Girl Still Stuck Inside 700-Feet Rajasthan Borewell
ಕೊಳವೆ ಬಾವಿಗೆ ಬಿದ್ದ ಬಾಲಕಿ

ರಾಜಸ್ತಾನ ಬೋರ್ವೆಲ್ ದುರಂತ: 7 ದಿನ ಕಳೆದರೂ ಮುಗಿಯದ ಕಾರ್ಯಾಚರಣೆ; ಮಗು ಜೀವಂತ ಆಸೆ ಕ್ಷೀಣ!

ರಾಜಸ್ತಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ಮೂರು ವರ್ಷದ ಚೇತನಾ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೇ ಬಿಡಲಾಗಿತ್ತು.
Published on

ಜೈಪುರ: ರಾಜಸ್ತಾನದಲ್ಲಿ ಸಂಭವಿಸಿದ ಬೋರ್ವೆಲ್ ದುರಂತ ಸಂಭವಿಸಿ ಬರೊಬ್ಬರಿ 7 ದಿನಗಳೇ ಕಳೆದರೂ ಕಾರ್ಯಾಚರಣೆ ಮಾತ್ರ ಇನ್ನೂ ಮುಕ್ತಾಯವಾಗಿಲ್ಲ. ಮಗು ಜೀವಂತವಾಗಿರುವ ಆಸೆ ದಿನೇ ದಿನೇ ಕರಗುತ್ತಿದೆ.

ಹೌದು.. ರಾಜಸ್ತಾನದ ಕಿರಾತಪುರದ ಬದಿಯಾಲಿ ಧಾನಿಯಲ್ಲಿ ಮೂರು ವರ್ಷದ ಚೇತನಾ ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ನೀರಿಲ್ಲದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೇ ಬಿಡಲಾಗಿತ್ತು. ಇದರ ಪಕ್ಕ ಗಿಡ ಗಂಟೆಗಳು, ಹುಲ್ಲುಗಳು ಬೆಳೆದು ಕೊಳವೆ ಬಾವಿಯ ಯಾವುದೇ ಗುರುತು ಇರಲಿಲ್ಲ. ಇದೇ ಕೊಳವೆ ಬಾವಿ ಪಕ್ಕದಲ್ಲಿ ಮಗು ಚೇತನಾ ತನ್ನ ತಂದೆ ಜೊತೆ ಆಟವಾಡುತ್ತಿರುವಾಗ ಬಿದ್ದಿದ್ದಾಳೆ.

ಈ ಘಟನೆ ನಡೆದು ಬರೊಬ್ಬರಿ 7 ದಿನಗಳೇ ಗತಿಸಿಹೋದರೂ ಇನ್ನೂ ಕೂಡ ಬಾಲಕಿಯಲ್ಲಿ ಕೊಳವೆಬಾವಿಯಿಂದ ಹೊರತೆಗೆಯುವ ಕಾರ್ಯಾ ಇನ್ನೂ ಆಗಿಲ್ಲ. ಬಾಲಕಿಯನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಎಲ್ಲಾ ಸಂಭಾವ್ಯ ಆಯ್ಕೆಗಳನ್ನು ಪ್ರಸ್ತುತ ಅನ್ವೇಷಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

Girl Still Stuck Inside 700-Feet Rajasthan Borewell
'ಅಪ್ಪಾ ನನ್ನ ಕಾಪಾಡು': 700 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಅಂಗಲಾಚುತ್ತಿರುವ 3 ವರ್ಷದ ಬಾಲಕಿ, ರಕ್ಷಣೆಗೆ ಹುಕ್ ಟೆಕ್ನಿಕ್!

ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲಾಧಿಕಾರಿ ಕಲ್ಪನಾ ಅಗರ್ವಾಲ್ ಅವರು ಈ ಬಗ್ಗೆ ಮಾತನಾಡಿ, 'ಸುರಂಗ ಮಾರ್ಗದ ಕಲ್ಲಿನ ಭೂಪ್ರದೇಶದಿಂದಾಗಿ ಹುಡುಗಿಯನ್ನು ತಲುಪಲು ಸುರಂಗ ನಿರ್ಮಾಣವು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚುವರಿಯಾಗಿ, ಸುರಂಗದ ಮೇಲ್ಭಾಗ ಮತ್ತು ಕೆಳಭಾಗದ ನಡುವಿನ ಗಮನಾರ್ಹ ತಾಪಮಾನ ವ್ಯತ್ಯಾಸವು ತೊಂದರೆಗಳನ್ನುಂಟುಮಾಡುತ್ತಿದೆ.

ನಾವು ಸುರಂಗವನ್ನು ನಿರ್ಮಿಸುತ್ತಿದ್ದೇವೆ... ಸುರಂಗ ಮಾರ್ಗವು ಕಲ್ಲಿನಿಂದ ಕೂಡಿರುವುದರಿಂದ ಅದನ್ನು ಕೊರೆಯುವುದು ಸವಾಲಾಗಿದೆ... ಮೇಲ್ಭಾಗ ಮತ್ತು ಕೆಳಭಾಗದಲ್ಲಿ ತಾಪಮಾನದಲ್ಲಿ ಭಾರಿ ವ್ಯತ್ಯಾಸವಿದೆ... ಎಲ್ಲಾ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಮತ್ತು ಚರ್ಚಿಸಲಾಗುತ್ತಿದೆ... ಅತ್ಯುತ್ತಮ ಉಪಕರಣಗಳು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅವರು ಹೇಳಿದರು.

ಗುರುವಾರ ರಾತ್ರಿಯಿಂದ ನಿರಂತರ ಮಳೆಯಿಂದಾಗಿ ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ನಲ್ಲಿ ಸಿಲುಕಿರುವ ಮೂರು ವರ್ಷದ ಬಾಲಕಿಯನ್ನು ರಕ್ಷಿಸುವ ಪ್ರಯತ್ನಗಳು ತೀವ್ರವಾಗಿ ಅಡ್ಡಿಯಾಗಿವೆ. ಹಾಲಿ ಮಳೆಯು ಸುತ್ತಮುತ್ತಲಿನ ಮಣ್ಣನ್ನು ಜಾರುವಂತೆ ಮಾಡಿದೆ. ವೆಲ್ಡಿಂಗ್ ಮತ್ತು ಕೇಸಿಂಗ್ ಪೈಪ್ ಅನ್ನು ಕೆಳಕ್ಕೆ ಇಳಿಸುವುದು ಸೇರಿದಂತೆ ನಿರ್ಣಾಯಕ ಕಾರ್ಯಾಚರಣೆಗಳನ್ನು ಸಂಕೀರ್ಣಗೊಳಿಸಿದೆ ಎಂದು ಅವರು ಹೇಳಿದರು.

ಕರಗಿದ ಮಗು ಜೀವಂತ ಆಸೆ!

ಇನ್ನು ಮಗು ಬೋರ್ವೆಲ್ ಗೆ ಬಿದ್ದು ಬರೊಬ್ಬರಿ 7 ದಿನಗಳೇ ಕಳೆದರೂ ಇನ್ನೂ ಮಗುವನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಮಗು ಜೀವಂತವಾಗಿರುವ ಆಸೆ ದಿನೇ ದಿನೇ ಕರಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com