ಅಂಬೇಡ್ಕರ್ ಕುರಿತ ಹೇಳಿಕೆ: ಇಂಡಿಯಾ ಬಣ ಆಕ್ರೋಶದ ನಡುವೆ ಅಮಿತ್ ಶಾ ಭೇಟಿಯಾದ ಸಿಎಂ ಒಮರ್ ಅಬ್ದುಲ್ಲಾ!

ಈ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಅಕ್ಟೋಬರ್ 16 ರಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದ ಒಮರ್ ಅಬ್ದುಲ್ಲಾ ಅಕ್ಟೋಬರ್ 23 ರಂದು ಶಾ ಅವರನ್ನು ಭೇಟಿಯಾಗಿದ್ದರು.
J-K CM Omar meets with Amit Shah Casual Images
ಅಮಿತ್ ಶಾ ಭೇಟಿಯಾದ ಸಿಎಂ ಒಮರ್ ಅಬ್ದುಲ್ಲಾ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಂಬೇಡ್ಕರ್ ಕುರಿತ ಮಾತುಗಳಿಂದ ಅಮಿತ್ ಶಾ ವಿರುದ್ಧ 'ಇಂಡಿಯಾ' ಬಣದ ಪಕ್ಷಗಳು ರಾಷ್ಟ್ರ ರಾಜಧಾನಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ವಿರೋಧ ಪಕ್ಷಗಳ ಕೂಟದಲ್ಲಿರುವ ನ್ಯಾಶನಲ್ ಕಾಂಗ್ರೆಸ್ ನ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇತ್ತೀಚಿಗೆ ಇವಿಎಂಗಳ ಲೋಪ ಕುರಿತ ಕಾಂಗ್ರೆಸ್ ನಡೆಯನ್ನು ಟೀಕಿಸಿದ್ದ ಒಮರ್ ಅಬ್ದುಲ್ಲಾ, ಇದೀಗ ಅಂಬೇಡ್ಕರ್ ಕುರಿತ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅಮಿತ್ ಶಾ ಅವರೊಂದಿಗೆ ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ಮರು ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ಒಮರ್ ಅಬ್ದುಲ್ಲಾ ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 370ನೇ ವಿಧಿ ರದ್ದುಗೊಂಡ ನಂತರ ಕೇಂದ್ರಾಡಳಿತ ಪ್ರದೇಶದ ಮೊದಲ ಸಿಎಂ ಆಗಿ ಅಬ್ದುಲ್ಲಾ ಅಧಿಕಾರ ವಹಿಸಿಕೊಂಡ ನಂತರ ಅಮಿತ್ ಶಾ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸದಲ್ಲಿರುವ ಮುಖ್ಯಮಂತ್ರಿ, ವಿವಿಧ ಇಲಾಖೆಗಳ ಮೇಲೆ ಚುನಾಯಿತ ಸರ್ಕಾರದ ಅಧಿಕಾರಗಳ ಕುರಿತಾಗಿಯೂ ಸ್ಪಷ್ಟನೆ ಪಡೆದಿದ್ದಾರೆ ಎನ್ನಲಾಗಿದೆ.

J-K CM Omar meets with Amit Shah Casual Images
EVM ಬಗ್ಗೆ ಪಾಠ ಮಾಡಿದ್ದ ಒಮರ್ ಅಬ್ದುಲ್ಲಾ ಪಕ್ಷದಿಂದ INDI ಕೂಟಕ್ಕೆ ಮತ್ತೊಂದು ಮರ್ಮಾಘಾತ!

ಈ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ಅಕ್ಟೋಬರ್ 16 ರಂದು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದ ಒಮರ್ ಅಬ್ದುಲ್ಲಾ ಅಕ್ಟೋಬರ್ 23 ರಂದು ಶಾ ಅವರನ್ನು ಭೇಟಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com