ಬಿಜೆಪಿ ಕಳೆದ 10 ವರ್ಷಗಳಲ್ಲಿ ಇತ್ತ ಜಾತ್ಯತೀತ ಅಥವಾ ಅತ್ತ ನಾಗರಿಕವೂ ಆಗಲಿಲ್ಲ: ಪ್ರಧಾನಿ ಭಾಷಣಕ್ಕೆ ಕಪಿಲ್ ಸಿಬಲ್ ಪ್ರತಿಕ್ರಿಯೆ

ಸ್ಟಾಪ್ ಲಾಗ್ ಗೇಟ್ ಕೂರಿಸಲು ಕನ್ನಯ್ಯ ಮತ್ತು ತಂಡದ ಸದಸ್ಯರು ಇಂದು ಹರಸಾಹಸ ಪಡುತ್ತಿದ್ದಾರೆ. ಸ್ಟಾಪ್‌ಲಾಗ್‌ಗಳನ್ನು ಅಳವಡಿಸಲು ಅಣೆಕಟ್ಟಿನ ಒಂದು ಬೀಮ್ ಅಡ್ಡಿಯಾಗುತ್ತಿದೆ ಎಂದು ಕೆಲವು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಕಳೆದ 10 ವರ್ಷಗಳಲ್ಲಿ ಇತ್ತ ಜಾತ್ಯತೀತ ಅಥವಾ ಅತ್ತ ನಾಗರಿಕವೂ ಆಗಲಿಲ್ಲ: ಪ್ರಧಾನಿ ಭಾಷಣಕ್ಕೆ ಕಪಿಲ್ ಸಿಬಲ್ ಪ್ರತಿಕ್ರಿಯೆ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು "ಜಾತ್ಯತೀತ ನಾಗರಿಕ ಸಂಹಿತೆ"ಗಾಗಿ ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಬಲವಾಗಿ ಪ್ರತಿಪಾದಿಸಿದ್ದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಜಾತ್ಯತೀತವೂ ಆಗಿಲ್ಲ, ನಾಗರಿಕ ಎಂದು ಅನಿಸಿಕೊಳ್ಳಲೂ ಇಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಅವರು, ಜಾತ್ಯತೀತ ಮತ್ತು ನಾಗರಿಕ ಸಮಾಜವನ್ನು ಹೊಂದಿರುವ ದೇಶವಾಗುವುದು ಈ ಸಮಯದ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೆಂಪು ಕೋಟೆಯ ಆವರಣದಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿ ಅವರು "ಜಾತ್ಯತೀತ ನಾಗರಿಕ ಸಂಹಿತೆ" ದೇಶದ ಅಗತ್ಯವಾಗಿದೆ ಎಂದು ಹೇಳಿದ್ದರು. ಈಗಿರುವ ಕಾನೂನುಗಳನ್ನು "ಕೋಮು ನಾಗರಿಕ ಸಂಹಿತೆ" ಎಂದು ವಿವರಿಸಿದ್ದ ಮೋದಿಯವರು ಅವು ತಾರತಮ್ಯವಾಗಿದೆ ಎಂದು ಹೇಳಿದ್ದರು.

ಮೋದಿಯವರ ಹೇಳಿಕೆಗಳನ್ನು ಉಲ್ಲೇಖಿಸಿ ಕಪಿಲ್ ಸಿಬಲ್, ಎಕ್ಸ್ ಪೋರ್ಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇಂದಿಗೆ ಖಂಡಿತವಾಗಿಯೂ ಬೇಕು, ಜಾತ್ಯತೀತ ನಾಗರಿಕ ಸಂಹಿತೆ ನಮಗೆ ಅತ್ಯಗತ್ಯವಾಗಿದೆ. ಕೋಮು ನಾಗರಿಕ ಸಂಹಿತೆಯ ಅಡಿಯಲ್ಲಿ 75 ವರ್ಷಗಳನ್ನು ನಾವು ಕಳೆದಿದ್ದೇವೆ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಆಗಿಯೇ ಇಲ್ಲ ಎಂದು ಕೂಡ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com