
ಚಂಡೀಗಢ: ಹೊಟೇಲ್ ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ದುಷ್ಕರ್ಮಿಗಳು ಮಹಿಳೆ ಸೇರಿದಂತೆ ಮೂವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಹರಿಯಾಣದ ಪಂಚಕುಲಾದಲ್ಲಿ ನಡೆದಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೃತರನ್ನು ದೆಹಲಿಯ ವಿಕ್ಕಿ, ವಿಪಿನ್ ಮತ್ತು ಹಿಸಾರ್ ನ ನಿಯಾ ಎಂದು ಗುರುತಿಸಲಾಗಿದೆ. ಈ ಮೂವರು ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ಗುಂಡಿನ ದಾಳಿ ನಡೆದಿದೆ ಎಂದು ಪಂಚಕುಲ ಸಹಾಯಕ ಆಯುಕ್ತ ಅರವಿಂದ್ ಕಾಂಬೋಜ್ ತಿಳಿಸಿದ್ದಾರೆ.
ಸುಮಾರು 30 ವರ್ಷದ ವಿಕ್ಕಿ ಕ್ರಿಮಿನಲ್ ಹಿನ್ನೆಲೆವುಳ್ಳವನಾಗಿದ್ದು, ಹಲವು ಕೇಸ್ ಗಳನ್ನು ಎದುರಿಸುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಇತರ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹತ್ಯೆ ಹಿಂದಿನ ಉದ್ದೇಶ ತಕ್ಷಣ ಸ್ಪಷ್ಟವಾಗಿಲ್ಲವಾದರೂ ಹಳೆ ದ್ವೇಷ ಇರಬಹುದು ಎಂದು ಅವರು ಶಂಕಿಸಿದ್ದಾರೆ.
Advertisement