Mamata Banerjee: 'INDIA ಸ್ಟ್ರಾಂಗ್ ಆಗಿ ಇರಬೇಕು.. ಮುನ್ನಡೆಸಲು ಸಿದ್ಧ.. ಆದರೆ ಬಂಗಾಳ ಬಿಟ್ಟು ಬರುವುದಿಲ್ಲ'

ಪುರ್ಬಾ ಮೇದಿನಿಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ INDIA ಕೂಟದ ನಾಯಕಿಯಾಗಿ ತಮ್ಮನ್ನು ಬೆಂಬಲಿಸಿದ ವಿರೋಧ ಪಕ್ಷದ ನಾಯಕರಿಗೆ ಬುಧವಾರ ಕೃತಜ್ಞತೆ ಸಲ್ಲಿಸಿದ್ದಾರೆ.
Mamata Banerjee
ಮಮತಾ ಬ್ಯಾನರ್ಜಿ
Updated on

ಕೋಲ್ಕತಾ: ವಿಪಕ್ಷಗಳ ನಾಯಕರ ಒತ್ತಾಯದ ಮೇರೆಗೆ INDIA ಕೂಟವನ್ನು ಮುನ್ನಡೆಸಲು ನಾನು ಸಿದ್ಧ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪುರ್ಬಾ ಮೇದಿನಿಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ INDIA ಕೂಟದ ನಾಯಕಿಯಾಗಿ ತಮ್ಮನ್ನು ಬೆಂಬಲಿಸಿದ ವಿರೋಧ ಪಕ್ಷದ ನಾಯಕರಿಗೆ ಬುಧವಾರ ಕೃತಜ್ಞತೆ ಸಲ್ಲಿಸಿದ್ದು, 'ಅವರು ನನಗೆ ತೋರಿದ ಗೌರವಕ್ಕಾಗಿ ನಾನು ಎಲ್ಲರಿಗೂ ಋಣಿಯಾಗಿದ್ದೇನೆ. ನಾನು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಅವರು ಮತ್ತು ಅವರ ಪಕ್ಷವು ಚೆನ್ನಾಗಿ ಇರಬೇಕೆಂದು ನಾನು ಬಯಸುತ್ತೇನೆ. ಭಾರತ (INDIA)ವೂ ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆ' ಎಂದು ಹೇಳಿದ್ದಾರೆ.

Mamata Banerjee
INDIA ನಾಯಕತ್ವಕ್ಕೆ Mamata?: ಮೈತ್ರಿಕೂಟದ ಒಳಗೆ, ತಟಸ್ಥ ಪಕ್ಷಗಳಿಂದಲೂ ವ್ಯಾಪಕ ಬೆಂಬಲ!

'INDIA ಬಣ ರಚಿಸಿದ್ದೇ ನಾನು'

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, 'ನಾನು INDIA ಬಣವನ್ನು ರಚಿಸಿದ್ದೇ ನಾನು.. ಈಗ ಅದನ್ನು ನಿರ್ವಹಿಸುವುದು ಪ್ರಸ್ತುತ ನಾಯಕತ್ವ ಹೊಂದಿರುವವರಿಗೆ ಬಿಟ್ಟದ್ದು. ಅವರು ಉತ್ತಮ ಪ್ರದರ್ಶನವನ್ನು ನಡೆಸಲು ಸಾಧ್ಯವಾಗದಿದ್ದರೆ, ನಾನು ಏನು ಮಾಡಬಹುದು? ಎಲ್ಲರನ್ನೂ ಕರೆದುಕೊಂಡು ಹೋಗಬೇಕು ಎಂದು ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ.

ಬಂಗಾಳ ಬಿಟ್ಟು ಬರುವುದಿಲ್ಲ.. ಇಲ್ಲಿಂದಲೇ INDIA ನಿರ್ವಹಣೆ

ಇದೇ ವೇಳೆ ಅವಕಾಶವನ್ನು ನೀಡಿದರೆ, ಇಂಡಿಯಾ ಮೈತ್ರಿಕೂಟದ ಸುಗಮ ಕಾರ್ಯನಿರ್ವಹಣೆಯನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಆದರೆ ಯಾವಾಗಲೂ ಪಶ್ಚಿಮ ಬಂಗಾಳ ನನ್ನ ಮೊದಲ ಪ್ರಾಶಸ್ತ್ರವಾಗಿರುತ್ತದೆ. ಹೀಗಾಗಿ ನಾನು ಬಂಗಾಳದಿಂದ ಹೊರಗೆ ಹೋಗಲು ಬಯಸುವುದಿಲ್ಲ, ಆದರೆ INDIA ನಿರ್ವಹಣೆಯನ್ನು ನಾನು ಅದನ್ನು ಇಲ್ಲಿಂದಲೇ ಮಾಡಬಹುದು ಎಂದರು.

ಮಮತಾ ಪರ ಬ್ಯಾಟ್ ಬೀಸಿದ್ದ INDIA ಕೂಟದ ನಾಯಕರು

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಹೀನಾಯ ಸೋಲು ಕಂಡ ಬೆನ್ನಲ್ಲೇ INDIA ಕೂಟದಲ್ಲಿ ವ್ಯಾಪಕ ಚಟುವಟಿಕೆಗಳು ನಡೆದಿದ್ದವು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಮಮತಾ ಬ್ಯಾನರ್ಜಿಯನ್ನು ಬಹಿರಂಗವಾಗಿ ಬೆಂಬಲಿಸಿದರು.

ಬಿಜೆಪಿಯನ್ನು ಎದುರಿಸಲು ಲೋಕಸಭಾ ಚುನಾವಣೆಯ ಪೂರ್ವದಲ್ಲಿ ರಚಿಸಲಾದ ಇಂಡಿಯಾ ಕೂಟವನ್ನು ಬ್ಯಾನರ್ಜಿ ಮುನ್ನಡೆಸಬೇಕು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದರು. ಅಂತೆಯೇ ಇದಕ್ಕೆ ಕಾಂಗ್ರೆಸ್‌ನ ಆಕ್ಷೇಪಣೆ ಏನೂ ಇಲ್ಲ. ನಾವು ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸುತ್ತೇವೆ… ಮಮತಾ ಬ್ಯಾನರ್ಜಿ ಅವರಿಗೆ (INDIA ಕೂಟದ) ನಾಯಕತ್ವ ನೀಡಬೇಕು… ಇದರೊಂದಿಗೆ ಬಿಹಾರದಲ್ಲಿ 2025ರಲ್ಲಿ ನಾವು ಮತ್ತೆ ಸರ್ಕಾರ ರಚಿಸುತ್ತೇವೆ…ಎಂದು ಹೇಳಿದರು.

'ಹೌದು ಖಂಡಿತವಾಗಿಯೂ ಅವರು ಮೈತ್ರಿಕೂಟವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ, ಅವರು ಈ ರಾಷ್ಟ್ರದ ಪ್ರಮುಖ ನಾಯಕಿಯಾಗಿದ್ದು, ಆಕೆಗೆ ಆ ಸಾಮರ್ಥ್ಯವಿದೆ. ಸಂಸತ್ತಿನಲ್ಲಿ ಅವರು ಕಳುಹಿಸಿದ ಚುನಾಯಿತ ನಾಯಕರು ಜವಾಬ್ದಾರಾಗಿದ್ದು, ಕರ್ತವ್ಯನಿಷ್ಠರು ಮತ್ತು ವಿದ್ಯಾವಂತರಾಗಿದ್ದರೆ. ಆದ್ದರಿಂದ ಆಕೆಗೆ ಹಕ್ಕಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದರು.

ಇದರ ಬೆನ್ನಲ್ಲೇ ಕಳೆದ ವಾರ, ಪ್ರತಿಪಕ್ಷ ಇಂಡಿ ಮೈತ್ರಿಕೂಟದ ಪ್ರಸ್ತುತ ಕಾರ್ಯನಿರ್ವಹಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುವಾಗ ಅವಕಾಶ ನೀಡಿದರೆ ಇಂಡಿಯಾ ಬಣದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೆನೆ ಎಂದು ಬ್ಯಾನರ್ಜಿ ಸಲಹೆ ನೀಡಿದರು.

Mamata Banerjee
ಯಾವುದೇ ಹಣ ನೇರವಾಗಿ ಬಂದಿಲ್ಲ: ಜಾರ್ಜ್ ಸೊರೊಸ್ ಫಂಡಿಂಗ್ ಕುರಿತಂತೆ PMO ಸಲಹೆಗಾರ್ತಿ ಸ್ಪಷ್ಟನೆ

ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇದೆ

ಇನ್ನು INDIA ಕೂಟದ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ ನಾಯಕರು ಇದೇ ವೇಳೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಮಾತನಾಡಿ ವಿಪಕ್ಷಗಳ ಮೈತ್ರಿಕೂಟದಲ್ಲಿ ಯಾವುದೇ ರೀತಿಯ ಬಿರುಕಿಲ್ಲ. ನಾನು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಎಲ್ಲವೂ ಸರಿ ಇದೆ. ನಾಯಕತ್ವ ಬದಲಾವಣೆ ಎಂದಾಕ್ಷಣ ಬಿರುಕಿದೆ ಎಂದಲ್ಲ. ಯಾರು ಏನುಬೇಕಾದರೂ ಆರೋಪ ಮಾಡಬಹುದು. ಯಾರೂ ಸಂತರಾಗಲು ರಾಜಕೀಯಕ್ಕೆ ಬರುವುದಿಲ್ಲ, ಎಲ್ಲರಿಗೂ ಮಹತ್ವಾಕಾಂಕ್ಷೆ ಇದೆ, ಆದರೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

INDIA ನಾಯಕತ್ವ ಬದಲಾವಣೆ ಚರ್ಚೆಗೆ ಸಿದ್ಧ: ಸಂಜಯ್ ರಾವತ್

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್, 'ಕಾಂಗ್ರೆಸ್‌ ಪಕ್ಷದ ಹೊರಗಿನವರು INDIA ಬಣವನ್ನು ಮುನ್ನಡೆಸಬೇಕೆ ಎಂದು ಚರ್ಚಿಸಲು ತಮ್ಮ ಪಕ್ಷವು ಮುಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕತ್ವದೊಂದಿಗೆ ತಮ್ಮ ಪಕ್ಷದ ಸಂಬಂಧಗಳು "ಅತ್ಯುತ್ತಮ" ಎಂದು ಹೇಳಿದರು.

Mamata Banerjee
ಅವಕಾಶ ಸಿಕ್ಕರೆ INDIA ಬಣ ಮುನ್ನಡೆಸಲು ಸಿದ್ಧ: ಮಮತಾ ಬ್ಯಾನರ್ಜಿ

ಅಂತೆಯೇ ಬಿಜೆಪಿ ಎದುರಿಸಲು INDIA ಬಣವನ್ನು ಮತ್ತೆ ಬಲಪಡಿಸಬೇಕಾದರೆ, ಎಲ್ಲರೂ ನಾಯಕತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಬಯಸುತ್ತಾರೆ. ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಲಾಲು ಪ್ರಸಾದ್, ಶರದ್ ಪವಾರ್ ಅಥವಾ ಅಖಿಲೇಶ್ ಯಾದವ್ ಯಾರು ಬೇಕಾದರೂ ನಾಯಕತ್ವ ವಹಿಸಬಹುದು ಎಂದು ರಾವತ್ ಹೇಳಿದರು.

ಅಂದಹಾಗೆ 2024 ರ ಲೋಕಸಭಾ ಚುನಾವಣೆಯ ಮೊದಲು ರಚಿಸಲಾದ ಪ್ರತಿಪಕ್ಷಗಳ ಮಿತ್ರಕೂಟ INDIAಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಭಾರತದ ಮಿತ್ರಪಕ್ಷಗಳಲ್ಲಿ ಅತಿ ಹೆಚ್ಚು ಸಂಸದರನ್ನು ಹೊಂದಿದೆ. ಇದೇ ಕಾರಣಕ್ಕೆ INDIA ಕೂಟದ ನಾಯಕತ್ವವನ್ನು ಕಾಂಗ್ರೆಸ್ ಗೆ ನೀಡಲಾಗಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com