Loksabha Election 2024: ಇಂಡಿಯಾ ಕೂಟದಿಂದ ವರ್ಷಕ್ಕೊಬ್ಬ ಪ್ರಧಾನಿ; ಇಂಥವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ- Amit Shah

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಪುನರುಚ್ಛರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂತಹವರಿಂದ ದೇಶದ ಅಭಿವೃದ್ದಿ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.
Amit Shah
ಅಮಿತ್ ಶಾ
Updated on

ನವದೆಹಲಿ: INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬರು ಪ್ರಧಾನಿಯಾಗುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಪುನರುಚ್ಛರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂತಹವರಿಂದ ದೇಶದ ಅಭಿವೃದ್ದಿ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದ್ದಾರೆ.

ನಿನ್ನೆ ದಾವಣಗೆರೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಇಲ್ಲಿ ಎರಡೂವರೆ ವರ್ಷ ಒಬ್ಬೊಬ್ಬರು ಆಡಳಿತ ಮಾಡಬೇಕು ಎಂಬುದಿದೆ. ಈ ಚುನಾವಣೆಯಲ್ಲಿ ಇಂಡಿ ಒಕ್ಕೂಟಕ್ಕೆ ಅಧಿಕಾರ ಕೊಟ್ಟರೆ ವರ್ಷಕ್ಕೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು.

'ಈ ದೇಶ ಮೂರು ದಶಕಗಳ ಕಾಲ ಅಸ್ಥಿರತೆಯ ಬೆಲೆ ತೆತ್ತಿದ್ದು, ಅಸ್ಥಿರ ಸರ್ಕಾರಗಳು ಮೂರು ದಶಕಗಳ ಓಡಿತು. ಆದರೆ ಕಳೆದ 10 ವರ್ಷಗಳಲ್ಲಿ ದೇಶಕ್ಕೆ ಬಲವಾದ ನಾಯಕತ್ವ ಸಿಕ್ಕಿದೆ. ಇಂದು ದೇಶ ಪ್ರಬಲ ಸ್ಥಿರತೆಯನ್ನು ಪಡೆದುಕೊಂಡಿದೆ. ರಾಜಕೀಯ ಸ್ಥಿರತೆ ಮಾತ್ರವಲ್ಲ, ನೀತಿಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಸ್ಥಿರತೆ ಕಂಡುಬಂದಿದೆ.

Amit Shah
ಉದ್ಧವ್ 'ಶಿವಸೇನೆ ನಕಲಿ', ಇಂಡಿಯಾ ಬ್ಲಾಕ್‌ ಅಧಿಕಾರಕ್ಕೆ ಬಂದರೆ 'ವರ್ಷಕ್ಕೆ ಒಬ್ಬರಂತೆ 5 ಪ್ರಧಾನಿ': ಮೋದಿ

ಈಗ INDI ಮೈತ್ರಿಕೂಟವು ಶರದ್ ಪವಾರ್ ಒಂದು ವರ್ಷಕ್ಕೆ (ಪಿಎಂ) ಆಯ್ಕೆಯಾಗುತ್ತಾರೆ ಎಂದು ಹೇಳಿದರೆ, ಮಮತಾ ಬ್ಯಾನರ್ಜಿ ಒಂದು ವರ್ಷಕ್ಕೆ ಆಯ್ಕೆಯಾಗುತ್ತಾರೆ, ಸ್ಟಾಲಿನ್ ಒಂದು ವರ್ಷಕ್ಕೆ ಆಯ್ಕೆಯಾಗುತ್ತಾರೆ, ಮತ್ತು ಏನಾದರೂ ಬಿಟ್ಟರೆ ರಾಹುಲ್ ಗಾಂಧಿ ಆಯ್ಕೆಯಾಗುತ್ತಾರೆ. ದೇಶವನ್ನು ನಡೆಸುವುದು ಹೀಗಲ್ಲ. ಇಂತಹವರಿಂದ ದೇಶದ ಅಭಿವೃದ್ದಿ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.

ಏತನ್ಮಧ್ಯೆ, ದೇಶದಲ್ಲಿ ಲೋಕಸಭಾ ಚುನಾವಣೆ ಚಾಲ್ತಿಯಲ್ಲಿದ್ದರೂ ಕೂಡ ಈ ವರೆಗೂ INDIA ಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಈವರೆಗೂ ಘೋಷಣೆ ಮಾಡಿಲ್ಲ. ಸಾಕಷ್ಟು ಕಸರತ್ತುಗಳ ಬಳಿಕ INDIA ಒಕ್ಕೂಟದಲ್ಲಿ ಕ್ಷೇತ್ರಗಳ ಹಂಚಿಕೆಯಾಗಿದ್ದು, ಬಂಗಾಳದಲ್ಲಿ TMC, ಕೇರಳದಲ್ಲಿ CPM ಪಕ್ಷಗಳೊಂದಿಗಿನ ಗೊಂದಲ ಮುಂದುವರೆದೇ ಇದೆ.

ಮೂಲಗಳ ಪ್ರಕಾರ INDIA ಒಕ್ಕೂಟದ ಪಕ್ಷಗಳು ಗೆಲ್ಲುವ ಲೋಕಸಭಾ ಸ್ಥಾನಗಳ ಸಂಖ್ಯೆಗೆ ಅನುಗುಣವಾಗಿ "ತಲಾ ಒಂದು ವರ್ಷ" ಪ್ರಧಾನಿಯಾಗಿ ಒಂದು ಸೂತ್ರವನ್ನು ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com