VIDEO: ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗಲೇ ತಲೆ ಮೇಲೆ AC ಬಿದ್ದು ಯುವಕ ಸಾವು, ಮತ್ತೋರ್ವ ಗಂಭೀರ

ದೆಹಲಿಯ ಡಿಬಿಜಿ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಆಗಷ್ಟೇ ದ್ವಿಚಕ್ರವಾಹನದಲ್ಲಿ ಬಂದ ಯುವಕ ತನ್ನ ಸ್ಥೇಹಿತನೊಂದಿಗೆ ಮಾತನಾಡುತ್ತಿದ್ದ ವೇಳೆ ಮೇಲೆ ಅಳವಡಿಸಲಾಗಿದ್ದ ಎಸಿ ಉರುಳಿ ಆತನ ತಲೆ ಮೇಲೆ ಬಿದ್ದಿದೆ.
Youth Dies, Another Injured After AC Falls On Them in Delhi
ತಲೆ ಮೇಲೆ ಬಿದ್ದ AC ಯುವಕ ಸಾವು
Updated on

ನವದೆಹಲಿ: ಸಾವು ಹೇಗೆಲ್ಲಾ ಬರುತ್ತದೆ ತಿಳಿಯುವುದೇ ಇಲ್ಲ.. ಇದೀಗ ಅಂತಹುದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ವರದಿಯಾಗಿದ್ದು, ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗಲೇ ತಲೆ ಮೇಲೆ ಎಸಿ ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ದೆಹಲಿಯ ಡಿಬಿಜಿ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಆಗಷ್ಟೇ ದ್ವಿಚಕ್ರವಾಹನದಲ್ಲಿ ಬಂದ ಯುವಕ ತನ್ನ ಸ್ಥೇಹಿತನೊಂದಿಗೆ ಮಾತನಾಡುತ್ತಿದ್ದ ವೇಳೆ ಮೇಲೆ ಅಳವಡಿಸಲಾಗಿದ್ದ ಎಸಿ ಉರುಳಿ ಆತನ ತಲೆ ಮೇಲೆ ಬಿದ್ದಿದೆ.

ಎಸಿ ಬಿದ್ದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನೊಂದಿಗೆ ಮಾತನಾಡುತ್ತಿದ್ದ ಮತ್ತೋರ್ವ ಸ್ನೇಹಿತನಿಗೂ ಗಂಭೀರ ಗಾಯವಾಗಿದೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ಪೈಕಿ ಎಸಿ ತಲೆ ಮೇಲೆ ಬಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Youth Dies, Another Injured After AC Falls On Them in Delhi
ಆ್ಯಕ್ಸಿಡೆಂಟ್ ಹಾಟ್ ಸ್ಪಾಟ್ ಆಗುತ್ತಿದೇ ಉಡುಪಿ NH 66, 2023ರಲ್ಲಿ 222 ಮಂದಿ ಸಾವು

ಮತ್ತೋರ್ವ ಪ್ರಾಂಶು ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಎಲ್ಲ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅಂತೆಯೇ ಮೃತ ವ್ಯಕ್ತಿಯ ಪತ್ತೆಯಾಗಿದ್ದು, ಆತನನ್ನು 18 ವರ್ಷದ ದೆಹಲಿ ನಿವಾಸಿ ಜಿತೇಶ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com