ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ಮಹಾನಿರ್ದೇಶಕರಾಗಿ ಐಪಿಎಸ್ ನಳಿನ್ ಪ್ರಭಾತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗೃಹ ಸಚಿವಾಲಯ ನೇಮಿಸಿದೆ. ಐಪಿಎಸ್ ನಳಿನ್ ಪ್ರಭಾತ್ ನಿಂದಾಗಿ ಶತ್ರುಗಳಿಗೆ ನಡುಕ ಶರುವಾಗಿದೆ.
ಸದ್ಯ ರಾಜ್ಯದ ಡಿಜಿಪಿ ಆಗಿರುವ ಆರ್ ಆರ್ ಸ್ವೈನ್ ಅವರು ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದಾರೆ. ನಳಿನ್ ಪ್ರಭಾತ್ ಅವರು ಅಕ್ಟೋಬರ್ 1ರಿಂದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. IPS ನಳಿನ್ ಪ್ರಭಾತ್ ಆಂಧ್ರಪ್ರದೇಶ ಕೇಡರ್‌ನ 1992 ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿ. ಸೆಪ್ಟೆಂಬರ್ 30ರಂದು ಆರ್ ಆರ್ ಸ್ವೈನ್ ನಿವೃತ್ತಿಯ ನಂತರ ನಳಿನ್ ಪ್ರಭಾತ್ ಅವರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನಳಿನ್ ಪ್ರಭಾತ್ ಅವರು ಸಂಯುಕ್ತ ಆಂಧ್ರಪ್ರದೇಶದಲ್ಲಿ ಮಾವೋವಾದಿಗಳ ನಿರ್ಮೂಲನೆಗೆ ಅವರು ಅನುಸರಿಸಿದ ವಿಧಾನಗಳನ್ನು ಕೇಂದ್ರ ಸರ್ಕಾರವೂ ಶ್ಲಾಘಿಸಿತ್ತು. ಅಲ್ಲದೆ ನಳಿನ್ ಪ್ರಭಾತ್ ಅವರು ಪೊಲೀಸ್ ಪದಕಗಳನ್ನು ಪಡೆದಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಳಿನ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಡಿಜಿಪಿಯಾಗಿ ನೇಮಕ ಮಾಡಿದೆ. ಅವರು ಮೂರು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮಂದುವರಿಯಲಿದ್ದಾರೆ.
Advertisement