Pakistan boat seized in Gujarat coast: 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ, 14 ಮಂದಿ ಬಂಧನ

ಭಾರತೀಯ ಕರಾವಳಿ ಭದ್ರತಾ ಪಡೆಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಬೋಟ್ ಅನ್ನು ಸೀಜ್ ಮಾಡಿ 14 ಜನರನ್ನು ಬಂಧಿಸಿದೆ.
ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ
ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ

ಅಹ್ಮದಾಬಾದ್: ಭಾರತೀಯ ಕರಾವಳಿ ಭದ್ರತಾ ಪಡೆಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಬೋಟ್ ಅನ್ನು ಸೀಜ್ ಮಾಡಿ 14 ಜನರನ್ನು ಬಂಧಿಸಿದೆ.

ಗುಜರಾತ್ ನ ಕರಾವಳಿಯಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಮನ್ವಯದಲ್ಲಿ ಅರಬ್ಬಿ ಸಮುದ್ರದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಪಾಕಿಸ್ತಾನದ ಬೋಟ್ ನಿಂದ 600 ಕೋಟಿ ರೂಪಾಯಿ ಮೌಲ್ಯದ 86 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದೆ, ಅಲ್ಲದೆ ಗುಜರಾತ್ ಕರಾವಳಿಯಲ್ಲಿ ಹಡಗಿನಲ್ಲಿದ್ದ 14 ಜನರನ್ನು ಬಂಧಿಸಲಾಗಿದೆ ಎಂದು ಕರಾವಳಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ
ECI ಹೊಸ ದಾಖಲೆ: 4,650 ಕೋಟಿ ರೂ. ಮೌಲ್ಯದ ನಗ-ನಾಣ್ಯ-ವಸ್ತು ವಶ, ಶೇ.45ರಷ್ಟು ಡ್ರಗ್ಸ್!

ಭಾರತೀಯ ಕೋಸ್ಟ್ ಗಾರ್ಡ್ 28 ಎಪ್ರಿಲ್ 24 ರಂದು ಸಮುದ್ರದಲ್ಲಿ ಗುಪ್ತಚರ-ಆಧಾರಿತ ಮಾದಕವಸ್ತು ವಿರೋಧಿ ಕಾರ್ಯಾಚರಣೆಯನ್ನು ಕೈಗೊಂಡಿತು. ಈ ವೇಳೆ 600 ಕೋಟಿ ಮೌಲ್ಯದ ಸುಮಾರು 86 ಕೆಜಿ ಮಾದಕ ವಸ್ತುವನ್ನು ಪಾಕಿಸ್ತಾನದ ಬೋಟ್ ನಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು 14 ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ದೋಣಿಯಿಂದ ಯಾವ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಇನ್ನೂ ಬಹಿರಂಗಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com