ವೈದ್ಯಕೀಯ ಸೀಟು ಆಕಾಂಕ್ಷಿ ಕೋಚಿಂಗ್ ಹಬ್ ಕೋಟಾದಲ್ಲಿ 1 ವಾರದಿಂದ ನಾಪತ್ತೆ!

20 ವರ್ಷದ ಎನ್ ಇಇಟಿ ಆಕಾಂಕ್ಷಿಯೊಬ್ಬರು ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ 1 ವಾರದಿಂದ ನಾಪತ್ತೆಯಾಗಿದ್ದಾರೆ.
ವೈದ್ಯಕೀಯ ಸೀಟು ಆಕಾಂಕ್ಷಿ ಕೋಚಿಂಗ್ ಹಬ್ ಕೋಟಾದಲ್ಲಿ 1 ವಾರದಿಂದ ನಾಪತ್ತೆ!
Updated on

ನವದೆಹಲಿ: 20 ವರ್ಷದ ಎನ್ ಇಇಟಿ ಆಕಾಂಕ್ಷಿಯೊಬ್ಬರು ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ 1 ವಾರದಿಂದ ನಾಪತ್ತೆಯಾಗಿದ್ದಾರೆ.

ರಾಜಸ್ಥಾನದ ಕೋಟ ವೃತ್ತಿಪರ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಹಬ್ ಎಂದು ಗುರುತಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಅಧಿಕ ಒತ್ತಡದ ಕಾರಣದಿಂದಾಗಿ ಸದ್ದು ಮಾಡುತ್ತಿದೆ. ಇಲ್ಲಿ ತರಬೇತಿ ಪಡೆಯಲು ಬರುವ ಅನೇಕ ವಿದ್ಯಾರ್ಥಿಗಳು ಒತ್ತಡದ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ವೈದ್ಯಕೀಯ ಸೀಟು ಆಕಾಂಕ್ಷಿ ಕೋಚಿಂಗ್ ಹಬ್ ಕೋಟಾದಲ್ಲಿ 1 ವಾರದಿಂದ ನಾಪತ್ತೆ!
ರಾಜಸ್ಥಾನ: ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಹಾರದ ಎನ್ಇಇಟಿ ಆಕಾಂಕ್ಷಿಯ ರಕ್ಷಣೆ

ಉತ್ತರ ಪ್ರದೇಶದ ಕುಶಿನಗರ್ ನ ತೃಪ್ತಿ ಸಿಂಗ್ (20) ಏ.23 ರಿಂದ ನಾಪತ್ತೆಯಾಗಿದ್ದು, ಆಕೆ 21 ರಂದು ಪರೀಕ್ಷೆ ಬರೆಯಲು ತೆರಳಿದ್ದರು ಆ ಬಳಿಕ ವಾಪಸ್ಸಾಗಿಲ್ಲ ಎಂದು ಹೇಳಲಾಗುತ್ತಿದೆ. ತೃಪ್ತಿ ಸಿಂಗ್ ಗೋಬ್ರಿಯಾ ಬಾವ್ಡಿ ಪ್ರದೇಶದಲ್ಲಿ ಹಾಸ್ಟೆಲ್ ನಲ್ಲಿ ವಾಸವಿದ್ದರು. ಪಿಜಿ ಮಾಲಿಕರಿಂದ ತೃಪ್ತಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಏ.21 ರಂದು ಹೊರಗೆ ಹೋದ ಆಕೆ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ತೃಪ್ತಿ ಸಿಂಗ್ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರೂ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.

"ನಾವು ರೈಲ್ವೆ, ಬಸ್ ನಿಲ್ದಾಣಗಳಿಂದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ. ನಾವು ಯುಪಿಗೆ ಶೋಧ ತಂಡವನ್ನು ಸಹ ಕಳುಹಿಸಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯಕೀಯ ಸೀಟು ಆಕಾಂಕ್ಷಿ ಕೋಚಿಂಗ್ ಹಬ್ ಕೋಟಾದಲ್ಲಿ 1 ವಾರದಿಂದ ನಾಪತ್ತೆ!
ಕೋಚಿಂಗ್ ಪಡೆಯಲು ಆರ್ಥಿಕ ಮುಗ್ಗಟ್ಟು: ಯೂಟ್ಯೂಬ್ ತರಗತಿ, ಪುಸ್ತಕಗಳ ನೆರವಿನಿಂದಲೇ ಎನ್ಇಇಟಿ ತೇರ್ಗಡೆಯಾದ ರಿತಿಕಾ!

ಹೊಲಿದಿನಗಳ ಆಸುಪಾಸಿನಲ್ಲಿ ವಿದ್ಯಾರ್ಥಿನಿ ಬೃಂದಾವನಕ್ಕೆ ಭೇಟಿ ನೀಡಿದ್ದ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ, 19 ವರ್ಷದ NEET ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದು ಜನವರಿಯಿಂದ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಯ ಏಳನೇ ಪ್ರಕರಣವಾಗಿದೆ. 2023 ರಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com