ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ರೈತರ ಮೆರವಣಿಗೆ; ಮೆಗಾ ಟ್ರಾಫಿಕ್ ಜಾಮ್

ರೈತ ನಾಯಕ ಸುಖ್ಬೀರ್ ಖಲೀಫಾ ನೇತೃತ್ವದಲ್ಲಿ BKP, ನೊಯ್ಡಾದ ಮಹಾ ಮಾಯಾ ಮೇಲ್ಸೇತುವೆಯ ಕೆಳಗೆ ತನ್ನ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿತು.
ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ಸಾಗಿದ ರೈತರು
ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ಸಾಗಿದ ರೈತರು
Updated on

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್​ಪಿ)ಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ 'ದೆಹಲಿ ಚಲೋ' ಘೋಷಿಸಿದ್ದು, ನೋಯ್ಡಾದ ದಲಿತ ಪ್ರೇರಣಾ ಸ್ಥಳದ ಬಳಿ ಪೊಲೀಸ್ ತಡೆಗೋಡೆಗಳನ್ನು ಮುರಿದು ಕಡೆಗೆ ರಾಷ್ಟ್ರ ರಾಜಧಾನಿಯತ್ತ ಸಾಗಿದರು.

ಭಾರತೀಯ ಕಿಸಾನ್ ಪರಿಷತ್(BKP), ಕಿಸಾನ್ ಮಜ್ದೂರ್ ಮೋರ್ಚಾ(KMM), ಸಂಯುಕ್ತ ಕಿಸಾನ್ ಮೋರ್ಚಾ(SKM) ಮತ್ತು ಇತರ ರೈತ ಸಂಘಟನೆಗಳು ಇಂದು ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದವು.

ರೈತ ನಾಯಕ ಸುಖ್ಬೀರ್ ಖಲೀಫಾ ನೇತೃತ್ವದಲ್ಲಿ BKP, ನೊಯ್ಡಾದ ಮಹಾ ಮಾಯಾ ಮೇಲ್ಸೇತುವೆಯ ಕೆಳಗೆ ತನ್ನ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿತು.

"ನಾವು ದೆಹಲಿಯತ್ತ ತೆರಳಲು ಸಿದ್ಧರಿದ್ದೇವೆ. ನಾಳೆ, ಡಿಸೆಂಬರ್ 2 ರಂದು, ನಾವು ಮಹಾ ಮಾಯಾ ಫ್ಲೈಓವರ್(ನೋಯ್ಡಾದಲ್ಲಿ) ನಿಂದ ದೆಹಲಿ ಕಡೆಗೆ ನಮ್ಮ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸುತ್ತೇವೆ. ಮಧ್ಯಾಹ್ನದ ಹೊತ್ತಿಗೆ ನಾವೆಲ್ಲರೂ ದೆಹಲಿ ತಲುಪುತ್ತೇವೆ ಎಂದು ಭಾನುವಾರ ಹೇಳಿದ್ದರು.

Vehicles stuck in a traffic jam on a road near Delhi-Noida border, at Kalindi Kunj, in New Delhi, Monday.
ದೆಹಲಿ-ನೋಯ್ಡಾ ಗಡಿ ಬಳಿಯ ರಸ್ತೆಯಲ್ಲಿ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡವು.PTI Photo

ರೈತರು ದೆಹಲಿ ಚಲೋ ಚಳವಳಿ ನಡೆಸುತ್ತಿರುವ ಪರಿಣಾಮ ನೊಯ್ಡಾದ ಚಿಲ್ಲಾ ಗಡಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಯತ್ತ ಸಾಗಿದ ರೈತರು
ರೈತರ ಪ್ರತಿಭಟನೆ ಇನ್ನಷ್ಟು ಚುರುಕು: ಡಿಸೆಂಬರ್ 6 ರಂದು ದೆಹಲಿ ಚಲೋ

ರೈತರು ಕಳೆದ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದೀಗ ಎಸ್‌ಕೆಎಂ(ರಾಜಕೀಯೇತರ) ಮತ್ತು ಕೆಎಂಎಂ ನೇತೃತ್ವದಲ್ಲಿ ಸಂಸತ್ ಸಂಕೀರ್ಣದ ಕಡೆಗೆ ರೈತರು 'ದೆಹಲಿ ಚಲೋ' ನಡೆಸಲು ಆರಂಭಿಸಿದ್ದಾರೆ.

ರೈತರು ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಹಳೆ ಸ್ವಾಧೀನ ಕಾನೂನಿನಡಿಯಲ್ಲಿ ಶೇ, 10 ರಷ್ಟು ನಿವೇಶನ ಹಂಚಿಕೆ ಮತ್ತು ಶೇ. 64.7 ರಷ್ಟು ಪರಿಹಾರ, ಮಾರುಕಟ್ಟೆ ದರದ ನಾಲ್ಕು ಪಟ್ಟು ಪರಿಹಾರ ಮತ್ತು 2014 ರ ಜನವರಿ 1, 2014 ರ ನಂತರ ಭೂರಹಿತರ ಮಕ್ಕಳಿಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 20 ರಷ್ಟು ನಿವೇಶನಗಳನ್ನು ನೀಡಬೇಕು. ರೈತರಿಗೆ ಉದ್ಯೋಗ ಮತ್ತು ಪುನರ್ವಸತಿ ಪ್ರಯೋಜನಗಳನ್ನು ನೀಡಬೇಕು, ಹೈಪವರ್ ಸಮಿತಿಯು ಅಂಗೀಕರಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರಿ ಆದೇಶಗಳನ್ನು ನೀಡಬೇಕು ಮತ್ತು ಜನವಸತಿ ಪ್ರದೇಶಗಳ ಸರಿಯಾದ ಇತ್ಯರ್ಥವನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com