Loksabha Election 2024: ಇಡೀ ದೇಶವೇ ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಬಯಸುತ್ತಿದೆ: Robert Vadra

ಇಡೀ ದೇಶವೇ ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಬಯಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಕೈಗಾರಿಕೋದ್ಯಮಿ ರಾಬರ್ಟ್ ವಾದ್ರಾ (Robert Vadra) ಹೇಳಿದ್ದಾರೆ.
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ನವದೆಹಲಿ: ಇಡೀ ದೇಶವೇ ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಬಯಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ಕೈಗಾರಿಕೋದ್ಯಮಿ ರಾಬರ್ಟ್ ವಾದ್ರಾ (Robert Vadra) ಹೇಳಿದ್ದಾರೆ.

ಈ ಹಿಂದೆ ಅಮೇಥಿಯ (Amethi) ಜನರು ನನ್ನ ಸ್ಪರ್ಧೆ ಬಯಸಿದ್ದಾರೆ ಎಂದು ಹೇಳಿದ್ದ ರಾಬರ್ಟ್ ವಾದ್ರಾ ಇದೀಗ ನಾನು ಸಕ್ರಿಯ ರಾಜಕಾರಣಕ್ಕೆ (Politics) ಬರಬೇಕೆಂಬುದು ದೇಶದ ಕರೆಯಾಗಿದೆ ಎಂದು ಹೇಳಿದ್ದಾರೆ.

ಋಷಿಕೇಶ್ ತ್ರಿವೇಣಿ ಘಾಟ್‌ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, 'ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ರಾಜಕೀಯ ತಪ್ಪು, ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು. ಬಿಜೆಪಿ (BJP) ಆಡಳಿತದಲ್ಲಿ ಸಾಮಾನ್ಯ ನಾಗರಿಕರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಜನರಲ್ಲಿ ಭಯವನ್ನು ಹರಡುವುದು ಬಿಜೆಪಿಯ ಆಡಳಿತದ ವಿಧಾನವಾಗಿದೆ. ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ನಂತರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.

ರಾಬರ್ಟ್ ವಾದ್ರಾ
ಕಲಬುರಗಿ: ಐಟಿ ಅಧಿಕಾರಿಗಳ ದಾಳಿ, 2 ಕೋಟಿ ರೂ. ನಗದು ಜಪ್ತಿ, ಕಾಂಗ್ರೆಸ್ ಮಾಜಿ ಮೇಯರ್ ಕಾರು ವಶ

ಅಮೇಥಿಯಿಂದ ಚುನಾವಣೆಗೆ (Lok Sabha Election) ಸ್ಪರ್ಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಬರ್ಟ್ ವಾದ್ರಾ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕು ಎಂಬುದು ಇಡೀ ದೇಶದ ಕರೆಯಾಗಿದೆ. ನಾನು ಯಾವಾಗಲೂ ದೇಶದ ಜನರಿಗಾಗಿ ಹೋರಾಡುತ್ತೇನೆ.

ನಾನು ಜನರ ನಡುವೆ ಬದುಕುತ್ತೇನೆ. ಸಮಾಜಕ್ಕಾಗಿ ದುಡಿಯುತ್ತೇನೆ. ನಾನು ಯಾವಾಗಲೂ ದೇಶದ ಜನರ ನಡುವೆ ಇದ್ದೇನೆ, ನಾನು ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಅವರು ಬಯಸುತ್ತಿದ್ದಾರೆ. ಜನರು ಯಾವಾಗಲೂ ನಾನು ಅವರ ಪ್ರದೇಶದಲ್ಲಿ ಇರಬೇಕೆಂದು ಬಯಸುತ್ತಾರೆ. ನಾನು 1999 ರಿಂದ ಅಲ್ಲಿ (ಅಮೇಥಿ) ಪ್ರಚಾರ ಮಾಡಿದ್ದೇನೆ ಎಂದರು.

ಅಮೇಥಿ ಸಂಸದೆ ಸ್ಮೃತಿ ಇರಾನಿ ಯಾವುದೇ ಭರವಸೆ ಈಡೇರಿಸಿಲ್ಲ

ಇದೇ ವೇಳೆ ಅಮೇಥಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಕಿಡಿಕಾರಿದ ರಾಬರ್ಟ್ ವಾದ್ರಾ, 'ಅಮೇಥಿಯ ಹಾಲಿ ಸಂಸದೆ ಸ್ಮೃತಿ ಇರಾನಿ ಅವರು ಚುನಾವಣೆಗೂ ಮುನ್ನ ತಾವು ನೀಡಿದ್ದ ತಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ. ಅವರು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಬಿಜೆಪಿಯನ್ನು ತೊಡೆದುಹಾಕಲು ಬಯಸುತ್ತಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರ ಶ್ರಮವನ್ನು ನೋಡುತ್ತಿರುವ ಭಾರತದ ಜನರು ಗಾಂಧಿ ಕುಟುಂಬದೊಂದಿಗೆ ಇದ್ದಾರೆ. ಗಾಂಧಿ ಕುಟುಂಬದ ಸದಸ್ಯರು ಹಿಂತಿರುಗಬೇಕೆಂದು ಜನ ಬಯಸುತ್ತಿದ್ದಾರೆ. ಅವರು ದೊಡ್ಡ ಅಂತರದಿಂದ ಗೆಲುವು ನೀಡಲಿದ್ದಾರೆ. ನಾನು ರಾಜಕೀಯದಲ್ಲಿ ನನ್ನ ಮೊದಲ ಹೆಜ್ಜೆ ಇಟ್ಟರೆ ಮತ್ತು ಸಂಸದನಾಗಲು ಯೋಚಿಸಿದರೆ ನಾನು ಅಮೇಥಿಯನ್ನು ಪ್ರತಿನಿಧಿಸಬೇಕೆಂದು ಅವರು ನಿರೀಕ್ಷಿಸುತ್ತಾರೆ ಎಂದು ಹೇಳಿದರು.

ರಾಬರ್ಟ್ ವಾದ್ರಾ
ಚುನಾವಣೆ ನಡೆಯುತ್ತಿರುವ 14 ಸ್ಥಾನಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆ- ಡಾ. ಜಿ.ಪರಮೇಶ್ವರ್

ಆದಾಗ್ಯೂ, ಅಮೇಠಿ ಮತ್ತು ರಾಯ್ ಬರೇಲಿ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್ ನಾಯಕತ್ವವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಾದ್ರಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com