Lok Sabha Elections 2024: ರಾಜಸ್ಥಾನದಲ್ಲಿ ತನ್ನದೇ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಪ್ರಚಾರ!

ಲೋಕಸಭಾ ಚುನಾವಣೆ 2024 ರ 2 ನೇ ಹಂತದ ಮತದಾನ ಏ.26 ರಂದು ನಡೆಯಲಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನದೇ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುತ್ತಿದೆ.
ಕಾಂಗ್ರೆಸ್
ಕಾಂಗ್ರೆಸ್online desk

ರಾಜಸ್ಥಾನ: ಲೋಕಸಭಾ ಚುನಾವಣೆ 2024 ರ 2 ನೇ ಹಂತದ ಮತದಾನ ಏ.26 ರಂದು ನಡೆಯಲಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನದೇ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುತ್ತಿದೆ.

ಬುಡಕಟ್ಟು ಜನರು ಹೆಚ್ಚಾಗಿರುವ ಬನ್ಸ್ವರ-ಡುಂಗರಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡುತ್ತಿದ್ದು, ಜನತೆಗೆ ತನ್ನ ಅಭ್ಯರ್ಥಿ ಪರ ಮತ ಹಾಕದಂತೆ ಮನವಿ ಮಾಡುತ್ತಿದೆ.

ಕಾಂಗ್ರೆಸ್ ನಿಂದ ಅಧಿಕೃತ ಅಭ್ಯರ್ಥಿಯಾಗಿ ಅರವಿಂದ್ ದಾಮೋರ್ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಪಕ್ಷ ಈ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಕರೆ ನೀಡಿದೆ. ಪರಿಣಾಮ ಈಗ ಬಿಜೆಪಿ- ಕಾಂಗ್ರೆಸ್ ಹಾಗೂ ಭಾರತ್ ಆದಿವಾಸಿ ಪಕ್ಷ ( ಬಿಎಪಿ) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್
ಲೋಕಸಭಾ ಚುನಾವಣೆ: ಬೆಂ. ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಪಟ್ಟು ಹೆಚ್ಚಿನ ಅರಸೇನಾಪಡೆ ನಿಯೋಜನೆ- ಮನೋಜ್ ಕುಮಾರ್ ಮೀನಾ

ದಾಮೋರ್ ಗೆ ಮತ ಚಲಾವಣೆಯಾದರೆ ಕಾಂಗ್ರೆಸ್ ನ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿ ಮಹೇಂದ್ರ ಜಿತ್ ಸಿಂಗ್ ಮಾಲವೀಯಾಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.

ಏಕೆಂದರೆ, ಕಾಂಗ್ರೆಸ್ ಪಕ್ಷ ಹಲವು ತಿರುವುಗಳ ನಂತರ, ತನ್ನ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ಭಾರತ್ ಆದಿವಾಸಿ ಪಕ್ಷ (ಬಿಎಪಿ) ಜೊತೆ ಮೈತ್ರಿ ಮಾಡಿಕೊಂಡಿತ್ತು. ಬಳಿಕ ಕಾಂಗ್ರೆಸ್-ಬಿಎಪಿ ಅಭ್ಯರ್ಥಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಅರವಿಂದ್ ದಾಮೋರ್ ನಾಮಪತ್ರ ಹಿಂಪಡೆಯುವುದಕ್ಕೆ ನಿರಾಕರಿಸಿ ಕಣದಲ್ಲೇ ಉಳಿದರು.

ಕಾಂಗ್ರೆಸ್
ಲೋಕಸಭಾ ಚುನಾವಣೆ 2024: 2ನೇ ಹಂತದ ಮತದಾನಕ್ಕೆ heat wave ಆತಂಕ; ಆಯೋಗಕ್ಕೆ IMD ಮಾಹಿತಿ

ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಎಪಿ ಹಾಗೂ ಬಿಜೆಪಿ ನಡುವೆ ನಡೆಯಬೇಕಿದ್ದ ಹಣಾಹಣಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿರುವುದರ ಪರಿಣಾಮ ಮೈತ್ರಿ ಅಭ್ಯರ್ಥಿಗೆ ಸಮಸ್ಯೆಯಾಗಲಿದ್ದು, ದಾಮೋರ್ ಗೆ ಮತ ಚಲಾವಣೆಯಾದರೆ ಕಾಂಗ್ರೆಸ್ ನ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿ ಮಹೇಂದ್ರ ಜಿತ್ ಸಿಂಗ್ ಮಾಲವೀಯಾಗೆ ಅನುಕೂಲವಾಗಲಿದೆ.

ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನದೇ ಅಭ್ಯರ್ಥಿಯ ವಿರುದ್ಧ ಪ್ರಚಾರದಲ್ಲಿ ತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com