ತಮಿಳುನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ: ಚೆನ್ನೈ ಸೇರಿ 12 ಜಿಲ್ಲೆಗಳಲ್ಲಿ ಶಾಲೆಗಳು ಬಂದ್!

ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರ್ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆಯಾದ ನಂತರ ಶಾಲೆಗಳನ್ನು ಮುಚ್ಚಿ ಆದೇಶ ಹೊರಡಿಸಲಾಗಿದೆ.
A young woman on a waterlogged road in Chennai.
ಚೆನ್ನೈನಲ್ಲಿ ರಸ್ತೆಗಳು ಜಲಾವೃತ
Updated on

ಚೆನ್ನೈ: ಫೆಂಗಲ್​ ಚಂಡಮಾರುತದಿಂದ ಚೇತರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಇನ್ನಷ್ಟು ತೀವ್ರವಾಗಲಿದೆ. ಇದರಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರ್ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ಭಾರೀ ಮಳೆಯಾದ ನಂತರ ಶಾಲೆಗಳನ್ನು ಮುಚ್ಚಿ ಆದೇಶ ಹೊರಡಿಸಲಾಗಿದೆ.

ಚೆನ್ನೈ ಮಹಾನಗರ ಪಾಲಿಕೆಯ ವಲಯವಾರು ಮಳೆ ವರದಿಯ ಪ್ರಕಾರ, ಗುರುವಾರ ಬೆಳಗ್ಗೆ 6 ಗಂಟೆಯವರೆಗೆ ನಗರದ ಹಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ 7 ಸೆಂಟಿಮೀಟರ್‌ಗಿಂತಲೂ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಸಾಧಾರಣವಾಗಿ ಆರಂಭವಾಗಿ ನಂತರ ಭಾರೀ ಪ್ರಮಾಣದಲ್ಲಿ ಸುರಿದಿದೆ. ಈ ಅವಧಿಯಲ್ಲಿ ನಗರವು ಸರಾಸರಿ 5.3 ಸೆಂ.ಮೀ ಮಳೆಯನ್ನು ಪಡೆದಿದೆ ಮತ್ತು ಕೊಳತ್ತೂರಿನಲ್ಲಿ ಅತಿ ಹೆಚ್ಚು 8.5 ಸೆಂ.ಮೀ ಮಳೆಯಾಗಿದೆ, ನಂತರ ನೆರ್ಕುಂದ್ರಂನಲ್ಲಿ 7.9 ಸೆಂ.ಮೀ.ಮಳೆಯಾಗಿದೆ.

A young woman on a waterlogged road in Chennai.
ನಗರದಲ್ಲಿ ಮಳೆ ಅವಾಂತರ ತಡೆಯಲು ಪಾಲಿಕೆ ಸಿದ್ಧತೆ: ತಗ್ಗು ಪ್ರದೇಶಗಳಲ್ಲಿ 80 ಅರ್ಥ್‌ಮೂವರ್‌ಗಳ ನಿಯೋಜನೆಗೆ ಸೂಚನೆ

ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ತೊಂಡಿಯಾರ್‌ಪೇಟ್, ಪೆರಂಬೂರ್, ಮಾಧವರಂ, ಬೇಸಿನ್ ಬ್ರಿಡ್ಜ್, ಅಯಪಕ್ಕಂ ಮತ್ತು ಅಮಿಂಜಿಕರೈಗಳಲ್ಲಿನ ಮಳೆ ಮಾಪನ ಕೇಂದ್ರಗಳಲ್ಲಿ 7 ಸೆಂ.ಮೀ ಮಳೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ತಿರುವಳ್ಳೂರು, ರಾಣಿಪೇಟ್, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರು, ತಂಜಾವೂರು, ಪುದುಕೊಟ್ಟೈ, ಪುದುಕೊಟ್ಟೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೆನ್ನೈ, ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ಪುದುಕೊಟ್ಟೈ, ಕಡಲೂರು, ದಿಂಡಿಗಲ್, ರಾಮನಾಥಪುರಂ, ತಿರುವರೂರ್, ಕಾಂಚೀಪುರಂ, ಅರಿಯಲೂರ್, ಚೆಂಗಲ್ಪಟ್ಟು, ಪುದುಚೇರಿ ಮತ್ತು ಕಾರೈಕಲ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯು ತಿರುವಳ್ಳೂರು, ರಾಣಿಪೇಟ್, ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಣ್ಣಾಮಲೈ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರು, ತಂಜಾವೂರು, ಪುದುಕೊಟ್ಟೈ, ಪುದುಕೊಟ್ಟೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com