Jagdeep Dhankhar ಮಾತಿನ ಧಾಟಿ ಆಕ್ಷೇಪಾರ್ಹ, ಕ್ಷಮೆ ಕೇಳಬೇಕು: Jaya Bachchan

ಈ ವಾರದ ಆರಂಭದಲ್ಲೂ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದಕ್ಕೆ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದಾರೆ.
Jaya Amitabh Bachchan
ಜಗದೀಪ್ ಧಂಕರ್ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ
Updated on

ನವದೆಹಲಿ: Jaya Amitabh Bachchan ಎಂದು ಕರೆದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ (Jagdeep Dhankar) ವಿರುದ್ಧ ತೀವ್ರ ಕಿಡಿಕಾರಿರುವ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್, ''ಅವರ ಮಾತಿನ ಧಾಟಿ ಇರಲಿಲ್ಲ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೆ ಹೆಸರಿನ ವಿಚಾರವಾಗಿ ರಾಜ್ಯಸಭೆಯಲ್ಲಿ ಸ್ಪೀಕರ್ ಧಂಕರ್ ಮತ್ತು ಜಯಾ ಬಚ್ಚನ್ ನಡುವೆ ವಾಕ್ಸಮರ ನಡೆದಿದ್ದು, ಈ ವೇಳೆ ಸ್ಪೀಕರ್ ನಡೆಗೆ ಆಕ್ಷೇಪಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಶುಕ್ರವಾರ ರಾಜ್ಯಸಭೆಯಲ್ಲಿ “ಜಯಾ ಅಮಿತಾಭ್ ಬಚ್ಚನ್” ಎಂದು ಉಲ್ಲೇಖಿಸಿದ್ದಾರೆ.

ನನ್ನನ್ನು ಕ್ಷಮಿಸಿ, ಆದರೆ ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಧಂಕರ್, “ನೀವು ಸೆಲೆಬ್ರಿಟಿಯಾಗಿರಬಹುದು. ಆದರೆ ನೀವು ಇಲ್ಲಿನ ಶಿಷ್ಟಾಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಈ ವೇಳೆ ಇಬ್ಬರ ನಡುವಿನ ಮಾತಿನ ಚಕಮಕಿ ನಡೆದಿದೆ. ರಾಜ್ಯಸಭೆಯಲ್ಲಿ ಗದ್ದಲದ ನಡುವೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಜಯಾ ಬಚ್ಚನ್ ಅವರಿಗೆ ಬೆಂಬಲ ಸೂಚಿಸಿ ಸದನದಿಂದ ಹೊರನಡೆದಿವೆ.

Jaya Amitabh Bachchan
ರಾಜ್ಯಸಭೆಯಲ್ಲಿ ಮತ್ತೆ ''Jaya Amitabh Bachchan'' ಗದ್ದಲ: ವಿಪಕ್ಷಗಳಿಂದ ಸಭಾತ್ಯಾಗ

ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಮೇಲ್ಮನೆಯಲ್ಲಿ ‘ಜಯಾ ಅಮಿತಾಭ್ ಬಚ್ಚನ್’ ಗದ್ದಲ ಪುನರಾವರ್ತನೆಯಾಗುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಶುಕ್ರವಾರ ಮಧ್ಯಾಹ್ನ ರಾಜ್ಯಸಭೆಯಿಂದ ಹೊರನಡೆದಿವೆ. ಈ ಸಂಸತ್ತಿನ ಅಧಿವೇಶನದಲ್ಲಿ ಎರಡು ಬಾರಿ ಜಯಾ ಬಚ್ಚನ್ ಅವರನ್ನು ‘ಜಯಾ ಅಮಿತಾಭ್ ಬಚ್ಚನ್’ ಎಂದು ಪರಿಚಯಿಸಲಾಗಿದೆ.

ಈ ವಾರದ ಆರಂಭದಲ್ಲೂ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದಕ್ಕೆ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕಳೆದ ವಾರ ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ನಂತರ ನಟ-ರಾಜಕಾರಣಿಯು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. “ಸರ್, ಸಿರ್ಫ್ ಜಯಾ ಬಚ್ಚನ್ ಬೋಲ್ತೆ ತೋ ಕಾಫಿ ಹೋಜಾತಾ (ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು, ಸರ್)” ಎಂದು ಅವರು ಹೇಳಿದ್ದರು.

ಅವಮಾನಕರ ಅನುಭವ

ಸಭಾತ್ಯಾಗದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಾ ಬಚ್ಚನ್, “ಇದು ತುಂಬಾ ಅವಮಾನಕರ ಅನುಭವ… ಎಂದರು. ಅಂತೆಯೇ ಆಢಳಿತಾರೂಢ ಪಕ್ಷ ವಿಪಕ್ಷದವರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸ್ಪೀಕರ್ ತಮಗೆ ಕ್ಷಮೆ ಕೇಳಬೇಕು ಎಂದು ಜಯಾ ಆಗ್ರಹಿಸಿದರು.

ಜಯಾಗೆ ವಿಪಕ್ಷಗಳ ಬೆಂಬಲ

ಇನ್ನು ಶುಕ್ರವಾರ ಮಧ್ಯಾಹ್ನ, ‘ಜಯಾ ಅಮಿತಾಬ್ ಬಚ್ಚನ್’ ಎಂದು ಉಲ್ಲೇಖಿಸಿದಾಗ ಜಯಾ ಸಿಡಿಮಿಡಿಗೊಂಡಿದ್ದಾರೆ. ಇದಕ್ಕೆ , ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ನೀವು ನನಗೆ ಪಾಠ ಮಾಡಬೇಡಿ ಎಂದಿದ್ದಾರೆ. ಆದರೆ, ಜಯಾ ಬಚ್ಚನ್ ದೃಢವಾಗಿ ನಿಂತು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಧನ್ಖರ್ ವಿರುದ್ಧ ಪ್ರತಿಭಟನೆಗಳು ಹೆಚ್ಚಾದಾಗ ಮತ್ತು ವಿರೋಧ ಪಕ್ಷದ ಸಂಸದರು ಹೊರನಡೆದಿದ್ದರಿಂದ “ನನಗೆ ಅಧ್ಯಕ್ಷರಿಂದ ಕ್ಷಮೆ ಬೇಕು” ಎಂದು ಜಯಾ ಹೇಳಿದರು.

ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರೇನ್ ನೇತೃತ್ವದಲ್ಲಿ ವಿಪಕ್ಷ ಸಂಸತ್ತಿನ ಹೊರಗೆ ಜಮಾಯಿಸಿ ಜಯಾ ಅವರಿಗೆ ಬೆಂಬಲ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com