
ಕೋಲ್ಕತಾ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರ್ಷದ ಅತ್ಯಂತ ನಿರೀಕ್ಷಿತ Devi Awards 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ನಟಿ ಪ್ರೀತಿ ಪಾಣಿಗ್ರಾಹಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ITC Royal Bengal ಹೊಟೆಲ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲ 13 ಮಂದಿ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಾವಿದೆ ಸಂಹಿತಾ, ನಟಿ ಪ್ರೀತಿ ಪಾಣಿಗ್ರಾಹಿ, ಪಾರಂಪರಿಕ ಸಂರಕ್ಷಣಾವಾದಿ ಮುಕುಲ್ ಅಗರ್ವಾಲ್, ಪಲ್ಲವಿ ಸಿಂಘೀ, ವಿಗ್ರಹ ತಯಾರಕಿ ಮಾಲಾ ಪೌಲ್, ದಾಮಿನಿ ಬೆನ್ನಿ ಬಸು, ಪ್ರಾಣಿ ಪ್ರೇಮಿ ಟೈಟಾಸ್ ಮುಖರ್ಜಿ, ಡಾ.ಪ್ರೀತಿ ಗಣತ್ರಾ, ಬ್ರಿಟಿಷ್ ರಾಜಕಾರಣಿ ಪ್ರೀತಿ ಪಟೇಲ್, ಚಲನಚಿತ್ರ ನಿರ್ಮಾಪಕಿ ಶರ್ಮಿಸ್ತಾ ಮೈತಿ, ಮಾನಸಿಕ ಆರೋಗ್ಯ ತಜ್ಞೆ ಡಾ.ಸಿಂಗರ್ ಬುಧಿ ಬರ್ನಾಲಿ ಚಟ್ಟೋಪಾಧ್ಯಾಯ, ಮತ್ತು ನಟಿ ಸುಭಾಶ್ರೀ ಗಂಗೂಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
Devi Awards ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭವಾಯಿತು. ಆ ವರ್ಷ ನಟಿ ಐಶ್ವರ್ಯಾ ರಾಜೇಶ್ ಮತ್ತು ಮಾನಸಿಕ ಆರೋಗ್ಯ ಕಾರ್ಯಕರ್ತೆ ವಂದನಾ ಗೋಪಿಕುಮಾರ್ ಸೇರಿದಂತೆ ರಾಜ್ಯದಾದ್ಯಂತ ಹತ್ತು ಮಹಿಳೆಯರನ್ನು ಗೌರವಿಸಲಾಗಿತ್ತು.
Advertisement