ಅಸ್ಸಾಂ: ಲವ್ ಜಿಹಾದ್ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ, ಶೀಘ್ರದಲ್ಲಿಯೇ ಹೊಸ ಕಾನೂನು

''ಹೊಸ ವಾಸಸ್ಥಳ ನೀತಿಯನ್ನು ಪರಿಚಯಿಸಲಾಗುವುದು, ಇದರಡಿ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ'
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
Updated on

ಗುವಾಹಟಿ: 'ಲವ್ ಜಿಹಾದ್' ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ತಮ್ಮ ಸರ್ಕಾರ ಶೀಘ್ರದಲ್ಲೇ ಹೊಸ ಕಾನೂನನ್ನು ಪರಿಚಯಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 'ಚುನಾವಣೆ ಸಂದರ್ಭದಲ್ಲಿ ಲವ್ ಜಿಹಾದ್' ಬಗ್ಗೆ ಮಾತನಾಡಿದ್ದೆವು, ಅಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ಶೀಘ್ರದಲ್ಲಿಯೇ ತರುತ್ತೇವೆ ಎಂದರು.

ಅಲ್ಲದೇ, ಹೊಸ ವಾಸಸ್ಥಳ ನೀತಿಯನ್ನು ಪರಿಚಯಿಸಲಾಗುವುದು, ಇದರಡಿ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಚುನಾವಣಾ ಪೂರ್ವ ಭರವಸೆಯಂತೆ ಒಂದು ಲಕ್ಷ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಇದು ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಿದಾಗ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಖಂಡಿತ ಮುಸ್ಲಿಂರು ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗುವರು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಹಿಂದೂ-ಮುಸಲ್ಮಾನರ ನಡುವಿನ ಭೂಮಿ ಮಾರಾಟದ ಬಗ್ಗೆಯೂ ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ. ಅಂತಹ ವಹಿವಾಟನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೂ, ಮುಂದುವರಿಯುವ ಮೊದಲು ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶರ್ಮಾ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com