
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ (AQI) ಮತ್ತೆ ಕುಸಿತ ಕಂಡಿದೆ.
ಈ ಬಾರಿ ದಾಖಲೆಯ ಮಟ್ಟದಲ್ಲಿ ವಾಯುಗುಣಮಟ್ಟ ಕುಸಿದಿದ್ದು, ಅತ್ಯಂತ ಕಳಪೆ ವಿಭಾಗದಲ್ಲಿದೆ. ವಾಯುಗುಣಮಟ್ಟ 409 ರಲ್ಲಿದೆ. ಶೂನ್ಯದಿಂದ 50 ವರೆಗೆ ವಾಯುಗುಣಮಟ್ಟ ಉತ್ತಮವೆಂದೂ, 51-100 ಸಮಾಧಾನಕರ, 101 ಹಾಗೂ 200 ನಡುವಿನದ್ದು ಮಧ್ಯಮ 201 ರಿಂದ 300 ಕಳಪೆ, 301 ರಿಂದ 400 ಅತ್ಯಂತ ಕಳಪೆ, 401- 500 ತೀವ್ರವಾಗಿ ಕುಸಿದಿರುವ ವಾಯುಗುಣಮಟ್ಟವಾಗಿದೆ.
ಗರಿಷ್ಠ ತಾಪಮಾನ 24.1 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದು, ಇದು ಸಾಮಾನ್ಯಕ್ಕಿಂತ ಮೂರು ಹಂತಗಳಿಗಿಂತ ಹೆಚ್ಚಳವಾಗಿದೆ. ಕನಿಷ್ಠ ತಾಪಮಾನ 7.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನಗರದಲ್ಲಿ ಬೆಳಿಗ್ಗೆ ಮಂಜಿನ ಅನುಭವವಾಗಿದ್ದು, ಆರ್ದ್ರತೆಯ ಮಟ್ಟ ಶೇಕಡಾ 68 ರಿಂದ 97 ರಷ್ಟಿದೆ ಎಂದು ಅದು ಹೇಳಿದೆ. ಸೋಮವಾರದಂದು ಲಘು ಮಳೆಯೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು IMD ಮುನ್ಸೂಚನೆ ನೀಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 20 ಮತ್ತು 7 ಡಿಗ್ರಿ ಸೆಲ್ಸಿಯಸ್‌ನಲ್ಲಿರುವ ನಿರೀಕ್ಷೆಯಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ GRAP 4 ನಿರ್ಬಂಧಗಳು ಜಾರಿಯಲ್ಲಿವೆ. ಡಿಸೆಂಬರ್ 16 ರಂದು,ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಚಳಿಗಾಲದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯ ಭಾಗವಾಗಿ GRAP IV ನಿರ್ಬಂಧಗಳನ್ನು ವಿಧಿಸಿದೆ. ಇದು ಎಲ್ಲಾ ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧವನ್ನು ಒಳಗೊಂಡಿದೆ.
4ನೇ ಹಂತದ ನಿರ್ಬಂಧಗಳು ದೆಹಲಿಗೆ ಅನಿವಾರ್ಯವಲ್ಲದ ವಸ್ತುಗಳನ್ನು ಸಾಗಿಸುವ ಮಾಲಿನ್ಯಕಾರಕ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸುತ್ತವೆ ಮತ್ತು X ಮತ್ತು XII ತರಗತಿಗಳನ್ನು ಹೊರತುಪಡಿಸಿ ಶಾಲಾ ತರಗತಿಗಳನ್ನು ಹೈಬ್ರಿಡ್ ಮೋಡ್‌ಗೆ ಬದಲಾಯಿಸುವುದನ್ನು ಕಡ್ಡಾಯಗೊಳಿಸುತ್ತವೆ. ಪರಿಷ್ಕೃತ ಗ್ರಾಪ್ ವೇಳಾಪಟ್ಟಿಯಡಿಯಲ್ಲಿ, ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ VI-IX ಮತ್ತು XI ತರಗತಿಗಳ ವಿದ್ಯಾರ್ಥಿಗಳಿಗೆ 4ನೇ ಹಂತದ ನಿರ್ಬಂಧಗಳ ಸಮಯದಲ್ಲಿ ಹೈಬ್ರಿಡ್ ಮೋಡ್‌ನಲ್ಲಿ (ದೈಹಿಕ ಮತ್ತು ಆನ್‌ಲೈನ್) ತರಗತಿಗಳನ್ನು ನಡೆಸಬೇಕಾಗುತ್ತದೆ.
Advertisement