'ನಾನು ಪಕ್ಷಪಾತಿನೇ', ಅಸ್ಸಾಂ ಅನ್ನು ಮಿಯಾ ಮುಸ್ಲಿಮರು ವಶಪಡಿಸಿಕೊಳ್ಳಲು ಬಿಡಲ್ಲ: ಸಿಎಂ ಹಿಮಂತ ಬಿಸ್ವಾ ಶರ್ಮಾ

ನಾಗಾಂವ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷ ಆರೋಪ ಮಾಡಿದ್ದವು.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾPTI
Updated on

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಾನು ಪಕ್ಷಪಾತ ಮಾಡುತ್ತೇನೆ. ಅಲ್ಲದೆ 'ಮಿಯಾ' ಮುಸ್ಲಿಮರು ಅಸ್ಸಾಂ ಅನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ನಾಗಾಂವ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷ ಆರೋಪ ಮಾಡಿದ್ದವು. ಇದಕ್ಕೆ ಉತ್ತರಿಸಿದ ಹಿಮಂತ ಬಿಸ್ವಾ ಶರ್ಮಾ ಅವರು, ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಣದಲ್ಲಿಟ್ಟಿದ್ದರೆ ಅಪರಾಧ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ ಎಂದರು. ಕೆಲ ಪ್ರತಿಪಕ್ಷ ನಾಯಕರು ಮುಖ್ಯಮಂತ್ರಿ ವಿರುದ್ಧ ಆರೋಪಕ್ಕೆ ನಾನು ಪಕ್ಷಪಾತ ಮಾಡುತ್ತೇನೆ. ನೀವು ಏನು ಮಾಡಬಹುದು?' ಎಂದು ಶರ್ಮಾ ಕೇಳಿದರು. 'ಕೆಳಗಿನ ಅಸ್ಸಾಂನ ಜನರು ಮೇಲಿನ ಅಸ್ಸಾಂಗೆ ಏಕೆ ಹೋಗುತ್ತಾರೆ? ಹಾಗಾದರೆ ಮಿಯಾ ಮುಸ್ಲಿಮರು ಅಸ್ಸಾಂ ಅನ್ನು ವಶಪಡಿಸಿಕೊಳ್ಳುತ್ತಾರೆಯೇ? ಇದನ್ನು ಆಗಲು ನಾವು ಬಿಡುವುದಿಲ್ಲ ಎಂದರು.

ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ವಿಧಾನಸಭಾಧ್ಯಕ್ಷ ಬಿಸ್ವಜಿತ್ ಡೈಮರಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು. ಕಾಂಗ್ರೆಸ್, ಎಐಯುಡಿಎಫ್ ಮತ್ತು ಸಿಪಿಐ(ಎಂ) ಶಾಸಕರು ಮತ್ತು ಏಕೈಕ ಸ್ವತಂತ್ರ ಸದಸ್ಯ ಅಖಿಲ್ ಗೊಗೊಯ್ ಅವರು ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಸೇರಿದಂತೆ ಹೆಚ್ಚುತ್ತಿರುವ ಅಪರಾಧ ಘಟನೆಗಳಿಂದ ಉಂಟಾಗುವ ಪರಿಸ್ಥಿತಿಯನ್ನು ಚರ್ಚಿಸಲು ನಿರ್ಣಯವನ್ನು ಮಂಡಿಸಿದರು.

ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ: ಪೊಲೀಸರ ವಶದಿಂದ ತಪ್ಪಿಸಿಕೊಂಡು ಕೆರೆಗೆ ಹಾರಿದ ಅತ್ಯಾಚಾರ ಆರೋಪಿ ಸಾವು; ಅಂತ್ಯ ಸಂಸ್ಕಾರಕ್ಕೆ ಗ್ರಾಮಸ್ಥರ ವಿರೋಧ

ಮಿಯಾನ್ ಮುಸ್ಲಿಮರನ್ನು ವಿದೇಶಿ ಮುಸ್ಲಿಮರು ಎಂದು ಕರೆಯಲಾಗುತ್ತದೆ. ಅಸ್ಸಾಂ ಸರ್ಕಾರವು ಐದು ಮುಸ್ಲಿಂ ಸಮುದಾಯಗಳಿಗೆ ಸ್ಥಳೀಯ ಮುಸ್ಲಿಂ ಸ್ಥಾನಮಾನವನ್ನು ನೀಡಿದೆ. ಇದರಲ್ಲಿ ಮೋರಿಯಾ, ಸೋಲಾ, ದೇಸಿ ಮತ್ತು ಗೋರಿಯಾ ಮತ್ತು ಸೈಯದ್ ಸೇರಿದೆ. ಆದರೆ ಬ್ರಹ್ಮಪುತ್ರದ ದಡದಲ್ಲಿ ವಾಸಿಸುವ ಮುಸ್ಲಿಮರಿಗೆ ಮಿಯಾ ಮುಸ್ಲಿಮರ ಸ್ಥಾನಮಾನವನ್ನು ನೀಡಲಾಗಿದೆ. ಬಂಗಾಳಿ ಭಾಷಿಕರು ಸ್ಥಳೀಯ ಮುಸ್ಲಿಮರಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com