Uttar Pradesh: 150 ಜನರ 45 ಮುಸ್ಲಿಂ ಕುಟುಂಬ ಹಿಂದುತ್ವಕ್ಕೆ ವಾಪಸ್!

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ವ್ಯಕ್ತಿಗಳನ್ನು ಒಳಗೊಂಡ 45 ಕುಟುಂಬಗಳು ಹಿಂದುತ್ವಕ್ಕೆ ಮರಳಿದ್ದು, ಗಂಗಾ ಆಚರಣೆಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದವು.
45 Muslim families comprising 150 individuals embrace Sanatan Dharma
ಹಿಂದೂ ಧರ್ಮಕ್ಕೆ ಮರಳಿದ ಮುಸ್ಲಿಂ ಕುಟುಂಬಗಳು
Updated on

ಹಾಪುರ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 150 ಜನರ 45 ಮುಸ್ಲಿಂ ಕುಟುಂಬಗಳು ಹಿಂದುತ್ವಕ್ಕೆ ಮರಳಿದ್ದು, ಗಂಗಾ ಆಚರಣೆಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿವೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ವ್ಯಕ್ತಿಗಳನ್ನು ಒಳಗೊಂಡ 45 ಕುಟುಂಬಗಳು ಹಿಂದುತ್ವಕ್ಕೆ ಮರಳಿದ್ದು, ಗಂಗಾ ಆಚರಣೆಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದವು. ಕುಟುಂಬಗಳು ಹಿಂದೂ ವಿಧಿಗಳ ಪ್ರಕಾರ ಮೃತ ವೃದ್ಧ ಸದಸ್ಯರ ಅಂತ್ಯಕ್ರಿಯೆಯನ್ನು ನಡೆಸಿ, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸದಸ್ಯರೊಬ್ಬರು, 'ನಮ್ಮ ಪೂರ್ವಜರು ಮೂಲತಃ ಮೊಘಲ್ ದಬ್ಬಾಳಿಕೆಯಲ್ಲಿ ಇಸ್ಲಾಂಗೆ ಮತಾಂತರಗೊಂಡ ಹಿಂದೂಗಳಾಗಿದ್ದರು ಎಂದು ಅವರು ಬಹಿರಂಗಪಡಿಸಿದರು. ಮಾತ್ರವಲ್ಲದೇ ಹಿಂದೂ ಧರ್ಮಕ್ಕೆ ಮರಳುವುದನ್ನು ತಮ್ಮ ಪೂರ್ವಜರ ಪರಂಪರೆಯ ನೆರವೇರಿಕೆ ಎಂದು ಕರೆದಿದ್ದಾರೆ.

45 Muslim families comprising 150 individuals embrace Sanatan Dharma
ಬೆಂಗಳೂರು: ಶುಕ್ರವಾರದ ಪ್ರಾರ್ಥನೆಗೆ ಕಾಲೇಜಿನಲ್ಲಿ ಅವಕಾಶ ನೀಡುತ್ತಿಲ್ಲ; ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳ ಆರೋಪ

ಪ್ರತಿರೋಧ ಮತ್ತು ಪರಿಶ್ರಮ

ಕುಟುಂಬಗಳು ಮೂಲತಃ ಪಾಕಿಸ್ತಾನದ ಇಸ್ಲಾಮಾಬಾದ್‌ನಿಂದ ಬಂದವರಾಗಿದ್ದು, ಭಾರತ ಪಾಕಿಸ್ತಾನ ವಿಭಜನೆಯ ನಂತರ ಅವರು 1947 ರಲ್ಲಿ ದೆಹಲಿಗೆ ಬಂದು ನೆಲೆಸಿದ್ದರು. ನಾಲ್ಕು ವರ್ಷಗಳ ಹಿಂದೆಯೇ, ಅವರು ಹಿಂದೂ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದ್ದರು.

ಆದಾಗ್ಯೂ, ಅವರು ತಮ್ಮ ಸಮುದಾಯದಿಂದ ಗಮನಾರ್ಹ ವಿರೋಧ ಎದುರಾದ ಹಿನ್ನಲೆಯಲ್ಲಿ 'ಘರ್ ವಾಪ್ಸಿ' ವಿಳಂಬವಾಯಿತು. ಇತ್ತೀಚೆಗೆ ಹಿರಿಯ ಕುಟುಂಬ ಸದಸ್ಯರೊಬ್ಬರು ನಿಧನರಾದ ಕಾರಣ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಧಾರವನ್ನು ಮುಂದುವರಿಸಲು ಸ್ಫೂರ್ತಿ ಸಿಕ್ಕಿತು. ಇದೀಗ ಹಿಂದೂ ಧರ್ಮ ಸ್ವೀಕರಿಸಿ ಬ್ರಿಜ್‌ಘಾಟ್‌ನಲ್ಲಿ ಅಗತ್ಯವಾದ ವಿಧಿವಿಧಾನಗಳನ್ನು ನೆರವೇರಿಸಿದ್ದೇವೆ ಎಂದು ಹೇಳಿದ್ದಾರೆ.

ಹೊಸ ಹೆಸರು-ಹೊಸ ಆರಂಭ

ಇನ್ನು ಹಿಂದೆ ಸಲ್ಮಾನ್ ಖಾನ್ ಆಗಿದ್ದ ವ್ಯಕ್ತಿ ಈಗ ಸನ್ಸಾರ್ ಸಿಂಗ್ ಆಗಿದ್ದು ಆ ಮೂಲಕ ಹೊಸ ಹೆಸರಿನೊಂದಿಗೆ ಹೊಸ ಜೀವನದ ಆರಂಭ ಮಾಡಿದ್ದಾರೆ. ಎಲ್ಲಾ ಕುಟುಂಬಗಳ ಸದಸ್ಯರು ಹೊಸ ಹೆಸರಿನೊಂದಿಗೆ ಪ್ರಾರ್ಥನೆಗಳನ್ನು ನಡೆಸಿದ ಅಗತ್ಯವಿರುವ ಆಚರಣೆಗಳನ್ನು ಮಾಡಿದರು. ಸಂಜು, ಸತೀಶ್, ಬಲ್ವಾನ್, ರಾಜೇಶ್, ಸಂಜಯ್ ಮತ್ತು ಶಶಿ ಸೇರಿದಂತೆ ಹಲವಾರು ವ್ಯಕ್ತಿಗಳು ಸಾಂಪ್ರದಾಯಿಕ ಹಿಂದೂ ಹೆಸರುಗಳನ್ನು ಅಳವಡಿಸಿಕೊಂಡರು.

ಭಗವಾನ್ ಶಿವ ಮತ್ತು ಮಾತಾ ಪಾರ್ವತಿಯನ್ನು ಪ್ರಾರ್ಥಿಸಿದರು ಮತ್ತು ಗೌರಿಶಂಕರ್ ಗೋತ್ರವನ್ನು ಅಳವಡಿಸಿಕೊಂಡರು. ಅವರೆಲ್ಲರೂ ಭವಿಷ್ಯದಲ್ಲಿ ಹಿಂದೂ ಹಬ್ಬಗಳನ್ನು ಆಚರಿಸಲು ಮತ್ತು ಸಂಪ್ರದಾಯದ ಪ್ರಕಾರ ಆಚರಣೆಗಳು ಮತ್ತು ಉಪವಾಸಗಳನ್ನು ಆಚರಿಸಲು ಪ್ರತಿಜ್ಞೆ ಮಾಡಿದರು.

ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುವುದು ಒಂದು ಕನಸು ನನಸಾದಂತೆ ಮತ್ತು ತಮ್ಮ ಬೇರುಗಳಿಗೆ ಮರಳುವಂತೆ ಭಾಸವಾಯಿತು ಎಂದು ಸಂಸಾರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಟುಂಬಗಳು ಬ್ರಿಜ್‌ಘಾಟ್‌ನಲ್ಲಿರುವ ಸ್ಥಳೀಯ ಪುರೋಹಿತರೊಂದಿಗೆ ತಮ್ಮ ವಂಶಾವಳಿಯನ್ನು ನೋಂದಾಯಿಸಲು ನಿರ್ಧರಿಸಿದ್ದಾರೆ, ಇದು ಸನಾತನ ಧರ್ಮದೊಂದಿಗಿನ ಅವರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com