ರಾಹುಲ್ ಗಾಂಧಿ ನೆಹರೂ ಕುಟುಂಬದಲ್ಲೇ ಹುಟ್ಟಿದ್ನಾ, ಅವರ DNA ಪರೀಕ್ಷಿಸಬೇಕು: ಕೇರಳ ಶಾಸಕ ಹೇಳಿಕೆ

ಕೇರಳದ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ರಾಹುಲ್ ಗಾಂಧಿ ಅವರ ಡಿಎನ್‌ಎ ತಪಾಸಣೆ ಮಾಡಿಸಿಕೊಳ್ಳುವಂತೆ ರಾಜ್ಯದ ಶಾಸಕರೊಬ್ಬರು ಸಲಹೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
Rahul Gandhi
ರಾಹುಲ್ ಗಾಂಧಿ
Updated on

ತಿರುವನಂತಪುರಂ: ಕೇರಳದ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ರಾಹುಲ್ ಗಾಂಧಿ ಅವರ ಡಿಎನ್‌ಎ ತಪಾಸಣೆ ಮಾಡಿಸಿಕೊಳ್ಳುವಂತೆ ರಾಜ್ಯದ ಶಾಸಕರೊಬ್ಬರು ಸಲಹೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಬೆಂಬಲಿಗ, ಸ್ವತಂತ್ರ ಶಾಸಕ ಪಿವಿ ಅನ್ವರ್, ರಾಹುಲ್ ಗಾಂಧಿ 'ಕೆಳವರ್ಗದ ನಾಗರಿಕ' ಎಂದು ಹೇಳಿದ್ದಾರೆ. ಪಾಲಕ್ಕಾಡ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಿಲಂಬೂರ್ ಶಾಸಕ, 'ನಾನು ರಾಹುಲ್ ಗಾಂಧಿ ಅವರ ಕ್ಷೇತ್ರವಾದ ವಯನಾಡಿನ ಭಾಗವಾಗಿದ್ದೇನೆ. ನಾನು ಅವರನ್ನು ಗಾಂಧಿ ಎಂಬ ಉಪನಾಮದಿಂದ ಕರೆಯಲಾರೆ. ಅಷ್ಟು ಕೀಳು ಮಟ್ಟದ ಪ್ರಜೆಯಾಗಿಬಿಟ್ಟಿದ್ದಾನೆ. ಗಾಂಧಿ ಎಂಬ ಉಪನಾಮದಿಂದ ಕರೆಸಿಕೊಳ್ಳುವ ಅರ್ಹತೆ ಆತನಿಗಿಲ್ಲ, ನಾನು ಇದನ್ನು ಹೇಳುತ್ತಿಲ್ಲ, ಕಳೆದ ಎರಡು ದಿನಗಳಿಂದ ಭಾರತದ ಜನ ಹೀಗೆ ಹೇಳುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರಾಹುಲ್ ಗಾಂಧಿ ಹೇಳಿಕೆಗೆ ಅನ್ವರ್ ಕೋಪಗೊಂಡಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಪಿಣರಾಯಿ ವಿಜಯನ್ ವಿರುದ್ಧ ಹಲವಾರು ಆರೋಪ ಮಾಡಿದ್ದರೂ, ಕೇಂದ್ರ ಏಜೆನ್ಸಿಗಳಿಂದ ವಿಚಾರಣೆ ಮತ್ತು ಬಂಧನದಿಂದ ವಿನಾಯಿತಿ ನೀಡಿದ್ದು ಏಕೆ ಎಂದು ಕೇಳಿದ್ದರು.

Rahul Gandhi
ರಾಹುಲ್ ಗಾಂಧಿ ದೇಶ ಮುನ್ನಡೆಸಬೇಕು ಎಂಬುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಆಶಯ: ಸುರ್ಜೇವಾಲಾ

ನೆಹರು ಕುಟುಂಬದಲ್ಲಿ ಇಂತಹ ಸದಸ್ಯರು ಇರುತ್ತಾರಾ ಎಂದು ಪಕ್ಷೇತರ ಶಾಸಕ ಅನ್ವರ್ ಹೇಳಿದ್ದಾರೆ. ನೆಹರೂ ಕುಟುಂಬದಲ್ಲಿ ಹುಟ್ಟಿದವರು ಹೀಗೆ ಹೇಳಬಹುದೇ? ನನಗೆ ತುಂಬಾ ಅನುಮಾನವಿದೆ. ರಾಹುಲ್ ಗಾಂಧಿಯವರ ಡಿಎನ್ ಎ ಪರೀಕ್ಷೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಜವಾಹರಲಾಲ್ ನೆಹರು ಅವರ ಮೊಮ್ಮಗ ಎಂದು ಕರೆಯುವ ಹಕ್ಕು ರಾಹುಲ್‌ಗೆ ಇಲ್ಲ. ರಾಹುಲ್ ಗಾಂಧಿ ಪ್ರಧಾನಿ ಮೋದಿಯ ಏಜೆಂಟರೇ ಎಂದು ಯೋಚಿಸಬೇಕು ಎಂದು ಹೇಳಿದ್ದರು.

ಅನ್ವರ್ ಹೇಳಿಕೆಗೆ ಕಾಂಗ್ರೆಸ್ ಕಟುವಾಗಿ ಪ್ರತಿಕ್ರಿಯಿಸಿದೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಂ.ಹಸನ್ ಮಾತನಾಡಿ, ಪಕ್ಷೇತರ ಶಾಸಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಪೊಲೀಸರು ಕೂಡಲೇ ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಅನ್ವರ್ ನೆಹರು ಕುಟುಂಬ ಹಾಗೂ ರಾಹುಲ್ ಗಾಂಧಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com