ಹಸೀನಾ ಪಕ್ಷದ ವಿದ್ಯಾರ್ಥಿ ಘಟಕದ ಮಾಜಿ ನಾಯಕ ಭಾರತಕ್ಕೆ ಬರುವಾಗ ಸಾವು

ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಇಶಾಕ್ ಅಲಿ ಖಾನ್ ಪನ್ನಾ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ ಎಂದು ಢಾಕಾ ಟ್ರಿಬ್ಯೂನ್ ವರದಿ ಪ್ರಕಟಿಸಿದೆ.
 Sheikh Hasina
ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ online desk
Updated on

ನವದೆಹಲಿ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷದ ವಿದ್ಯಾರ್ಥಿ ಘಟಕದ ಮಾಜಿ ನಾಯಕ ಭಾರತಕ್ಕೆ ಬರುವಾಗ ಸಾವನ್ನಪ್ಪಿದ್ದಾರೆ.

ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಇಶಾಕ್ ಅಲಿ ಖಾನ್ ಪನ್ನಾ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ ಎಂದು ಢಾಕಾ ಟ್ರಿಬ್ಯೂನ್ ವರದಿ ಪ್ರಕಟಿಸಿದೆ.

ಪನ್ನಾ ಅವರ ಸೋದರಳಿಯ ಲೈಕುಜ್ಜಮಾನ್ ತಾಲೂಕ್ಡರ್ ಮಿಂಟೂ, ಚಿರಾಪಾರ ಪರ್ ಸಟೋರಿಯಾ ಯೂನಿಯನ್ ಪರಿಷತ್ ಮತ್ತು ಕೌಖಾಲಿ ಉಪಜಿಲಾ ಅವಾಮಿ ಲೀಗ್‌ನ ಸಂಘಟನಾ ಕಾರ್ಯದರ್ಶಿ ಆಗಿರುವ ಅವರ ಸೋದರ ಸಂಬಂಧಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಬೆಟ್ಟದಿಂದ ಜಾರಿಬಿದ್ದು ಹೃದಯಾಘಾತಕ್ಕೆ ಕಾರಣರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಮತ್ತೊಬ್ಬ ಸಂಬಂಧಿ ಜಾಸಿಮ್ ಉದ್ದೀನ್ ಖಾನ್ ಅವರು ಮೂರು ದಿನಗಳ ಹಿಂದೆ ಪನ್ನಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಿದ್ದಾರೆ. ಪನ್ನಾ ಅವರು ಸಿಲ್ಹೆಟ್‌ನಲ್ಲಿರುವ ತಮಾಬಿಲ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದರು ಎಂಬ ಮಾಹಿತಿ ಇದ್ದು, ಅಲ್ಲಿ ಅವರು ಸಾವನ್ನಪ್ಪಿದರು ಎಂದು ಸಂಬಂಧಿಸಿದರು ತಿಳಿಸಿದ್ದಾರೆ.

 Sheikh Hasina
ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿದ ಬಾಂಗ್ಲಾದೇಶ

ಹಸೀನಾ ರಾಜೀನಾಮೆಯ ನಂತರ ಅವಾಮಿ ಲೀಗ್‌ನ ಬಹುತೇಕ ನಾಯಕರು ತಲೆಮರೆಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com