ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ: ಪದ್ಮಶ್ರೀ ಪುರಸ್ಕೃತ ಜಿತೇಂದರ್ ಸಿಂಗ್ ಶುಂಟಿ AAP ಗೆ ಸೇರ್ಪಡೆ

ಶಹೀದ್ ಭಗತ್ ಸಿಂಗ್ (SBS) ಫೌಂಡೇಶನ್‌ನ ಅಧ್ಯಕ್ಷರಾದ ಶುಂಟಿ ಅವರು COVID-19 ಸಾಂಕ್ರಾಮಿಕ ಸಮಯದಲ್ಲಿ ಮಾನವೀಯ ಕಾರ್ಯಗಳಿಂದಾಗಿ ಜನಪ್ರಿಯತೆ ಗಳಿಸಿದ್ದರು.
r Jitender Singh Shunty joined AAP
ಕೇಜ್ರಿವಾಲ್ ಅವರೊಂದಿಗೆ ಜಿತೇಂದರ್ ಸಿಂಗ್ ಶುಂಟಿ
Updated on

ನವದೆಹಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಮತ್ತು ಸಮಾಜ ಸೇವಕ ಜಿತೇಂದರ್ ಸಿಂಗ್ ಶುಂಟಿ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ.

ಶಹೀದ್ ಭಗತ್ ಸಿಂಗ್ (SBS) ಫೌಂಡೇಶನ್‌ನ ಅಧ್ಯಕ್ಷರಾದ ಶುಂಟಿ ಅವರು COVID-19 ಸಾಂಕ್ರಾಮಿಕ ಸಮಯದಲ್ಲಿ ಮಾನವೀಯ ಕಾರ್ಯಗಳಿಂದಾಗಿ ಜನಪ್ರಿಯತೆ ಗಳಿಸಿದ್ದರು.

ಜಿತೇಂದರ್ ಸಿಂಗ್ ಶುಂಟಿ, ಶಹೀದ್ ಭಗತ್ ಸಿಂಗ್ ಸೇವಾ ದಳದ ಸ್ಥಾಪಕ ಕೂಡಾ ಆಗಿದ್ದಾರೆ. ಇದು ಅನಾಥ ಮೃತದೇಹಗಳನ್ನು ಹಿಂದೂ ಮತ್ತು ಸಿಖ್ ಸಂಪ್ರದಾಯಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆ ಹಾಗೂ ನಂತರದ ವಿಧಿ ವಿಧಾನಗಳನ್ನು ನಡೆಸುವಲ್ಲಿ ಹೆಸರುವಾಸಿಯಾದ NGO ಆಗಿದೆ.

ಶುಂಟಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಿತೇಂದರ್ ಸಿಂಗ್ ಶುಂಟಿ ಪಕ್ಷ ಸೇರಿರುವುದು ನಮಗೆ ಗೌರವ ತಂದಿದೆ. ಅವರ ಸಮಾಜ ಸೇವೆಯ ಸಮರ್ಪಣೆಯು ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ಪಕ್ಷದ ಬದ್ಧತೆಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳಿದರು.

r Jitender Singh Shunty joined AAP
ಫೆಬ್ರವರಿ 7ರಂದು ದೆಹಲಿ ವಿಧಾನಸಭಾ ಚುನಾವಣೆ

ದೆಹಲಿ ಅಸೆಂಬ್ಲಿ ಸ್ಪೀಕರ್ ಮತ್ತು ಶಹದಾರ ಶಾಸಕ ರಾಮ್ ನಿವಾಸ್ ಗೋಯೆಲ್ ಚುನಾವಣಾ ರಾಜಕೀಯದಿಂದ ನಿವೃತ್ತರಾದ ನಂತರ ಜಿತೇಂದರ್ ಸಿಂಗ್ ಶುಂಟಿ ಎಎಪಿ ಸೇರಿದ್ದಾರೆ. ಈ ಹಿಂದೆ 2013ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದ ಶಹದಾರ ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com