ಭಾರತದಾದ್ಯಂತ 117 ಪ್ರಯೋಗಾಲಯಗಳನ್ನು ಸಂಪರ್ಕಿಸುವ ಇ-ಫೋರೆನ್ಸಿಕ್ಸ್ ಪ್ಲಾಟ್‌ಫಾರ್ಮ್ ಗೆ MHA ಚಾಲನೆ

ಚಂಡೀಗಢ, ದೆಹಲಿ, ಕೋಲ್ಕತ್ತಾ, ಕಮ್ರೂಪ್, ಭೋಪಾಲ್ ಮತ್ತು ಪುಣೆಯಲ್ಲಿ ಒಟ್ಟು 126.84 ಕೋಟಿ ರೂ.ಗಳೊಂದಿಗೆ ಸಿಎಫ್‌ಎಸ್‌ಎಲ್‌ಗಳಲ್ಲಿ ಆರು ಹೆಚ್ಚುವರಿ ಎನ್‌ಸಿಎಫ್‌ಎಲ್‌ಗಳನ್ನು ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ.
Representational image
ಸಾಕ್ಷ್ಯ ಸಂಗ್ರಹ ಪ್ರಕ್ರಿಯೆonline desk
Updated on

ನವದೆಹಲಿ: ಕೇಂದ್ರ ಗೃಹ ಸಚಿವಾಲಯ (MHA) ಕೇಂದ್ರ ಮತ್ತು ರಾಜ್ಯಗಳೆರಡೂ 117 ವಿಧಿವಿಜ್ಞಾನ ಪ್ರಯೋಗಾಲಯಗಳೊಂದಿಗೆ ಸಂಪರ್ಕ ಹೊಂದಿದ ಇ-ಫೊರೆನ್ಸಿಕ್ಸ್ ಐಟಿ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಗತಗೊಳಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ 'ಡಿಎನ್‌ಎ ಅನಾಲಿಸಿಸ್ ಮತ್ತು ಸೈಬರ್ ಫೋರೆನ್ಸಿಕ್ ಸಾಮರ್ಥ್ಯಗಳನ್ನು' ಮತ್ತಷ್ಟು ಬಲಪಡಿಸುವ ಸಲುವಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದಿಂದ ಪಡೆದಿರುವ ಒಟ್ಟು 30 ಯೋಜನೆಗಳಿಗೆ 245.29 ಕೋಟಿ ರೂ.ಗಳನ್ನು ಅನುಮೋದಿಸಿದ ಒಟ್ಟು ಮೊತ್ತದಲ್ಲಿ ಇದುವರೆಗೆ ರೂ 128.28 ಕೋಟಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೋರೆನ್ಸಿಕ್ ಅನಾಲಿಸಿಸ್ ನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಪ್ರಯೋಗಾಲಯಗಳಲ್ಲಿನ ಬ್ಯಾಕ್‌ಲಾಗ್‌ಗಳನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ, MHA ಭೋಪಾಲ್, ಗುವಾಹಟಿ ಮತ್ತು ಪುಣೆಯಲ್ಲಿ ಮೂರು ಹೊಸ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು (CFSLs) ಸ್ಥಾಪಿಸಿದೆ ಮತ್ತು ಕೋಲ್ಕತ್ತಾದಲ್ಲಿ ಅಸ್ತಿತ್ವದಲ್ಲಿರುವ CFSL ನ್ನು ಇತ್ತೀಚಿನ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಉಪಕರಣಗಳೊಂದಿಗೆ ನವೀಕರಿಸಲಾಗಿದೆ.

ಚಂಡೀಗಢ, ದೆಹಲಿ, ಕೋಲ್ಕತ್ತಾ, ಕಮ್ರೂಪ್, ಭೋಪಾಲ್ ಮತ್ತು ಪುಣೆಯಲ್ಲಿ ಒಟ್ಟು 126.84 ಕೋಟಿ ರೂ.ಗಳೊಂದಿಗೆ ಸಿಎಫ್‌ಎಸ್‌ಎಲ್‌ಗಳಲ್ಲಿ ಆರು ಹೆಚ್ಚುವರಿ ಎನ್‌ಸಿಎಫ್‌ಎಲ್‌ಗಳನ್ನು ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ. ಹಿರಿಯ ಅಧಿಕಾರಿಯೊಬ್ಬರು, “ಇದುವರೆಗೆ 32,524 ತನಿಖಾಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಎದುರಿಸಲು ತರಬೇತಿ ನೀಡಲಾಗಿದೆ. MHA ಈ ತರಬೇತಿಯ ಭಾಗವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 18,020 'ಲೈಂಗಿಕ ಆಕ್ರಮಣದ ಸಾಕ್ಷ್ಯ ಸಂಗ್ರಹ ಕಿಟ್'ಗಳನ್ನು ವಿತರಿಸಿದೆ.

ಗಾಂಧಿನಗರ (ಗುಜರಾತ್) ಮತ್ತು ದೆಹಲಿಯಲ್ಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಆರಂಭಿಕ ಕ್ಯಾಂಪಸ್‌ಗಳ ಜೊತೆಗೆ, ಗೋವಾ, ಅಗರ್ತಲಾ ಭೋಪಾಲ್ (ಮಧ್ಯಪ್ರದೇಶ), ಧಾರವಾಡ (ಕರ್ನಾಟಕ), ಮತ್ತು ಗುವಾಹಟಿ (ಅಸ್ಸಾಂ) ಗಳಲ್ಲಿ ಎನ್‌ಎಫ್‌ಎಸ್‌ಯುನ ಐದು ಹೆಚ್ಚುವರಿ ಆಫ್-ಕ್ಯಾಂಪಸ್‌ಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Representational image
ಬೆಂಗಳೂರು ಮಹಿಳೆಯ ಬರ್ಬರ ಹತ್ಯೆ ಪ್ರಕರಣ: ಮೃತದೇಹ 40 ತುಂಡು; ತಜ್ಞರಿಗೆ ಸವಾಲಾಗಿ ಪರಿಣಮಿಸಿದ ಮರಣೋತ್ತರ ಪರೀಕ್ಷೆ..!

ಆದಾಗ್ಯೂ, ಈ ಹೆಚ್ಚುವರಿ ಕ್ಯಾಂಪಸ್‌ಗಳು "ಶಾಶ್ವತ ಕ್ಯಾಂಪಸ್‌ಗಳ ನಿರ್ಮಾಣದವರೆಗೆ ಪ್ರಸ್ತುತ ಟ್ರಾನ್ಸಿಟ್ ಕ್ಯಾಂಪಸ್‌ಗಳಿಂದ ಕಾರ್ಯನಿರ್ವಹಿಸುತ್ತಿವೆ" ಎಂದು ಅಧಿಕಾರಿ ಹೇಳಿದರು. ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ 'ರಾಷ್ಟ್ರೀಯ ವಿಧಿವಿಜ್ಞಾನ ಮೂಲಸೌಕರ್ಯ ವರ್ಧನೆ ಯೋಜನೆ'ಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.

ಏತನ್ಮಧ್ಯೆ, ಫೋರೆನ್ಸಿಕ್ ಪರೀಕ್ಷೆಯಲ್ಲಿ ಗುಣಮಟ್ಟ ಮತ್ತು ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳಲು, MHA ಯ ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯವು 'NABL ಮಾನದಂಡಗಳ (ISO 17025) ಪ್ರಕಾರ ಪ್ರಯೋಗಾಲಯಗಳ ಮಾನ್ಯತೆಗಾಗಿ ಗುಣಮಟ್ಟದ ಕೈಪಿಡಿಗಳು' ಮತ್ತು 'ವಿಧಿ ವಿಜ್ಞಾನದ ಒಂಬತ್ತು ವಿಭಾಗಗಳಲ್ಲಿ ಕೆಲಸದ ಕಾರ್ಯವಿಧಾನದ ಕೈಪಿಡಿಗಳು' ಸೇರಿದಂತೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

ಮಾರ್ಗಸೂಚಿಗಳು ತನಿಖಾ ಅಧಿಕಾರಿಗಳು (IOs) ಮತ್ತು ವೈದ್ಯಕೀಯ ಅಧಿಕಾರಿಗಳು (MOs) ಗಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಫೋರೆನ್ಸಿಕ್ ಪುರಾವೆಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಸಾಗಣೆಯ ಮಾನದಂಡಗಳನ್ನು ಸಹ ಸೂಚಿಸುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com