ಅಮೆರಿಕಾದಲ್ಲಿ ಆಶ್ರಯ ಪಡೆದಿರುವ ಭಾರತದ 65 ಮಂದಿ ಅಪರಾಧಿಗಳ ಪೈಕಿ 26/11 ದಾಳಿಕೋರರು ಇದ್ದಾರೆ!

ಕೇಂದ್ರ ಗೃಹ ಸಚಿವಾಲಯ ಹಸ್ತಾಂತರ ಕೋರಿಕೆಗಳನ್ನು ಸಲ್ಲಿಸಿದ ಒಟ್ಟು 178 ಪರಾರಿಯಾದವರ ಪೈಕಿ 65 ಜನರು ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎಂದು ಗೃಹ ಇಲಾಖೆ ವರದಿಗಳು ಬಹಿರಂಗಪಡಿಸಿದೆ.
Terror convict David Coleman Headley
ಡೇವಿಡ್ ಕೋಲ್ಮನ್ ಹೆಡ್ಲಿ
Updated on

ನವದೆಹಲಿ: ಭಾರತದ ತನಿಖಾ ಏಜೆನ್ಸಿ ಗಳಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ಪ್ರತಿ ಮೂರನೇ ಒಬ್ಬ ಪರಾರಿಯಾದ ವ್ಯಕ್ತಿ ಅಮೆರಿಕದಲ್ಲಿ ಆಶ್ರಯ ಪಡೆಯುತ್ತಿದ್ದು, ಇದು ಆರೋಪಿಗಳು ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಸ್ಥಳವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ (MHA) ಲೋಕಸಭೆಗೆ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯ ಹಸ್ತಾಂತರ ಕೋರಿಕೆಗಳನ್ನು ಸಲ್ಲಿಸಿದ ಒಟ್ಟು 178 ಪರಾರಿಯಾದವರ ಪೈಕಿ 65 ಜನರು ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎಂದು ಗೃಹ ಇಲಾಖೆ ವರದಿಗಳು ಬಹಿರಂಗಪಡಿಸಿದೆ. ಅವರಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹವ್ವುರ್ ರಾಣಾ ಸೇರಿದ್ದಾರೆ. 26/11ರ ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಏಜೆನ್ಸಿಗಳಿಗೆ ಬೇಕಾಗಿರುವ ಲಷ್ಕರ್ ಕಾರ್ಯಕರ್ತರು ಇವರಾಗಿದ್ದಾರೆ.

ಅಪರಾಧಿಗಳು ಮತ್ತು ಭಯೋತ್ಪಾದಕರಿಗಾಗಿ ತನಿಖಾ ಸಂಸ್ಥೆಗಳಿಂದ ಬಾಕಿ ಉಳಿದಿರುವ 178 ಹಸ್ತಾಂತರ ಕೋರಿಕೆ ಪ್ರಕರಣಗಳಲ್ಲಿ 65 ಪ್ರಕರಣಗಳು ಅಮೆರಿಕಾ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ. 2002 ರಿಂದ 2018 ರವರೆಗೆ, ಅಮೆರಿಕಾ ಕೇವಲ 11 ಭಾರತದ ವಿನಂತಿ ಪ್ರಕರಣಗಳನ್ನು ಪುರಸ್ಕರಿಸಿದೆ.

ಅಮೆರಿಕಾ ಇನ್ನೂ ಪರಿಗಣನೆಗೆ ತೆಗೆದುಕೊಳ್ಳದ ಭಾರತದ ಪ್ರಕರಣಗಳಲ್ಲಿ ಹೆಡ್ಲಿಯನ್ನು ಹಸ್ತಾಂತರಿಸುವುದು ಕೂಡ ಸೇರಿದೆ. ರಾಣಾ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಪ್ರಕಾರ, ಭಾರತವು ಪರಾರಿಯಾದ ಅಪರಾಧಿಗಳನ್ನು ಹಸ್ತಾಂತರಿಸುವಂತೆ ಮಾಡಿದ 65 ಕೋರಿಕೆಗಳು ಯುಎಸ್ ಅಧಿಕಾರಿಗಳ ಪರಿಗಣನೆಯಲ್ಲಿವೆ ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇವಲ 23 ಮನವಿಗಳನ್ನು ಮಾತ್ರ ಪೂರೈಸಲಾಗಿದೆ.

ಕೇಂದ್ರ ಗೃಹ ಇಲಾಖೆ ಪ್ರಕಾರ, ಅಪರಾಧ ಅಥವಾ ಭಯೋತ್ಪಾದಕ ಚಟುವಟಿಕೆಗಳ ಶಂಕಿತ ಇತರರನ್ನು ಹಸ್ತಾಂತರಿಸಲು ಸರ್ಕಾರವು ಸಂಘಟಿತ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತವು 48 ದೇಶಗಳು/ಪ್ರದೇಶಗಳೊಂದಿಗೆ ಹಸ್ತಾಂತರ ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು 12 ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ನಿತ್ಯಾನಂದ ರೈ ಹೇಳಿದರು.

Terror convict David Coleman Headley
ಭಾರತಕ್ಕೆ ಮುಂಬೈ ದಾಳಿ ರೂವಾರಿ ಡೇವಿಡ್ ಹೆಡ್ಲಿ ಹಸ್ತಾಂತರವಿಲ್ಲ, ಸದ್ಯದಲ್ಲೇ ರಾಣಾ ವಿಚಾರಣೆ: ಅಮೆರಿಕ

ಪ್ರಮುಖ ಹೆಸರುಗಳಲ್ಲಿ ಸತೀಂದರ್ಜಿತ್ ಸಿಂಗ್, ಅಲಿಯಾಸ್ ಗೋಲ್ಡಿ ಬ್ರಾರ್ ಮತ್ತು ಅನ್ಮೋಲ್ ಬಿಷ್ಣೋಯ್ ಮುಂತಾದ ದರೋಡೆಕೋರರು ಸೇರಿದ್ದಾರೆ, ಇವರುಗಳು 2022 ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮತ್ತು ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ಮಾಜಿ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಅಧಿಕಾರಿಗಳು ನಂಬಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com