ಅಸ್ಸಾಂ: ಮುಸ್ಲಿಂ ವಿವಾಹ ಕಾಯ್ದೆ ರದ್ದುಗೊಳಿಸುವ ಮಸೂದೆ ಅಂಗೀಕಾರ

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಮ್ಮ ಉದ್ದೇಶ ಬಾಲ್ಯವಿವಾಹಗಳನ್ನು ನಿರ್ಮೂಲನೆ ಮಾಡುವುದು ಮಾತ್ರವಲ್ಲ, ಕಾಜಿ ಪದ್ಧತಿಯಿಂದ ದೂರವಾಗುವುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗುವಾಹಟಿ: ಮುಸ್ಲಿಮರ ವಿವಾಹ ಮತ್ತು ವಿಚ್ಛೇದನವನ್ನು ನೋಂದಾಯಿಸುವ ಮುಸ್ಲಿಂ ವಿವಾಹ ಕಾನೂನು ರದ್ದುಗೊಳಿಸುವ ಮಸೂದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ.

ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಜೋಗೆನ್ ಮೋಹನ್ ಅವರು ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯಿದೆ - 1935 ರದ್ದುಗೊಳಿಸುವ ಮಸೂದೆ ಮತ್ತು ರದ್ದುಗೊಳಿಸುವ ಸುಗ್ರೀವಾಜ್ಞೆ 2024 ಅನ್ನು ವಿಧಾನಸಭೆಯಲ್ಲಿ ಆಗಸ್ಟ್ 22 ರಂದು ಮಂಡಿಸಿದ್ದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಮ್ಮ ಉದ್ದೇಶ ಬಾಲ್ಯವಿವಾಹಗಳನ್ನು ನಿರ್ಮೂಲನೆ ಮಾಡುವುದು ಮಾತ್ರವಲ್ಲ, ಕಾಜಿ ಪದ್ಧತಿಯಿಂದ ದೂರವಾಗುವುದು. ನಾವು ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿಯನ್ನು ಸರ್ಕಾರಿ ವ್ಯವಸ್ಥೆಯಡಿ ತರಲು ಬಯಸುತ್ತೇವೆ ಎಂದರು.

"ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ವಿವಾಹಗಳ ನೋಂದಣಿಯನ್ನು ಮಾಡಬೇಕಾಗಿದೆ. ಆದರೆ ಈ ಉದ್ದೇಶಕ್ಕಾಗಿ ರಾಜ್ಯವು ಕಾಜಿಗಳಂತಹ ಖಾಸಗಿ ಸಂಸ್ಥೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅಸ್ಸಾಂ ಸಿಎಂ ಹೇಳಿದರು.

ಸಾಂದರ್ಭಿಕ ಚಿತ್ರ
'ನಾನು ಪಕ್ಷಪಾತಿನೇ', ಅಸ್ಸಾಂ ಅನ್ನು ಮಿಯಾ ಮುಸ್ಲಿಮರು ವಶಪಡಿಸಿಕೊಳ್ಳಲು ಬಿಡಲ್ಲ: ಸಿಎಂ ಹಿಮಂತ ಬಿಸ್ವಾ ಶರ್ಮಾ

"21 ವರ್ಷಕ್ಕಿಂತ ಕಡಿಮೆ ವಯಸ್ಸಿನ(ಪುರುಷ) ಮತ್ತು 18 ವರ್ಷಕ್ಕಿಂತ(ಮಹಿಳೆ) ಕಡಿಮೆ ವಯಸ್ಸಿನ ಉದ್ದೇಶಿತ ವ್ಯಕ್ತಿಯ ವಿವಾಹಗಳನ್ನು ನೋಂದಾಯಿಸುವ ಅವಕಾಶವಿದೆ." ಇದು ರಾಜ್ಯದಾದ್ಯಂತ ಕಾಯಿದೆಯ ಅನುಷ್ಠಾನದ ಮೇಲ್ವಿಚಾರಣೆಗೆ ಯಾವುದೇ ನಿಬಂಧನೆ ಇಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ದೊಡ್ಡ ಪ್ರಮಾಣದ ದಾವೆಗಳನ್ನು ಹಾಕಲಾಗುತ್ತಿದೆ ಎಂದು ಸಚಿವ ಜೋಗೆನ್ ಮೋಹನ್ ರದ್ದತಿಗೆ ಕಾರಣಗಳನ್ನು ನೀಡಿದ್ದಾರೆ.

"ಮುಸ್ಲಿಂ ವಿವಾಹ ಕಾಯ್ದೆ ದುರುಪಯೋಗವಾಗುತ್ತಿದ್ದು, ಅಪ್ರಾಪ್ತ/ಅಪ್ರಾಪ್ತೆ ವಯಸ್ಸಿನ ವಿವಾಹಗಳು, ಪೋಷಕರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಮಾಡಲಾಗುತ್ತಿದೆ" ಎಂದು ಮೋಹನ್ ಹೇಳಿದರು.

ಇದಲ್ಲದೆ, ಮದುವೆಗಳು ಮತ್ತು ವಿಚ್ಛೇದನಗಳ ನೋಂದಣಿ ಕಡ್ಡಾಯವಾಗಿಲ್ಲ ಮತ್ತು ನೋಂದಣಿ ಕಾರ್ಯವಿಧಾನವು ಅನೌಪಚಾರಿಕವಾಗಿದ್ದು, ಇದು ನಿಯಮಗಳ ಉಲ್ಲಂಘನೆಗೆ ಸಾಕಷ್ಟು ಅವಕಾಶ ನೀಡಿದೆ ಎಂದು ಕಾಯ್ದೆ ರದ್ದತಿಗೆ ಕಾರಣಗಳನ್ನು ನೀಡಿದರು.

"ಇದು ಮುಸ್ಲಿಂ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳಿಗಾಗಿ ಅಂದಿನ ಅಸ್ಸಾಂ ಪ್ರಾಂತ್ಯಕ್ಕೆ ಬ್ರಿಟಿಷ್ ಭಾರತ ಸರ್ಕಾರವು ಅಳವಡಿಸಿಕೊಂಡ ಸ್ವಾತಂತ್ರ್ಯಪೂರ್ವ ಕಾಯಿದೆಯಾಗಿದೆ" ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com