗ, ಇನ್ನೊಂದು ಕಾರು ಮುಂದೆ ಸಾಗಿತು.

ಸುಮಾರು 10 ನಿಮಿಷಗಳ ವಿರಾಮದ ನಂತರ, ತಮ್ಮ ಪಯಣವನ್ನು ಪುನರಾರಂಭಿಸಿದರು, ಕೆಲವು ನಿಮಿಷಗಳ ಪ್ರಯಾಣದ ನಂತರ, 2.15 ರ ಸುಮಾರಿಗೆ, ಪಚೋಲಾ ಗ್ರಾಮದ ಬಳಿ ಟ್ರಕ್‌ನಲ್ಲಿ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಕಾರು ಕಂಡುಬಂದಿದೆ.

ತೀವ್ರವಾಗಿ ಗಾಯಗೊಂಡವರನ್ನು ಹೊರತರಲು ರಕ್ಷಕರು ಕಾರಿನ ಹಿಂದಿನ ಗೇಟ್ ನ್ನು ಮುರಿಯಬೇಕಾಯಿತು, ಅವರಲ್ಲಿ ಕನಿಷ್ಠ ಇಬ್ಬರು ಮುಂಭಾಗದಲ್ಲಿ ಸಿಲುಕಿಕೊಂಡಿದ್ದರು. ಇವರಲ್ಲಿ ಐವರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ನಾಲ್ವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

ಒಂಭತ್ತು ಮಂದಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com